ಕುಮಟಾ: ಪಟ್ಟಣದ ಹನುಮಂತ ಬೆಣ್ಣೆ ಸರ್ಕಾರಿ ಪಿಯು ಕಾಲೇಜ್‌ನಲ್ಲಿ ಇಸ್ರೋದ ವಿಜ್ಞಾನಿ ಡಾ.ಜಗದೀಶ್ಚಂದ್ರ ನಾಯ್ಕರವರು ವಿಜ್ಞಾನ ಸಂವಾದ ಕಾರ್ಯಕ್ರಮವನ್ನು ಅತ್ಯದ್ಭುತವಾಗಿ ನಡೆಸಿಕೊಟ್ಟರು.
ಚಿತ್ರಿಗಿ ಸ್ಟೂಡೆಂಟ್ಸ್ ವೆಲ್ಫೇರ್ ಟ್ರಸ್ಟ್ ವತಿಯಿಂದ ಹಮ್ಮಿಕೊಂಡ ವಿಜ್ಞಾನ ಸಂವಾದ ಕಾರ್ಯಕ್ರಮದಲ್ಲಿ ಇಸ್ರೋದ ವಿಜ್ಞಾನಿ ಡಾ.ಜಗದೀಶ್ಚಂದ್ರ ನಾಯ್ಕರವರು ಯಶಸ್ವಿ ಚಂದ್ರಯಾನ-೩ ಮಿಷನ್ ಬಗ್ಗೆ ಸಮಗ್ರ ಮಾಹಿತಿ ನೀಡಿದರು. ಈ ಸಂವಾದ ಕಾರ್ಯಕ್ರಮ ಎರಡು ತಾಸುಗಳವರೆಗೆ ಅತ್ಯಂತ ಶಿಸ್ತಿನಿಂದ ನೆರವೇರಿತು. ವಿದ್ಯಾರ್ಥಿಗಳಿಗೆ ಇನ್ನೂ ಸಂವಾದದಲ್ಲಿ ಪಾಲ್ಗೊಳ್ಳುವ ಬಯಕೆ ಇದ್ದರೂ ಸಮಯದ ಅಭಾವದಿಂದ ಎರಡು ತಾಸುಗಳಿಗೆ ಮಾತ್ರ ಸೀಮಿತಗೊಳಿಸಲಾಯಿತು. ಡಾ.ಜಗದೀಶ್ ಚಂದ್ರ ನಾಯ್ಕ ರವರು ಮುಂದೆಯೂ ಸಹ ಊರಿಗೆ ಬಂದಾಗ ಟ್ರಸ್ಟಿನ ಇಂತಹ ವಿಜ್ಞಾನ ಸಂವಾದ ಕಾರ್ಯ ಚಟುವಟಿಗಳಿಗೆ ಸಹಕಾರ ನೀಡುತ್ತೇನೆ ಎಂಬ ಭರವಸೆಯನ್ನು ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಭಾರಿ ಪ್ರಾಂಶುಪಾಲರು ಆರ್ ಎಚ್ ನಾಯಕ್ ವಹಿಸಿದ್ದರು. ಈ ಸಂದರ್ಭದಲ್ಲಿ ಡಾ. ಜಗದೀಶ್ಚಂದ್ರ ನಾಯ್ಕರನ್ನು ಸನ್ಮಾನಿಸಲಾಯಿತು. ಉಪನ್ಯಾಸಕ ಆನಂದು ನಾಯಕರವರು ಕಾಲೇಜಿನ ಬಗ್ಗೆ ಪ್ರಾಸ್ತವಿಕವಾಗಿ ಮಾತನಾಡಿದರು. ಟ್ರಸ್ಟಿನ ಅಧ್ಯಕ್ಷರಾದಂತಹ ಉದಯ್ ಹುಲಸ್ಪಾದ ರವರು ಉಪಸ್ಥಿತರಿದ್ದರು. ಟ್ರಸ್ಟಿನ ಕಾರ್ಯದರ್ಶಿ ಮಾರುತಿ ನಾಯ್ಕ್ ಅವರು ಪ್ರಾಸ್ತಾವಿಸಿದರು. ಹಿರಿಯ ಟ್ರಸ್ಟಿ ಸುರೇಶ್ ಭಟ್ ರವರು ಅತಿಥಿಗಳ ಪರಿಚಯ ಮಾಡಿದರು ಮತ್ತು ಟ್ರಸ್ಟ್ ನಡೆದು ಬಂದ ದಾರಿಯನ್ನು ತಿಳಿಸಿದರು. ಕಾರ್ಯಕ್ರಮಕ್ಕೆ ಟ್ರಸ್ಟಿಗಳಾದ ಮೋಹನ, ನಾಗರಾಜ್ ನಾಯ್ಕ, ಲಕ್ಷ್ಮಿಕಾಂತ್ ಪಟಗಾರ, ಶತಮಾನೋತ್ಸವ ಸಮಿತಿಯ ಅಧ್ಯಕ್ಷರಾದ ಶೇಷಗಿರಿ ಶಾನಭಾಗ್, ಪುರಸಭೆ ಸದಸ್ಯ ಸಂತೋಷ್ ನಾಯ್ಕ ಉಪಸ್ಥಿತರಿದ್ದರು.