Slide
Slide
Slide
previous arrow
next arrow

ಅಕ್ರಮ ಗೋವಾ ಮದ್ಯ ಸಾಗಾಟ; ಬಸ್ ಸಮೇತ ಚಾಲಕ ವಶಕ್ಕೆ

300x250 AD

ಕಾರವಾರ: ಅಕ್ರಮವಾಗಿ ಗೋವಾ ಮದ್ಯ ಸಾಗಿಸುತ್ತಿದ್ದ ಖಾಸಗಿ ಸಂಸ್ಥೆಗೆ ಸೇರಿದ ಸಾರಿಗೆ ಬಸ್ ಹಾಗೂ 95 ಸಾವಿರ ಮೌಲ್ಯದ ಮದ್ಯವನ್ನ ಚಾಲಕನ ಸಮೇತ ವಶಕ್ಕೆ ಪಡೆದಿರುವ ಘಟನೆ ನಡೆದಿದೆ.

ಗೋವಾದಿಂದ ಅಕ್ರಮವಾಗಿ ಎಸ್‌ಆರ್‌ಎಸ್ ಟ್ರಾವೆಲ್ಸ್ ಬಸ್‌ನಲ್ಲಿ ಬೆಂಗಳೂರಿಗೆ ಮದ್ಯ ಸಾಗಿಸುತ್ತಿದ್ದ ಬಗ್ಗೆ ಬಂದ ಖಚಿತ ಮಾಹಿತಿ ಆಧಾರದಲ್ಲಿ ಕಾರವಾರದ ಮಾಜಾಳಿ ಚೆಕ್ ಪೋಸ್ಟ್ನಲ್ಲಿ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ 95 ಸಾವಿರ ಮೌಲ್ಯದ 72 ಲೀಟರ್ ವಿವಿಧ ಕಂಪನಿಯ ಗೋವಾ ಬ್ರ‍್ಯಾಂಡಿ ಪತ್ತೆಯಾಗಿದೆ.

300x250 AD

ಅಬಕಾರಿ ಇನ್‌ಸ್ಪೆಕ್ಟರ್ ಸದಾಶಿವ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಬಾಗಲಕೋಟೆ ಮೂಲದ ಬಸ್ ಚಾಲಕ ನಿಂಗನಗೌಡ ಪಾಟೀಲ್ ನನ್ನ ವಶಕ್ಕೆ ಪಡೆಯಲಾಗಿದ್ದು, ಸಾಗಾಟಕ್ಕೆ ಬಳಸಿದ್ದ ಬಸ್ ಸೇರಿ 25.95 ಲಕ್ಷ ಮೌಲ್ಯದ ಸ್ವತ್ತುಗಳನ್ನ ಜಪ್ತು ಮಾಡಿಕೊಳ್ಳಲಾಗಿದೆ. ಕಾರವಾರ ಅಬಕಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This
300x250 AD
300x250 AD
300x250 AD
Back to top