Slide
Slide
Slide
previous arrow
next arrow

ಯಲ್ಲಾಪುರ ಪೋಲಿಸರ ಮಿಂಚಿನ ಕಾರ್ಯಾಚರಣೆ: ಅಂತರಜಿಲ್ಲಾ ಕಳ್ಳರ ಬಂಧನ

300x250 AD

ಯಲ್ಲಾಪುರ: ಮಹಿಳೆಯರ ಕೊರಳಲ್ಲಿದ್ದ ಬಂಗಾರದ ಸರ ಹಾಗು ತಾಳಿಸರ ಹರಿದುಕೊಂಡು ಹೋಗುತ್ತಿದ್ದ ಈರ್ವರು ಅಂತರಜಿಲ್ಲಾ ಕಳ್ಳರನ್ನು ಬಂಧಿಸುವಲ್ಲಿ ಯಲ್ಲಾಪುರ ಪೋಲಿಸರು ಯಶಸ್ವಿಯಾಗಿದ್ದಾರೆ.

ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಅಪಜಲ್ ಯಾನೆ ಲಿಂಬು ಖಾದರಗೌಸ ಗವಾರಿ ಹಾಗು ಶಿರಸಿ ರಾಮನಬೈಲಿನ ನಿವಾಸಿ ಪೈಜಾನ ಅಬ್ದುಲ್ ಸಮದ್ ಮುಲ್ಲಾ ಬಂಧಿತ ಆರೋಪಿಗಳಾಗಿದ್ದು, ಇವರಿಂದ ಸುಮಾರು 3.50 ಲಕ್ಷ ರೂ. ಬೆಲೆಯ 55 ಗ್ರಾಂ ತೂಕದ ನಾಲ್ಕು ತಾಳಿ ಸರ ಸೇರಿದಂತೆ ಒಟ್ಟೂ 4.70 ಲಕ್ಷ ರೂ ಬೆಲೆಯ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

300x250 AD

ಡಿವಾಯೆಸ್ಪಿ ಗಣೇಶ ಕೆ.ಎಲ್. ಇವರ ಮಾರ್ಗದರ್ಶನದಲ್ಲಿ ಸಿಪಿಐ ರಂಗನಾಥ ನೀಲಮ್ಮನವರ ನೇತೃತ್ವದಲ್ಲಿ ನಡೆದ ಕಾರ್ಯಚರಣೆಯಲ್ಲಿ ಪಿಎಸ್ಐಗಳಾದ ರವಿ ಗುಡ್ಡಿ, ನಿರಂಜನ ಹೆಗಡೆ ಇನ್ನಿತರ ಸಿಬ್ಬಂದಿಗಳು ಪಾಲ್ಗೊಂಡಿದ್ದರು. ಪೋಲಿಸರ ಈ ಮಿಂಚಿನ ಕಾರ್ಯಾಚರಣೆಗೆ ಸಾರ್ವಜನಿಕ ವಲಯದಿಂದ ಶ್ಲಾಘನೆಯ ಮಾತುಗಳು ಕೇಳಿಬರುತ್ತಿದೆ.

Share This
300x250 AD
300x250 AD
300x250 AD
Back to top