Slide
Slide
Slide
previous arrow
next arrow

ಗಣಪತಿಗೆ ಡಿಜೆ ಬೇಕೆ!!??

300x250 AD

ಈ ವರ್ಷದ ಕೆಲವು ಗಣಪತಿ ಮಂಡಳದವರು ಗಣಪತಿ ಮೂರ್ತಿಗೆ ಖರ್ಚು ಮಾಡಿದ್ದಕ್ಕಿಂತ ಐದಾರು ಪಟ್ಟಿನಷ್ಟು ಹಣ ಡಿಜೆಗೆ ಖರ್ಚು ಮಾಡಿದ್ದಾರೆ ಎಂಬ ಸುದ್ದಿ ಇದೆ.

ಯಾವ ಗಣಪತಿಯ ಪೂಜೆಯ ಪುಸ್ತಕದಲ್ಲಿ ಡಿಜೆ ಬೇಕು ಎಂದು ದಾಖಲಿದೆ ಎಂದು ಕೆಲವರು ಕೇಳುತ್ತಿದ್ದಾರೆ ? ಇನ್ನು ಇತರ ಕೆಲವರು ಇದು ಎಲ್ಲಿ ಡಿಜೆ ಸಂಸ್ಕೃತಿಯ ಭಾಗವೇ? ಸನಾತನ ಧರ್ಮದ ಭಾಗವೇ? ಎಂದು ಪ್ರಶ್ನಿಸುತ್ತಿದ್ದಾರೆ. ವಿಘ್ನನಿವಾರಕನಾದಂತಹ ಗಣಪತಿಗೆ ಪತ್ರ ಅಂದರೆ ಎಲೆಗಳು ಪೂಜೆಗೆ ಈ ಎಲ್ಲ ಪತ್ರಗಳು ಬೇಕು ಎಂದು ಹೇಳಲಾಗಿದೆ ಮಂಡಳಿಯವರು ಡಿಜೆ ಮಾಲೀಕರನ್ನು ಬೆಳೆಸುವ ಬದಲು
ಗಣಪತಿಯ ಪೂಜೆಗೆ ಅವಶ್ಯ ಇರುವಂತಹ ಪತ್ರಗಳ ಗಿಡವನ್ನು ಹಚ್ಚಿ ಬೆಳಸಬಹುದಾಗಿದೆ. ಇಲ್ಲದೆ ಪ್ರತಿದಿನ ಎಲ್ಲ ಮಂಡಲಗಳಿಗೂ ಇದನ್ನ ತಲುಪಿಸಬಹುದಾಗಿದೆ.

ಕೆಲವು ಮಂಡಲಗಳ ಡೀಜೆ ದೊಡ್ಡದಿರಬಹುದು ಇನ್ನು ಕೆಲವು ಮಂಡಳಿಗಳ ಡಿಜೆ ಸಣ್ಣದಿರಬಹುದು ಆದರೆ ಇನ್ನೊಂದು ಎರಡು ದಿನಗಳಲ್ಲಿ ವಿಶೇಷ ಡಿಜೆ ಬರುವುದೆಂಬ ಗಾಳಿ ಸುದ್ದಿ ಈಗಾಗಲೇ ಇದೆ. ಅದರ ಬದಲು ಆ ಮಂಡಲಗಳು ಗಣಪತಿಯನ್ನ ಆರಾಧಿಸುವ ಕೆಲವು ಶ್ಲೋಕಗಳನ್ನು ತಮ್ಮ ಮಂಡಳದ ಸದಸ್ಯರಿಗೆ ,ಭಕ್ತರಿಗೆ ಕಲಿಸುವ ವ್ಯವಸ್ಥೆ ಮಾಡಬಹುದಾಗಿತ್ತು. ಇದಕ್ಕೆ ಈ ವರ್ಷದ ಪುಣೆ ನಗರದ ದಗುಡು ಶೇಟ್ ಹಲ್ವಾಯಿ ಈ ಗಣಪತಿಯ ಎದುರು ಮೂವತ್ತೈದು ಸಾವಿರಕ್ಕೂ ಹೆಚ್ಚು ಮಹಿಳೆಯರು ಗಣಪತಿ ಅಥರ್ವಶೀರ್ಷ ಹೇಳಿದ್ದು ಒಂದು ವಿಶ್ವದಾಖಲೆ. ಇವರು ಯಾರು ಡಿಜೆಗೆ ಹೆಜ್ಜೆ ಹಾಕದೇ ವಿಶ್ವದಾಖಲೆ ಮಾಡಿದವರು ಜೊತೆಗೆ ಪುಣ್ಯ ಗಳಿಸಿದ್ದು ಉಚಿತ.

ಡಿಜೆ ರಹಿತ ಗಣಪತಿಗಳು, ಬಡ ಗಣಪತಿಗಳು ಬಡ ಮಂಡಳಗಳು ಎಂಬ ಕಲ್ಪನೆ ಹಲವರದ್ದು ಆಗಿದೆ.

ವಿಸರ್ಜನೆ ಮೆರವಣಿಗೆಯಲ್ಲಿ ಶಿರಸಿ ನಗರದ ಪ್ರಥಮ ಸಾರ್ವಜನಿಕ ಗಣಪತಿ ಹಾಗೂ ಉಣ್ಣೆ ಮಠದ ಗಣಪತಿಯ ವಿಸರ್ಜನಾ ಮೆರವಣಿಗೆಯಲ್ಲಿ ಡಿಜೆ ಇಲ್ಲ ಎಂದು ಕೇಳಿದ್ದೇನೆ. ಅಂದರೆ ಮುಂದಿನ ಗಣೇಶ ಚೌತಿಯ ವೇಳೆ ಪೊಲೀಸರು ಪ್ರಧಾನ ಮಾಡುವಂತಹ ಬಹುಮಾನ ಏನೇ ಇದ್ದರೂ ಎರಡು ಮಂಡಲಗಳು ಜೊತೆಗೆ ಇನ್ಯಾವುದಾದರೂ ಗಣಪತಿ ಮಂಡಲಗಳು ಡಿಜೆ ರಹಿತವಾಗಿದ್ದರೆ ಅವರ ಪಾಲಾಗಬೇಕು ಎಂಬುದು ಹಲವರ ಇಚ್ಛೆ.

ಮಾನ್ಯ ಲೋಕಮಾನ್ಯ ತಿಲಕರು ಸ್ವಾತಂತ್ರ್ಯಕ್ಕಾಗಿ ಭಾರತೀಯ ಪ್ರಜೆಗಳನ್ನು ಒಗ್ಗೂಡಿಸಲು ಸಾರ್ವಜನಿಕ ಗಣೇಶೋತ್ಸವದ ಯೋಜನೆಯನ್ನು ಮಾಡಿದ್ದರು ಆದರೆ ಈಗೀಗ ಗಣಪತಿ ಬಿಡಿ, ಡಿಜೆ ಉತ್ಸವ ಎನ್ನುವಂತೆ ಹಲವು ಮಂಡಲಗಳಲ್ಲಿ ಭಾಸವಂತು ಆಗುತ್ತಿದೆ.

300x250 AD

ಇದೇ ರೀತಿಯ ಪರಂಪರೆ ಮುಂದುವರೆದರೆ ಇತರ ಕೋಮಿನ ಜನರು ಹಾಸ್ಯಾಸ್ಪದವಾಗಿ ಹಿಂದೂ ಜನತೆಯ ಕಡೆಗೆ ನೋಡಿ ನಗೆ ಪಾಟಲಿ ಮಾಡುವುದಂತೂ ಖಂಡಿತ ಅಲ್ಲದೆ, ಮುಂಬರುವ ಹಿಂದು ಈಗಿನ ಪುಟ್ಟ ಮಕ್ಕಳು ಅಂದರೆ ಮುಂದಿನ ಪೀಳಿಗೆ ಡಿಜೆ ಇಲ್ಲದ ಗಣಪತಿ ಅಂದರೆ ಪರಂಪರೆಯ ಬಿಟ್ಟು ಬೇರೆ ಎಂದು ತಿಳಿಯುವ ಸಾಧ್ಯತೆ ಹೆಚ್ಚಾಗಿದೆ.

ಸಂಪೂರ್ಣ ಬೇಡರ ವೇಷವನ್ನೇ ಡಿಜೆ ರಹಿತವಾಗಿ ಪ್ರದರ್ಶಿಸಿದ್ದು ಈವರೆಗಿನ ದಾಖಲೆ. ಇದೇ ರೀತಿಯ ಡಿಜೆ ರಹಿತ ಬೇಡಿಕೆಯನ್ನು ಆ ಮಹಾ ಗಣಪತಿಯ ಭಕ್ತ ಮಹಾಜನರು ಎದುರು ಪ್ರಸ್ತುತಪಡಿಸಬಹುದು ಎನ್ನುವುದು ಈಗಿನ ಅನುಮಾನ.

ವಿಸರ್ಜನಾ ಮೆರವಣಿಗೆಗಳಲ್ಲಿ ಡಿಜೆ ಶಬ್ದದ ವ್ಯವಸ್ಥೆ ಕಂಡುಬಂದಿತು. ಈ ಮೆರವಣಿಗೆಯ ಶಬ್ದ 80 ರಿಂದ 90 ಡಿಬಿಯಷ್ಟು ಶಬ್ದ ಇತ್ತು. ಡಿಜೆಗಳಲ್ಲಿ ಹಾಕಿದಂತಹ ಅಶ್ಲೀಲ ಹಾಡುಗಳು ಹಲವರ ಮನಸಿಗೆ ಬೇಸರವನ್ನ ತಂದಿದೆ ಎಂಬ ಮಾತಿದೆ. ಪಾರಂಪರಿಕವಾಗಿ ಮೆರವಣಿಗೆಯ ವೇಳೆ ತೆಗೆದುಕೊಂಡು ಹೋಗುವ ಪ್ರಸಾದ ಕುಂಕುಮದ ತಟ್ಟೆ, ಪ್ರಸಾದ ಹೂವಿನ ತಟ್ಟೆಗಳು ಮಾಯವಾಗಿದ್ದವು.

ಚೌತಿಯ ಡಿಜೆಗಳಿಂದ ಆರೋಗ್ಯದ ತೊಂದರೆ ಅನುಭವಿಸಿದವರು ಹಲವರು, ಈ ತೊಂದರೆ ಅನುಭವಿಸಿದವರು ಅವರವರೇ ಮಾತನಾಡುತ್ತಾ ಮುಂದಿನ ಚೌತಿಯ ಹೊತ್ತಿಗೆ ಡಿಜೆ ಇರುವ ಸಾರ್ವಜನಿಕ ಗಣಪತಿಗೆ ತಾವು ದೇಣಿಗೆ ನೀಡದೆ ಇರುವ ಸಂಕಲ್ಪ ಮಾಡಿದ ಸುದ್ದಿಯೂ ಇದೆ.

Share This
300x250 AD
300x250 AD
300x250 AD
Back to top