Slide
Slide
Slide
previous arrow
next arrow

ನಾಲ್ಕು ಗಂಟೆಗೂ ಅಧಿಕ ಕಾಲ ಸಾರ್ವಜನಿಕ ಅಹವಾಲು ಆಲಿಸಿದ ಸಚಿವ ವೈದ್ಯ

300x250 AD

ಹೊನ್ನಾವರ: ಪಟ್ಟಣದ ಪ್ರವಾಸಿಮಂದಿರದಲ್ಲಿರುವ ಸಚಿವರ ಕಾರ್ಯಲಯದಲ್ಲಿ ರಾಜ್ಯದ ಬಂದರು ಮೀನುಗಾರಿಕೆ ಮತ್ತು ಒಳನಾಡು ಜಲಸಾರಿಗೆ ಸಚೀವರಾದ ಮಂಕಾಳ ವೈದ್ಯ ಸತತ ನಾಲ್ಕು ಗಂಟೆಗೂ ಅಧಿಕ ಕಾಲ ಸಾರ್ವಜನಿಕರ ಅಹವಾಲನ್ನು ಸ್ವೀಕರಿಸಿದರು.

ಭಟ್ಕಳ ಕ್ಷೇತ್ರವಲ್ಲದೇ ಪಕ್ಕದ ಕುಮಟಾ ಕ್ಷೇತ್ರ ವ್ಯಾಪ್ತಿಯ ವೈಯಕ್ತಿಕ ಹಾಗೂ ತಮ್ಮೂರಿನ ಸಮಸ್ಯೆಯನ್ನು ಹೊತ್ತು ಬಂದ ಸಾರ್ವಜನಿಕರು ಹಾಗೂ ಪಕ್ಷದ ಕಾರ್ಯಕರ್ತರ ಸಮಸ್ಯೆಯನ್ನು ತಾಳ್ಮೆಯಿಂದಲೇ ಆಲಿಸಿದರು. ಸರಿಸುಮಾರು 200ಕ್ಕೂ ಹೆಚ್ಚಿನ ಅಹವಾಲನ್ನು ಸ್ವೀಕರಿಸಿ ಹಲವು ಸಮಸ್ಯೆಗಳಿಗೆ ಸ್ಥಳದಲ್ಲೆ ಪರಿಹಾರ ಸೂಚಿಸಿ ಇಲಾಖಾವಾರು ಸಮಸ್ಯೆಯನ್ನು ಆಪ್ತಕಾರ್ಯದರ್ಶಿ ಮೂಲಕ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು. ಸಾಯಂಕಾಲ 5 ಗಂಟೆಯಿಂದ ರಾತ್ರಿ 9ರವರೆಗೂ ಅಹವಾಲು ಸ್ವೀಕಾರ ನಡೆಯಿತು.

ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, ಹೊನ್ನಾವರ, ಭಟ್ಕಳ, ಕಾರವಾರ, ಬೆಂಗಳೂರಿನ ಕಛೇರಿಯಲ್ಲಿಯೇ ತಿಂಗಳಿನಲ್ಲಿ ಒಂದು ದಿನ ಇದ್ದು, ಸಾರ್ವಜನಿಕರ ಸಮಸ್ಯೆ ಬಗೆಹರಿಸುವ ಉತ್ಸುಕತೆ ಹೊಂದಿದ್ದೇನೆ. ಸರ್ಕಾರಿ ರಜೆಯ ಹೊರತಾಗಿ ಉಳಿದ ದಿನ ಆಪ್ತ ಕಾರ್ಯದರ್ಶಿಯವರು ಕಛೇರಿಯಲ್ಲಿ ಇರಲಿದ್ದು, ಅವರು ಕೂಡಾ ನನ್ನ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸುತ್ತಾರೆ. ಈ ದಿನದ ಅಹವಾಲು ಸ್ವೀಕಾರ ನೋಡಿ ಬೇಸರವಾಯಿತು. ಇಷ್ಟು ಜನರು ಸಮಸ್ಯೆಯಲ್ಲಿ ಇದ್ದಾರೆ ಎಂದು, ಇವರ ಸಮಸ್ಯೆಗೆ ಪರಿಹಾರ ನೀಡಲು ಜನರು ಅಧಿಕಾರ ನೀಡಿದ್ದಾರೆ ಅದನ್ನು ಬಗೆಹರಿಸುತ್ತೇನೆ ಎಂದು ಭರವಸೆ ನೀಡಿದರು.

ಅರಣ್ಯ ಇಲಾಖೆಯಿಂದ ಅತಿಕ್ರಮಣದಾರರಿಗೆ ಆಗುತ್ತಿರುವ ಸಮಸ್ಯೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕ್ಷೇತ್ರದಲ್ಲಿ 25 ಸಾವಿರದಷ್ಟು ಕುಟುಂಬದವರು ಅತಿಕ್ರಮಣದಾರರಿದ್ದು, ಈ ಹಿಂದೆ ಶಾಸಕನಾಗಿದ್ದಾಗ ಜಿಪಿಎಸ್ ಮಾಡಿ 2500 ಪಟ್ಟಾ ವಿತರಣೆಯಾಗಿದೆ. ಅಂಗನವಾಡಿ, ಶಾಲೆ, ಆಸ್ಪತ್ರೆ, ರುದ್ರಭೂಮಿ,ಕ್ರೀಡಾಂಗಣಕ್ಕೆ ಹಕ್ಕುಪತ್ರ ನೀಡಲಾಗಿತ್ತು. ನಂತರದ ಚುನಾವಣೆಯಲ್ಲಿ ಸೋತ ಬಳಿಕ ಜಿಪಿಎಸ್ ಕಥೆಯು ಮುಗಿಯಿತು. ಸಮಿತಿಯ ಕಾರ್ಯಚಟುವಟಿಕೆಯೆ ನಿಂತು ಹೊಗಿದೆ. ಈಗಾಗಲೇ ಅರಣ್ಯ ಅಧಿಕಾರಿಗಳಿಗೆ ಜಿ.ಪಿ.ಎಸ್. ಆದ ಕುಟುಂಬದವರಿಗೆ ಯಾವುದೇ ತೊಂದರೆ ನೀಡಬಾರದೆಂದು ಸೂಚಿಸಿದ್ದು, ಮುಂದಿನ ದಿನದಲ್ಲಿ ಅವರಿಗೂ ಹಕ್ಕುಪತ್ರ ನೀಡುವ ಮೂಲಕ ನ್ಯಾಯ ಒದಗಿಸುವ ಭರವಸೆ ನೀಡಿದರು.

300x250 AD

ಈಗಾಗಲೇ ನಾಲ್ಕು ತಿಂಗಳು ಕಳೆದಿದೆ. ಗ್ಯಾರಂಟಿ ಯೋಜನೆ ಅನುಷ್ಠಾನದ ಮೂಲಕ ತಾಲೂಕಿಗೆ 25 ಕೋಟಿಯಷ್ಟು ಹಣ ಬಂದಿದೆ. ಇದರ ಜೊತೆಗೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಾಡಿದ ಸಾಲವನ್ನು ತೀರಿಸುತ್ತಿದ್ದೇವೆ ಎಂದು ಕ್ಷೇತ್ರದಲ್ಲಿ ಅಭಿವೃದ್ದಿ ಕಾರ್ಯ ನಡೆಯುತ್ತಿಲ್ಲ ಎನ್ನುವ ವಿರೋಧ ಪಕ್ಷದವರ ಆರೋಪಕ್ಕೆ ಟಾಂಗ್ ನೀಡಿದರು.

ಈ ವೇಳೆ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಗೋವಿಂದ ನಾಯ್ಕ ಸೇರಿದಂತೆ ಬ್ಲಾಕ್ ಪದಾಧಿಕಾರಿಗಳು, ಪಕ್ಷದ ಕಾರ್ಯಕರ್ತರು, ಅಧಿಕಾರಿಗಳು ಸಾರ್ವಜನಿಕರು ಹಾಜರಿದ್ದರು.

Share This
300x250 AD
300x250 AD
300x250 AD
Back to top