Slide
Slide
Slide
previous arrow
next arrow

ಮೂರನೇ ದಿನಕ್ಕೆ ಮುಂದುವರಿದ ಸ್ವಚ್ಛತಾ ಅಭಿಯಾನ

300x250 AD

ಹಳಿಯಾಳ: ಪಟ್ಟಣದ ತಾಲೂಕು ಆಡಳಿತ ತಾಲೂಕು ಪಂಚಾಯತ್ ಮತ್ತು ಪುರಸಭೆ ಆಶ್ರಯದಡಿ ವಿವಿಧ ಇಲಾಖೆಗಳು ಮತ್ತು ವಿವಿಧ ಸಂಘ- ಸಂಸ್ಥೆಗಳ ಸಹಯೋಗದೊಂದಿಗೆ ಸ್ವಚ್ಛತಾ ಅಭಿಯಾನವು ಬುಧವಾರ ಮೂರನೇ ದಿನಕ್ಕೆ ಮುಂದುವರಿದಿದೆ.

ಪಟ್ಟಣದ ಕಿಲ್ಲಾ ಪ್ರದೇಶ ಸುತ್ತಮುತ್ತಲು ತುಳಜಾ ಭವಾನಿ ದೇವಸ್ಥಾನ ಆವರಣ ಹಾಗೂ ದೇವಸ್ಥಾನದ ಸುತ್ತಮುತ್ತಲು ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಳ್ಳಲಾಯಿತು. ತಹಶೀಲ್ದಾರ್ ಜಿ.ಕೆ.ರತ್ನಾಕರ್, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಪರಶುರಾಮ ಗಸ್ತೆ, ಪುರಸಭೆ ಮುಖ್ಯಾಧಿಕಾರಿ ಅಶೋಕ್ ಸಾಳೇನವರ, ಹೆಸ್ಕಾಂ ಸಹಾಯಕ ಎಂಜಿನಿಯರ್ ರವೀಂದ್ರ ಮೇಟಗುಡ್, ಪುರಸಭೆ ಸದಸ್ಯರು, ಲೋಕೋಪಯೋಗಿ, ಪೊಲೀಸ್, ಅರಣ್ಯ, ಶಿಕ್ಷಣ ಇಲಾಖೆ, ಹಳಿಯಾಳ ಪುರಸಭೆ ಸೇರಿದಂತೆ ತಾಲೂಕಿನ ವಿವಿಧ ಇಲಾಖೆಗಳ ಸಿಬ್ಬಂದಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸಾರ್ವಜನಿಕರು ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡರು.

300x250 AD
Share This
300x250 AD
300x250 AD
300x250 AD
Back to top