Slide
Slide
Slide
previous arrow
next arrow

ಗೃಹರಕ್ಷಕದಳದ ಫ್ಲ್ಯಾಟೂನ್ ಕಮಾಂಡರ್ ಆಗಿ ಪ್ರಭು ಮುದ್ದಕ್ಕನವರ್

300x250 AD

ಕಾರವಾರ: ಜಿಲ್ಲಾ ಗೃಹರಕ್ಷಕದಳದ ಮಲ್ಲಾಪುರ ಘಟಕದ ಪ್ರಭು ಮುದ್ದಕ್ಕನವರ್ ಅವರನ್ನು ಸಾರ್ಜೆಂಟ್ ಹುದ್ದೆಯಿಂದ ಫ್ಲ್ಯಾಟೂನ್ ಕಮಾಂಡರ್ ಹುದ್ದೆಗೆ ಬಡ್ತಿ ನೀಡಿ ಆರಕ್ಷಕ ಮಹಾನಿರ್ದೇಶಕರು ಹಾಗೂ ಗೃಹರಕ್ಷದಳದ ಮಹಾ ಸಮಾದೇಷ್ಠರು ಆದೇಶ ಹೊರಡಿಸಿದ್ದಾರೆ.

ಕಳೆದ ೧೭ ವರ್ಷಗಳಿಂದ ಗೃಹರಕ್ಷಕದಳದಲ್ಲಿ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿರುವ ಪ್ರಭು ಮುದಕ್ಕನವರ್, ಸದ್ಯ ಮಲ್ಲಾಪುರ ಘಟಕದ ಘಟಕಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಜಿಲ್ಲಾ ಕಚೇರಿಯಲ್ಲಿ ಸಮಾದೇಷ್ಠ ಡಾ.ಸಂಜು ನಾಯಕ ಅವರು ಪ್ರಭು ಮುದಕ್ಕನವರ್ ಅವರಿಗೆ ಪ್ರಮಾಣ ಪತ್ರ ನೀಡಿ ಗೌರವಿಸಿದರು.

300x250 AD

ಈ ಸಂದರ್ಭದಲ್ಲಿ ಕಚೇರಿಯ ಸಿಬ್ಬಂದಿಗಳು, ಘಟಕಾಧಿಕಾರಿಗಳು ಹಾಗೂ ಬೋಧಕರು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top