Slide
Slide
Slide
previous arrow
next arrow

ಮನುಷ್ಯನಿಗೆ ಸೇವೆಯಲ್ಲಿ ನಿವೃತ್ತಿ ಇಲ್ಲ: ಶಾಂತರಾಮ ಸಿದ್ದಿ

300x250 AD

ಯಲ್ಲಾಪುರ: ವಿಧಾನ ಪರಿಷತ್ ಸದಸ್ಯ ಶಾಂತರಾಮ ಸಿದ್ದಿಯವರು ತಾಲ್ಲೂಕಿನ ಭರತನಹಳ್ಳಿಯ ಪ್ರಗತಿ ಶಿಕ್ಷಣ ಅಭಿವೃದ್ಧಿ ಸಂಸ್ಥೆ, ಪ್ರಗತಿ ವಿದ್ಯಾಲಯ ಭರತನಹಳ್ಳಿಯಲ್ಲಿ 39 ವಷ 10 ತಿಂಗಳುಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗುತ್ತಿರುವ ಸಂತೋಷ ಶೇಟ್ ಅವರಿಗೆ ಅಭಿನಂದನಾ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅಭಿನಂದಿಸಿದರು.

ನ0ತರ ಮಾತನಾಡಿದ ಅವರು, ಮನುಷ್ಯನಿಗೆ ವೃತಿಯಲ್ಲಿ ಮಾತ್ರ ನಿವೃತ್ತಿ ಇರುತ್ತೆ, ಸೇವೆಯಲ್ಲಿ ಅಲ್ಲ. ಸಂತೋಷ ಶೇಟ್ ಅವರ ಶಿಕ್ಷಣದ ಸೇವೆ ಬೇರೆ ಬೇರೆ ರೀತಿಯಲ್ಲಿ ಸದಾ ಮುಂದುವರಿಯುಲಿ. ಅವರ ನಿವೃತ್ತಿ ಜೀವನ ಉತ್ತಮವಾಗಿರಲಿ ಎಂದು ಶುಭ ಹಾರೈಸಿದರು.

300x250 AD

ಈ ಸಂದರ್ಭದಲ್ಲಿ ಪ್ರಗತಿ ಶಿಕ್ಷಣ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಹೇರಂಭ ಹೆಗಡೆ, ಸಂಸ್ಥೆಯ ನಿವೃತ್ತ ಮುಖ್ಯಾಧ್ಯಾಪಕರುಗಳಾದ ವಿ.ಆರ್.ಭಟ್, ಗಣೇಶ ಭಟ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿದ್ವಾನ್ ಸುಬ್ರಮಣ್ಯ ಭಟ್, ಹಳೆಯ ವಿದ್ಯಾರ್ಥಿಗಳು ಹಾಗೂ ಗುರುಪ್ರಸಾದ ಪ್ರೌಢಶಾಲೆ ಮಲ್ಲಾಪುರದ ವಿಶ್ರಾಂತ ಮುಖ್ಯಾಧ್ಯಾಪಕರಾದ ಎಂ.ಟಿ.ಗೌಡ, ಕುಂದರ್ಗಿ ಪಂಚಾಯತ ಉಪಾಧ್ಯಕ್ಷೆ ಸೌಮ್ಯ ನಾಯ್ಕ, ಪ್ರಗತಿ ಸಂಸ್ಥೆಯ ಗೌರವ ಕಾರ್ಯದರ್ಶಿ ನಾಗೇಂದ್ರ ಹೆಗಡೆ ಕೊಟ್ಟಳ್ಳಿ ಹಾಗೂ ಆಡಳಿತ ಮಂಡಳಿ ಸದಸ್ಯರು, ಪ್ರಗತಿ ವಿದ್ಯಾಲಯದ ಮುಖ್ಯಾಧ್ಯಾಪಕ ವಿನಾಯಕ ಆರ್ ಹೆಗಡೆ ಹಾಗೂ ಶಿಕ್ಷಕ ವೃಂದ, ವಿದ್ಯಾರ್ಥಿ ಬಳಗ, ಹಳೆಯ ವಿದ್ಯಾರ್ಥಿಗಳು, ಸ್ಥಳೀಯರು ಇದ್ದರು.

Share This
300x250 AD
300x250 AD
300x250 AD
Back to top