ಕುಮಟಾ: ಶಿರಸಿ-ಕುಮಟಾ ಹೆದ್ದಾರಿಯ ದೇವಿಮನೆ ಘಟ್ಟದಲ್ಲಿ ಅಪರಿಚಿತ ವ್ಯಕ್ತಿಯ ಶವವೊಂದು ಪತ್ತೆಯಾಗಿದೆ.
ಅಂದಾಜು 35ರಿಂದ 40 ವರ್ಷ ವಯಸ್ಸಿನ ಪುರುಷನ ಮೃತದೇಹವಾಗಿದ್ದು, ತಲೆಯ ಹಿಂಬದಿಯಲ್ಲಿ ಗಾಯದ ಗುರುತು ಕಂಡುಬಂದಿದ್ದು, ಕೊಲೆ ಮಾಡಿ ಎಸೆದು ಹೋಗಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಮೃತವ್ಯಕ್ತಿ ಬಿಳಿಯ ಶರ್ಟ್, ಲುಂಗಿ ತೊಟ್ಟಿದ್ದು, ಸ್ಥಳಕ್ಕೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ, ಕುಮಟಾ ಪಿಎಸ್ಐ ನವೀನ್ ನಾಯ್ಕ್ ಹಾಗೂ ಇತರ ಪೋಲಿಸರು ಭೇಟಿ ನೀಡಿ ಪರಿಶೀಲಿದ್ದಾರೆ.