ಶಿರಸಿ: ತಾಲೂಕಿನ ಚಿಪಗಿಯ ಜಗನ್ನಾಥೇಶ್ವರ ದೇವಸ್ಥಾನದಲ್ಲಿ ನಡೆದ ಕೃಷ್ಣ ಸಂಧಾನ ತಾಳಮದ್ದಳೆ ಕಾರ್ಯಕ್ರಮವು ಜನಮಾನಸವನ್ನು ಗೆಲ್ಲುವಲ್ಲಿ ಯಶಸ್ವಿಯಾಯಿತು.
ಕುರಿಯ ವಿಠ್ಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನ(ರಿ) ಉಜಿರೆಯವರ ರಜತಪರ್ವ ಸರಣಿ ತಾಳಮದ್ದಳೆ ಕಾರ್ಯಕ್ರಮದಡಿಯಲ್ಲಿ ಚಿಪಗಿ ಜಗನ್ನಾಥೇಶ್ವರ ದೇವಸ್ಥಾನದಲ್ಲಿ ಕೃಷ್ಣ ಸಂಧಾನ ತಾಳಮದ್ದಳೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಕೃಷ್ಣನಾಗಿ ಅಶೋಕ ಭಟ್ಟ ಉಜಿರೆ, ದುರ್ಯೋಧನನಾಗಿ ವಿದ್ಯಾವಾಚಸ್ಪತಿ ಉಮಾಕಾಂತ ಭಟ್ಟ ಕೆರೆಕೈ ಹಾಗೂ ವಿದುರನಾಗಿ ರಾಮಚಂದ್ರ ಭಟ್ಟ ಶಿರಳಗಿ ಮತ್ತು ಖ್ಯಾತ ಭಾಗವತ ಕೇಶವ ಹೆಗಡೆ ಕೊಳಗಿ, ಗಜಾನನ ಭಟ್ಟ ತುಳಗೇರಿ, ಮೃದಂಗ ಅನಿರುದ್ಧ ಹೆಗಡೆ ವರ್ಗಾಸರ, ಚಂಡೆ ವಿಘ್ನೇಶ್ವರ ಕೆಸ್ರಕೊಪ್ಪ ನಿರ್ವಹಿಸಿದರು. ತಾಳಮದ್ದಳೆ ಕಾರ್ಯಕ್ರಮದ ಪೂರ್ವದಲ್ಲಿ ಕುಮಾರ ತನ್ಮಯ ಹೆಗಡೆ ಬಾಳಗಾರ ಇವನ ಯಕ್ಷನೃತ್ಯ ಅಭಿನಯ ಅಮೋಘವಾಗಿತ್ತು.