Slide
Slide
Slide
previous arrow
next arrow

ಮನೆಯಂಗಳದಲ್ಲಿ ಸಂಘ ನೀಡಿದ ಗೌರವ ಸಂತಸ ತಂದಿದೆ: ರಾಜಮ್ಮ ನಾಯಕ

300x250 AD

ಅಂಕೋಲಾ: ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮೇಲಿನಗುಳಿಯಲ್ಲಿ ವಯೋನಿವೃತ್ತಿ ಹೊಂದಿದ ರಾಜಮ್ಮ ನಾಯಕರವರನ್ನು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಘಟಕದ ವತಿಯಿಂದ ಸನ್ಮಾನಿಸಿ ಗೌರವಿಸಿ ಬೀಳ್ಕೊಡಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ರಾಜಮ್ಮ ನಾಯಕ, ನಿರಂತರ 39 ವಷಗಳ ಶಾಲಾ ವಿದ್ಯಾರ್ಥಿಗಳ ಒಡನಾಟ ಅವಿಸ್ಮರಣೀಯವಾದದು. ಇಂದು ಹೃದಯ ತುಂಬಿ ಬಂದಿದೆ. ಧನ್ಯತಾಭಾವದಿಂದ ಕಂಡ ಎಲ್ಲರನ್ನೂ ನೆನಪಿಸಿಕೊಳ್ಳುತ್ತೇನೆ. ನನ್ನ ಸಂಘ ನನ್ನ ಮನೆಬಾಗಿಲಿಗೆ ಬಂದು ನನ್ನನ್ನು ಗೌರವಿಸಿ ಬೀಳ್ಕೊಟ್ಟಿರುವುದು ಸಂತಸವನ್ನು ತಂದಿದೆ ಎಂದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ತಾಲೂಕು ಘಟಕದ ಅಧ್ಯಕ್ಷ ಜಗದೀಶ ಜಿ.ನಾಯಕ ಹೊಸ್ಕೇರಿ ಸನ್ಮಾನಿಸಿ ಮಾತನಾಡಿ, ರಾಜಮ್ಮ ನಾಯಕರ ಸರಳ, ಸಜ್ಜನ ವ್ಯಕ್ತಿತ್ವ ಶಿಕ್ಷಕರಿಗೆ ಆದರ್ಶಪ್ರಾಯ. ಇವರು ಶಿಕ್ಷಣ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆ ಸ್ಮರಣೀಯವಾದದು. ತಮ್ಮ ಮಗಳಾದ ಹೇಮಾ ನಾಯಕರನ್ನು ಸರಕಾರಿ ಶಾಲೆಯಲ್ಲಿ ಓದಿಸಿ ಐಎಎಸ್‌ನಂತಹ ಉನ್ನತ ಹುದ್ದೆಯಲ್ಲಿ ಸೇವೆ ಸಲ್ಲಿಸುವಂತೆ ಮಾಡಿರುವಲ್ಲಿ ರಾಜಮ್ಮನಾಯಕ ದಂಪತಿಗಳ ಕೊಡುಗೆ ಅಪಾರವಾದುದು. ಇಡೀ ಶಿಕ್ಷಕರ ಸಮುದಾಯ ಹೆಮ್ಮೆ ಪಡುತ್ತದೆ ಎಂದರು.

300x250 AD

ಸಂಘದ ಪ್ರಧಾನ ಕಾರ್ಯದರ್ಶಿ ರಾಜು ಎಚ್ ನಾಯಕ ಸ್ವಾಗತಿಸಿದರು. ಉಪಾಧ್ಯಕ್ಷ ಮಂಜುನಾಥ ವಿ.ನಾಯಕ ವಂದಿಸಿದರು. ಶಾಂತರಾಮ ನಾಯಕ, ಪವನ ಶಾಂತಾರಾಮ ನಾಯಕ ಸಹಕರಿಸಿದರು. ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ವಿ ಟಿ ನಾಯಕ ,ಸುಂಕಸಾಳ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸದಾನಂದ ನಾಯಕ, ಶಾಲಿನಿ ನಾಯಕ, ಮೀನಾ ನಾಯಕ, ಶೇಖರ ಗಾಂವಕರ ಅಭಿನಂದಿಸಿ ಮಾತನಾಡಿದರು. ಸಂಘದ ಉಪಾಧ್ಯಕ್ಷೆ ಭಾರತಿ ಬಿ ನಾಯಕ ಸದಸ್ಯರಾದ ಆನಂದು ವಿ ನಾಯ್ಕ, ಸಂಜೀವ ಆರ್ ನಾಯಕ, ವಿನಾಯಕ ಪಿ.ನಾಯ್ಕ, ವೆಂಕಮ್ಮ ನಾಯಕ, ಶೋಭಾ ನಾಯಕ ರಾಜಮ್ಮ ನಾಯ್ಕರ ಕುಟುಂಬದ ಅಭಿಮಾನಿಗಳಾದ ರವೀಂದ್ರ ಬಿ.ನಾಯಕ, ಮಹೇಶ ನಾಯಕ ಹಿಚ್ಕಡ, ರಾಮಕೃಷ್ಣ ನಾಯಕ ಮಹೇಶ ನಾಯಕ ವಂದಿಗೆ, ಶಾಂತಲಾ ನಾಯಕ, ದೀಪಾ ನಾಯಕ, ವೀಣಾ ನಾಯಕ, ಸವಿತಾ ನಾಯಕ, ಸುಧಾ ನಾಯಕ ಮುಂತಾದವರು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top