Slide
Slide
Slide
previous arrow
next arrow

ಜಿಲ್ಲಾ ಮಟ್ಟದ ಸಂವಿಧಾನ ಓದು ಅಭಿಯಾನ: ಸೆ.23,24ಕ್ಕೆ ಎರಡು ದಿನದ ಕಾರ್ಯಗಾರ

300x250 AD

ಶಿರಸಿ: ಜಿಲ್ಲಾ ಮಟ್ಟದ ಸಂವಿಧಾನ ಓದು ಅಭಿಯಾನದ ಎರಡು ದಿನದ ಕಾರ್ಯಗಾರ ಸೆ. 23 ಮತ್ತು 24 ರಂದು ಶಿರಸಿಯಲ್ಲಿ ದೇವ ನಿಲಯ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂವಿಧಾನ ಓದು ಅಭಿಯಾನದ ಪರವಾಗಿ ರವೀಂದ್ರ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಂವಿಧಾನ ಓದು ಅಭಿಯಾನದ ಕಾರ್ಯಗಾರವನ್ನ ಸೆಪ್ಟೆಂಬರ್ 23 ರಂದು ಮುಂಜಾನೆ 10 ಘಂಟೆಗೆ ಯಲ್ಲಾಪುರ ರಸ್ತೆ ದೇವ ನಿಲಯದಲ್ಲಿ ಉದ್ಘಾಟನೆಗೊಳ್ಳಲಿದೆ. ಎರಡು ದಿನದ ಕಾರ್ಯಗಾರದಲ್ಲಿ ವಿಶ್ರಾಂತ ನ್ಯಾಯಮೂರ್ತಿ ಹೆಚ್ ಎನ್ ನಾಗಮೋಹನದಾಸ್ ಪ್ರಧಾನ ವಿಷಯ ಮಂಡನಕಾರರಾಗಿದ್ದು,  ಸಂವಿಧಾನ ಮತ್ತು ಸಾಮಾಜಿಕ ನ್ಯಾಯ ಪರಿಕಲ್ಪನೆ ವಿಷಯವನ್ನ ವಿ ರಾಜಶೇಖರ್ ಮೂರ್ತಿ, ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ವಿಷಯವನ್ನ ಎಜೆ ರಾಮಚಂದ್ರಪ್ಪ, ಸಂವಿಧಾನ ಮತ್ತು ಮಹಿಳೆ ವಿಷಯವನ್ನ ಹೆಚ್ ಎಸ್ ಅನುಪಮಾ, ಸಂವಿಧಾನ ಮತ್ತು ಪ್ರಜಾಪ್ರಭುತ್ತದ ಪರಿಕಲ್ಪನೆ ಕಿಗ್ಗಾ ರಾಜಶೇಖರ್ ಎಸ್ ಜಿ ವಿಷಯ ಮಂಡನೆ ಮಾಡಲಿದ್ದು ಸಂಘಟನೆ ಮತ್ತು ಹೋರಾಟದ ಕುರಿತು ಹಿರಿಯ ವಕೀಲ ರವೀಂದ್ರ ನಾಯ್ಕ ವಿಷಯ ಮಂಡಿಸಲಿದ್ದಾರೆ.

 ಉದ್ಘಾಟನೆಯನ್ನ ಕರ್ನಾಟಕ ಸಾಹಿತ್ಯ ಪರಿಷತ್ ಉತ್ತರ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಬಿ ಎನ್ ವಾಸರೆ ನಿರ್ವಹಿಸಲಿದ್ದು. ಅತಿಥಿಗಳಾಗಿ ಮಾದೇವಿ ಭಂಡಾರಿ ಸಾಹಿತಿಗಳು ಮತ್ತು ಡಿ ಸ್ಯಾಮಸನ್ ಡಿ.ವೈ.ಎಫ್.ಐ ಆಗಮಿಸಲಿದ್ದಾರೆ. ಸೆ.24 ರ ಮಧ್ಯಾಹ್ನ 12.45 ಕ್ಕೆ ಜರುಗಲಿರುವ ಸಮಾರೋಪ ಸಮಾರಂಭದ ಭಾಷಣವನ್ನ ಉಚ್ಛ ನ್ಯಾಯಾಲಯದ ಹಿರಿಯ ನ್ಯಾಯಾಧೀಶರಾಗಿರುವ ಅನಂತ ನಾಯ್ಕ ಎನ್ ಮಾಡಲಿದ್ದಾರೆ.

300x250 AD

ರಾಜ್ಯಾದ್ಯಂತ ಅಭಿಯಾನ:
 ನ್ಯಾಯಮೂರ್ತಿ ನಾಗಮೋಹನದಾಸ ಅವರು ೨೦೧೮ ರಲ್ಲಿ ಸಂವಿಧಾನ ಓದು ಕೃತಿಯನ್ನು ರಚಿಸಿ, ಅಂದಿನಿ0ದ ಸಂವಿಧಾನ ಓದು ಅಭಿಯಾನ ತಂಡವನ್ನ ರಚಿಸಿ ರಾಜ್ಯಾದ್ಯಂತ ಉಪನ್ಯಾಸ, ವಿಚಾರ ಸಂಕೀರ್ಣ, ಸಮಾವೇಶ ಕಾರ್ಯಗಾರವನ್ನು ನಡೆಸುತ್ತಿದ್ದು. ರಾಜ್ಯದ ಪ್ರತಿ ಮನೆ ಮನೆಗೂ ಸಂವಿಧಾನದ ಅರಿವು ಮೂಡಿಸುವ ಗುರಿಯೊಂದಿಗೆಡ ಜಿಲ್ಲೆಯಿಂದ ಆಯ್ದ ನೂರು ಕಾರ್ಯಕರ್ತರಿಗೆ ಎರಡು ದಿನದ ಕಾರ್ಯಗಾರದಲ್ಲಿ ಸಂವಿಧಾನದ ಮತ್ತು ಹೋರಾಟ ಸಂಘಟನೆಯ ಕುರಿತು ಪೂರ್ಣ ಮಾಹಿತಿ ನೀಡಲಾಗುವುದೆಂದು ರವೀಂದ್ರ ನಾಯ್ಕ ಹೇಳಿದ್ದಾರೆ.

Share This
300x250 AD
300x250 AD
300x250 AD
Back to top