Slide
Slide
Slide
previous arrow
next arrow

ಪ್ರತಿಭಾ ಕಾರಂಜಿ: ಹೆಗ್ಗರಣಿ ಪ್ರೌಢಶಾಲಾ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ

300x250 AD

ಸಿದ್ದಾಪುರ: ತಾಲೂಕಿನ ಹಾಳದಕಟ್ಟಾದಲ್ಲಿ ನಡೆದ ತಾಲೂಕಾ ಮಟ್ಟದ ಪ್ರತಿಭಾ ಕಾರಂಜಿಯ ಸ್ಪರ್ಧೆಗಳಲ್ಲಿ ತಾಲೂಕಿನ ಹೆಗ್ಗರಣಿಯ ಶ್ರೀ ಸ್ವಾಮಿ ವಿವೇಕಾನಂದ ಪ್ರೌಢಶಾಲೆಯ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗುವ ಮೂಲಕ ಸಾಧನೆ ಗೈದಿದ್ದಾರೆ.

ಮದನ ಭಟ್ ಮಿಮಿಕ್ರಿಯಲ್ಲಿ ಪ್ರಥಮ, ಸುಮೇಧಾ ಜೋಷಿ ಧಾರ್ಮಿಕ ಪಠಣದಲ್ಲಿ ಪ್ರಥಮ, ನಿತ್ಯಾ ಹೆಗಡೆ ಜಾನಪದ ಗೀತೆಯಲ್ಲಿ ಪ್ರಥಮ ಹಾಗೂ ಜಾನಪದ ನೃತ್ಯ ವಿಭಾಗದಲ್ಲಿ ಡೊಳ್ಳು ಕುಣಿತ ಪ್ರದರ್ಶಿಸಿದ್ದ ರಕ್ಷಿತಾ, ನಾಗಶ್ರೀ, ನಿತ್ಯಾ, ಚಿತ್ರಾ, ಸುಮಾ, ಕವನಾ ಸೇರಿದಂತೆ ಒಟ್ಟು 6 ಜನರಿದ್ದ ಹೆಣ್ಣು ಮಕ್ಕಳ ತಂಡ ಪ್ರಥಮ ಸ್ಥಾನ‌ ಪಡೆದಿದೆ. ಇವರಿಗೆ ತಲಗಾರ ಊರಿನ‌ ಡೊಳ್ಳು ಕುಣಿತದ‌‌ ತಂಡದವರು ಹಾಗೂ ಪಾಲಕರು ತರಬೇತಿ ನೀಡಿ‌ ಪ್ರೋತ್ಸಾಹಿಸಿದ್ದಾರೆ.

300x250 AD

ವಿದ್ಯಾರ್ಥಿಗಳ ಈ ಸಾಧನೆಗೆ ಶಾಲಾ ಶಿಕ್ಷಕ‌, ಶಿಕ್ಷಕೇತರ ವೃಂದ ಹಾಗೂ ಆಡಳಿತ ಮಂಡಳಿಯವರು ಹರ್ಷ ವ್ಯಕ್ತಪಡಿಸಿ ಮುಂದಿನ ಹಂತಕ್ಕೆ ಶುಭ ಹಾರೈಸಿದ್ದಾರೆ.

Share This
300x250 AD
300x250 AD
300x250 AD
Back to top