Slide
Slide
Slide
previous arrow
next arrow

ರಾಜ್ಯ ಹೆದ್ದಾರಿ ಮೇಲಿನ ಭಾನುವಾರದ ಸಂತೆ ಸ್ಥಳಾಂತರಗೊಳಿಸುವ0ತೆ ಆಗ್ರಹ

300x250 AD

ಯಲ್ಲಾಪುರ: ವಾಹನ ಸಂಚಾರಕ್ಕೆ ಹಾಗೂ ಜನ ಸಂಚಾರಕ್ಕೆ ಅಡಚಣೆಯಾಗುವಂತೆ ರಾಜ್ಯ ಹೆದ್ದಾರಿ ಬೆಲ್ ರಸ್ತೆ ಮೇಲೆ ನಡೆಯುವ ಭಾನುವಾರದ ಸಂತೆಯನ್ನು ಬೇರೆ ಕಡೆ ಸ್ಥಳಾಂತರಿಸಬೇಕೆ0ದು ಸಾರ್ವಜನಿಕ ಸೇವಾ ಕೇಂದ್ರದ ಅಧ್ಯಕ್ಷ ಧೀರಜ ತಿನೇಕರ್ ಆಗ್ರಹಿಸಿದ್ದಾರೆ.

ಅವರು ಶುಕ್ರವಾರ ಈ ಕುರಿತಂತೆ ಪತ್ರಿಕಾಗೋಷ್ಠಿ ನಡೆಸಿ ಮಾತನಾಡುತ್ತಿದ್ದರು. ಯಲ್ಲಾಪುರ ಪಟ್ಟಣ ಸುಂದರವಾಗಿ ಕಾಣಬೇಕು ಶಾಸಕರು, ಜನಪ್ರತಿನಿಧಿಗಳು ಅನುಷ್ಠಾನಕ್ಕೆ ತರಬೇಕು. ಮೊದಲು ಕಡಿಮೆ ತರಕಾರಿ ವ್ಯಾಪಾರಿಗಳು ಕೈವಾರದ ಸಂತೆಗೆ ಆಗಮಿಸುತ್ತಿದ್ದರು ಈಗ ಸಾವಿರಾರು ಸಂಖ್ಯೆಯಲ್ಲಿ ತರಕಾರಿ ಮಾರಾಟಗಾರರು ಆಗಮಿಸಿ ಎಲ್ಲೆಂದರಲ್ಲಿ ರಸ್ತೆ ಹಾಗೂ ಸರ್ಕಾರಿ ಜಾಗವನ್ನು ಅತಿಕ್ರಮಿಸಿ ಸಂತೆಯನ್ನು ನಡೆಸುತ್ತಿದ್ದಾರೆ. ಇದರಿಂದಾಗಿ ವಾಹನ ಸಂಚಾರಕ್ಕೆ ಅಡಚಣೆ ಹಾಗೂ ಗ್ರಾಹಕರಿಗೂ ಸಮಸ್ಯೆಯಾಗುತ್ತಿದೆ. ಪರ್ಯಾಯಸ್ಥಳವಾಗಿ ಆರ್ ಟಿ ಎಸ್ ಎಸ್ ಶಿಕ್ಷಣ ಸಂಸ್ಥೆಯ ಪಕ್ಕದ ಅರಣ್ಯ ಇಲಾಖೆಗೆ ಸೇರಿರುವ ಸುಮಾರು ಮೂರರಿಂದ ನಾಲ್ಕು ಎಕರೆ ಸ್ಥಳವಿದೆ. ಈ ಸ್ಥಳದಲ್ಲಿ ಮರಗಳನ್ನು ನಟ್ಟು ನೆರಳಿನ ವ್ಯವಸ್ಥೆ ಮಾಡಿ ಸಂತೆಗೆ ಅವಕಾಶ ಮಾಡಿಕೊಡಬಹುದಾಗಿದೆ. ಹೊಸ ತಹಸಿಲ್ದಾರ್ ಕಚೇರಿ ಪ್ರಾರಂಭವಾಗಿದ್ದು ಹಳೆಯ ತಹಸಿಲ್ದಾರ್ ಕಚೇರಿ ಅಕ್ಕಪಕ್ಕದಲ್ಲಿ ಹಲವಾರು ಎಕರೆ ಸರ್ಕಾರಿ ಜಮೀನಿದೆ. ಈ ಜಮೀನಿನಲ್ಲಿ ಸಂತೆಗೆ ವ್ಯವಸ್ಥೆ ಮಾಡಿಕೊಡಬಹುದಾಗಿದೆ. ಅಷ್ಟೇ ಅಲ್ಲದೆ, 1947ರಲ್ಲಿ ಕ್ವಾಟೇಜ್ ಆಸ್ಪತ್ರೆಗೆ ಮೀಸಲಿಟ್ಟ ಸ್ಥಳ ಅರಣ್ಯ ಇಲಾಖೆಯ ಎಸಿಎಫ್ ಕಚೇರಿಯ ಅಕ್ಕಪಕ್ಕದಲ್ಲಿ ಬಹಳಷ್ಟು ಇದೆ. ಈ ಸ್ಥಳದಲ್ಲಿಯೂ ಕೂಡ ಅಭಿವೃದ್ಧಿಪಡಿಸಿ ರವಿವಾರದ ಸಂತೆ ಮಾರುಕಟ್ಟೆಗೆ ಅವಕಾಶ ಮಾಡಿಕೊಟ್ಟರೆ, ಸಂತೆ ಮಾರುಕಟ್ಟೆಗೆ ಬರುವ ಜನರಿಗೂ ವ್ಯಾಪಾರಕ್ಕೆ ತೊಂದರೆಯಾಗದೆ ಸಂಚಾರಕ್ಕೂ ಕೂಡ ಸುಗಮವಾಗಲಿದೆ ಎಂದು ಅವರು ಸಲಹೆ ನೀಡಿದ್ದಾರೆ.

ಕರ್ನಾಟಕ ರಾಜ್ಯ ಸರ್ಕಾರಿ ಭೂಮಿ ಹೋರಾಟಗಾರರ ಸಮಿತಿಯ ತಾಲೂಕ ಅಧ್ಯಕ್ಷ ಎಂ.ಜಿ.ಭಟ್ ಮಾತನಾಡಿ, ಯಲ್ಲಾಪುರ ಪಟ್ಟಣ ಪಂಚಾಯಿತಿಯಲ್ಲಿ ಆರ್‌ಟಿಸಿ ಇಲ್ಲದೆ ಪ್ರಭಾವಿ ವ್ಯಕ್ತಿಗಳಿಗೆ ಅಷ್ಟೇ ಫಾರ್ಮ್ ನಂಬರ್ 3 ಕೊಡುತ್ತಿದ್ದಾರೆ. 4.1.2023ರಂದು ಪ್ರತಿಜ್ಞಾಪತ್ರದಲ್ಲಿ ವ್ಯಕ್ತಿಯೊಬ್ಬರು ಸರ್ವೇ ನಂಬರ್ ನೋಟ್ರಿಯಲ್ಲಿ ಮಾಡಿಸಿ ಕೊಟ್ಟಿದ್ದು, 5.1.2023ಕ್ಕೆ ಪಟ್ಟಣ ಪಂಚಾಯಿತಿಯಿAದ ಕಟ್ಟಡ ನಿರ್ಮಾಣಕ್ಕೆ ಪರವಾನಿಗೆಯನ್ನು ನೀಡಿದ್ದಾರೆ. ಆದರೆ ಬಡವರಿಗೆ ಪರವಾನಿಗೆ ನೀಡಲು ಪಟ್ಟಣ ಪಂಚಾಯತಿಯವರು ಬಹಳಷ್ಟು ಸತಾಯಿಸುತ್ತಾರೆ. ರಾಷ್ಟ್ರೀಯ ಹೆದ್ದಾರಿ ಮಧ್ಯ ರಸ್ತೆಯಿಂದ ಕೇವಲ 20 ಮೀಟರ್ ದೂರದಲ್ಲಿ ಬಾರ್ ಮತ್ತು ರೆಸ್ಟೋರೆಂಟ್ ಗೆ ಅನುಮತಿ ನೀಡಿದ್ದು, ಪಟ್ಟಣ ಪಂಚಾಯಿತಿಯವರು ಇದರಲ್ಲಿ ಭ್ರಷ್ಟಾಚಾರ ಮಾಡಿರುವುದು ಸ್ಪಷವಾಗಿ ಕಂಡುಬರುತ್ತದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದೇವೆ.

300x250 AD

ಯಾವ ಜಾಗದಲ್ಲಿ ಕಟ್ಟಡ ನಿರ್ಮಾಣ ಮಾಡುತ್ತೇವೆ ಎಂದು ಪಟ್ಟಣ ಪಂಚಾಯಿತಿಯಿAದ ಅನುಮತಿ ಪಡೆದಿದ್ದಾರೆ. ಆ ಸರ್ವೇ ನಂಬರ್ ನಲ್ಲಿ ಕಟ್ಟಡ ನಿರ್ಮಾಣ ಮಾಡದೇ ಬೇರೆ ಕಟ್ಟಡವನ್ನು ತೋರಿಸಿ ಅನುಮತಿ ಪಡೆದಿದ್ದು ಆ ಕಟ್ಟಡ 60 ವಷÀð ಹಿಂದೆ ನಿರ್ಮಾಣ ಮಾಡಲಾಗಿದ್ದು, ಶಿಥಿಲಾವಸ್ತೆಯಲ್ಲಿದೆ. ನವೀಕರಣ ಮಾಡಿರುವ ಕಟ್ಟಡಕ್ಕೆ ಪಟ್ಟಣ ಪಂಚಾಯಿತಿಯವರು ಅನುಮತಿ ನೀಡಿದ್ದಾರೆ. ಕಟ್ಟಡ ವಾಸಿಸಲು ಯೋಗ್ಯ ಇದೆಯೋ ಇಲ್ಲವೋ ಎಂಬುದನ್ನು ಝಡ್‌ಪಿ ಅಥವಾ ಪಿಡಬ್ಲ್ಯೂಡಿ ಇಲಾಖೆಯಿಂದ ಅನುಮತಿಯ ಪತ್ರ ಪಡೆಯದೆ ಅದನ್ನು ಪ್ರಮಾಣಿಸದೆ ಪರವಾನಿಗೆ ಕೊಡಲಾಗಿದೆ. ಈ ಕಟ್ಟಡದ ಪರವಾನಿಗೆ ಹಾಗೂ ಬಾರ್ ಅಂಡ್ ರೆಸ್ಟೋರೆಂಟ್ ನೀಡುವಲ್ಲಿ ವ್ಯಾಪಕ ಪ್ರಮಾಣದ ಭ್ರಷ್ಟಾಚಾರ ಎಸೆಗಲಾಗಿದೆ. ಈ ಕಟ್ಟಡದ ಜಮೀನಿನ ಪಹಣಿ ಪತ್ರಿಕೆಯನ್ನು ಪೂರೈಸುವಂತೆ ತಹಶೀಲ್ದಾರ್ ಕಚೇರಿಗೆ ಅರ್ಜಿ ಸಲ್ಲಿಸಿದಾಗ, ಈ ಸಂಖ್ಯೆಯ ಪಹಣಿ ಪತ್ರಿಕೆ ಭೂಮಿ ತಂತ್ರಾAಶದಲ್ಲಿ ಲಭ್ಯವಿಲ್ಲ ಎಂದು ತಹಶೀಲ್ದಾರರು ವರದಿ ನೀಡಿದ್ದಾರೆ. ಹೀಗಾಗಿ ನಾವು ಸರ್ಕಾರ ಹಾಗೂ ನ್ಯಾಯಾಲಯದ ಮೊರೆ ಹೋಗುವುದಾಗಿ ಎಂ ಜಿ ಭಟ್ ತಿಳಿಸಿದರು.

Share This
300x250 AD
300x250 AD
300x250 AD
Back to top