Slide
Slide
Slide
previous arrow
next arrow

ವಿಜ್ಞಾನ ವಸ್ತು ಪ್ರದರ್ಶನ: ಶಿಕ್ಷಕ ಮಹಾದೇವ ಗೌಡ ರಾಜ್ಯ ಮಟ್ಟಕ್ಕೆ ಆಯ್ಕೆ

300x250 AD

ಕುಮಟಾ: ಕರ್ಕಿಯ ಚೆನ್ನಕೇಶವ ಪ್ರೌಢಶಾಲೆಯಲ್ಲಿ ನಡೆದ 2023- 24ನೇ ಸಾಲಿನ ವಿಜ್ಞಾನ ವಸ್ತು ಪ್ರದರ್ಶನ ಸ್ಪರ್ಧೆಯಲ್ಲಿ ಪ್ರೌಢಶಾಲಾ ಶಿಕ್ಷಕರ ವಿಭಾಗದಲ್ಲಿ ಹಿರೇಗುತ್ತಿ ಸೆಕೆಂಡರಿ ಹೈಸ್ಕೂಲಿನ ವಿಜ್ಞಾನ ಶಿಕ್ಷಕ ಮಹಾದೇವ ಬಿ.ಗೌಡ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಶಾಲೆಯ ವಿಜ್ಞಾನ ಶಿಕ್ಷಕ ಮಹಾದೇವ ಬಿ.ಗೌಡರವರಿಗೆ ಮಹಾತ್ಮಗಾಂಧೀ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಹೊನ್ನಪ್ಪ ಎನ್.ನಾಯಕ, ಉಪಾಧ್ಯಕ್ಷ ಶ್ರೀಕಾಂತ ನಾಯಕ, ಕಾರ್ಯದರ್ಶಿ ಮೋಹನ ಬಿ.ಕೆರೆಮನೆ ಹಾಗೂ ಆಡಳಿತ ಮಂಡಳಿ ಸದಸ್ಯರು, ಮುಖ್ಯಾಧ್ಯಾಪಕ ರೋಹಿದಾಸ ಎಸ್.ಗಾಂವಕರ, ಶಿಕ್ಷಕವೃಂದ, ಹಿರೇಗುತ್ತಿ ಗ್ರಾಮ ಪಂಚಾಯತ ಅಧ್ಯಕ್ಷೆ ಶಾಂತಾ ಎನ್.ನಾಯಕ, ಸದಸ್ಯರು, ಮಾದನಗೇರಿ ಮಹಾಲಸಾ ಸಿದ್ಧಿವಿನಾಯಕ ಟೆಂಪಲ್ ಟ್ರಸ್ಟ್ನ ಧರ್ಮದರ್ಶಿಗಳಾದ ಶ್ರೀ ಸುನೀಲ್ ಪೈ, ಬ್ರಹ್ಮ ಜಟಕ ಯುವಕ ಸಂಘ ಅಧ್ಯಕ್ಷ ಸಣ್ಣಪ್ಪ ನಾಯಕ, ಸದಸ್ಯರು, ಊರಿನ ನಾಗರಿಕರು ಅಭಿನಂದಿಸಿ ಮುಂದಿನ ಹಂತಕ್ಕೆ ಶುಭ ಕೋರಿದ್ದಾರೆ.

300x250 AD
Share This
300x250 AD
300x250 AD
300x250 AD
Back to top