ಶಿರಸಿ: ಗೋವಾದಿಂದ ಕೇರಳಕ್ಕೆ ಅಕ್ರಮವಾಗಿ ಸ್ಪಿರಿಟ್ ಸಾಗಿಸುತ್ತಿದ್ದ ವೇಳೆ ಅಬಕಾರಿ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ, ವಶಪಡಿಸಿಕೊಂಡ ಮದ್ಯಸಾರವನ್ನು ಶುಕ್ರವಾರ ನಗರದಲ್ಲಿ ನಾಶಪಡಿಸಲಾಯಿತು.
149 ಕ್ಯಾನ್‌ನಲ್ಲಿ ತಲಾ 35 ಲೀ.ನಂತೆ 2.97 ಲಕ್ಷ ರೂ. ಮೌಲ್ಯದ ಅಕ್ರಮ ಸ್ಪಿರಿಟ್‌ನ್ನು ಅಬಕಾರಿ ಜಿಲ್ಲಾ ನ್ಯಾಯಾಲಯದ ಸೂಚನೆಯ ಪ್ರಕಾರ ಅಬಕಾರಿ ಇಲಾಖೆಗೆ ಸೇರಿದ ಜಾಗದಲ್ಲಿ ಗುಂಡಿ ತೋಡಿ ಅದರಲ್ಲಿ ಇಂಗಿಸಿ ಮಣ್ಣು ಮುಚ್ಚಿ ನಾಶಪಡಿಸಲಾಯಿತು. ಒಂದು ವÀರ್ಷದ ಹಿಂದೆ ಶಿರಸಿ ಭೈರುಂಬೆ ಬಳಿ ಅಬಕಾರಿ ಇಲಾಖೆ ಅಧಿಕಾರಿಳು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ, ಅಕ್ರಮ ಸ್ಪೀರಿಟ್ ನ್ನು ವಶಕ್ಕೆ ಪಡೆದಿದ್ದರು.
ಮದ್ಯಸಾರ ನಾಶದ ವೇಳೆ ಅಬಕಾರಿ ಉಪಾಧೀಕ್ಷಕ ಎಚ್.ಎಸ್.ಶಿವಪ್ಪ, ಅಬಕಾರಿ ನಿರೀಕ್ಷಕಿ ಜ್ಯೋತಿ ನಾಯ್ಕ, ಉಪ ನಿರೀಕ್ಷಕ ಡಿ.ಎನ್.ಶಿರಸಿಕರ, ಸಿಬ್ಬಂದಿಗಳಾದ ಎನ್.ಕೆ.ವೈದ್ಯ, ಗಜಾನನ ಎಸ್.ನಾಯ್ಕ, ಸವಿತಾ ಲಂಕೇರ, ಗಂಗಾಧರ ಎಸ್.ಕಲ್ಲೇದ, ಲೊಕೇಶ ಬೋರಕರ್ ಇತರರು ಇದ್ದರು.