Slide
Slide
Slide
previous arrow
next arrow

ಸಾಹಿತ್ಯ ಕ್ಷೇತ್ರದಲ್ಲಿ ಅಂಕೋಲೆ ಕೊಡುಗೆ ಅನನ್ಯ: ಪ್ರೊ.ಕೆ.ವಿ.ನಾಯಕ

300x250 AD

ಅಂಕೋಲಾ: ಸಾಹಿತ್ಯ ಕ್ಷೇತ್ರದಲ್ಲಿ ಅಂಕೋಲೆಯ ಸಾಹಿತಿಗಳು ತನ್ನದೇ ಆದ ಕೊಡುಗೆ ನೀಡುವ ಮೂಲಕ ಕನ್ನಡ ಸಾರಸ್ವತ ಲೋಕದ ಗರಿಮೆ ಹೆಚ್ಚಿಸುವ ಕಾರ್ಯ ಮಾಡಿದ್ದಾರೆ ಎಂದು ಕರ್ನಾಟಕ ಸಂಘದ ಗೌರವಾಧ್ಯಕ್ಷ, ನಿವೃತ್ತ ಪ್ರಾಧ್ಯಾಪಕ ಪ್ರೊ.ಕೆ.ವಿ.ನಾಯಕ ಅಭಿಮತ ವ್ಯಕ್ತಪಡಿಸಿದರು.

ಅವರು ಇಲ್ಲಿಯ ಕನ್ನಡ ಭವನದಲ್ಲಿ ಆಯೋಜಿಸಲಾಗಿದ್ದ ದಿನಕರ ದೇಸಾಯಿ ಸ್ಮರಣೆ, ಸನ್ಮಾನ ಮತ್ತು ಬಹುಮಾನ ವಿತರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಿಕ್ಷಣ ತಜ್ಞ ದಿನಕರ ದೇಸಾಯಿಯಂಥವರ ಕಾರಣದಿಂದಾಗಿ ಅಂದು ಶಿಕ್ಷಣ ಸಾರ್ವತ್ರಿಕಗೊಂಡು ಹಲವಾರು ಪ್ರತಿಭೆಗಳು ನಾಡಿನ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎಂದರು.

ಸನ್ಮಾನ- ಬಹುಮಾನ: ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಗಜಲ್ ಸಾಹಿತ್ಯ ಪ್ರಶಸ್ತಿ ಪುರಸ್ಕೃತ ಶ್ರೀದೇವಿ ಕೆರೆಮನೆ ಮತ್ತು ವಿಭಾ ಸಾಹಿತ್ಯ ಪ್ರಶಸ್ತಿ ಪುರಸ್ಕೃತ ರೇಣುಕಾ ರಮಾನಂದ ಅವರನ್ನು ಸನ್ಮಾನಿಸಲಾಯಿತು. ಕರ್ನಾಟಕ ಸಂಘ ಮತ್ತು ಕೆ.ಎಲ್.ಇ ಶಿಕ್ಷಣ ಮಹಾವಿದ್ಯಾಲಯದ ವತಿಯಿಂದ ಏರ್ಪಡಿಸಲಾಗಿದ್ದ ಬೇಂದ್ರೆ ಬದುಕು ಬರಹ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಮಹಿಮಾ ಗೌಡ, ದ್ವಿತೀಯ ನೀಹಾ ಪಡವಳಕರ್ ತೃತೀಯ ಸಂಗೀತಾ ವಾಲ್ಮಿಕಿ ಪಡೆದರು. ಸ್ಪರ್ಧೆಯಲ್ಲಿ ಪಾಲ್ಗೊಂಡ ಎಲ್ಲ 26 ಸ್ಪರ್ಧಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.

300x250 AD

ಕರ್ನಾಟಕ ಸಂಘದ ಅಧ್ಯಕ್ಷ ವಿಠ್ಠಲದಾಸ ಕಾಮತ್ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯದರ್ಶಿ ಮಹೇಶ ನಾಯಕ ವಂದಿಸಿದರು. ಸನ್ಮಾನಿತರ ಪರಿಚಯವನ್ನು ಡಾ.ವಿನಾಯಕ ಹೆಗಡೆ, ಮಂಜುನಾಥ ಇಟಗಿ ಮಾಡಿದರು. ಖಜಾಂಚಿ ಎಸ್.ಆರ್.ನಾಯಕ ನಿರ್ವಹಿಸಿದರು. ಕರ್ನಾಟಕ ಸಂಘದ ಪದಾಧಿಕಾರಿಗಳಾದ ವಿಠ್ಠಲ ಗಾಂವಕರ್, ರವೀಂದ್ರ ಕೇಣಿ, ಶ್ರೀಧರ ನಾಯಕ, ಪ್ರವೀರ ನಾಯಕ, ಪುಷ್ಪಾ ನಾಯ್ಕ ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top