ಅಂಕೋಲಾ: ಕೇಣಿಯ ಸರಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ತಾಲೂಕಾ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಗುಂಪು ವಿಭಾಗದಲ್ಲಿ ಪ್ರಥಮ ಹಾಗೂ ವೈಯಕ್ತಿಕ ವಿಭಾಗದಲ್ಲಿ ದ್ವೀತಿಯ ಬಹುಮಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದೆ.
ತಾಲೂಕಿನಿಂದ ಜಿಲ್ಲಾಮಟ್ಟಕ್ಕೆ ಆಯ್ಕೆಯಾದ ನಾಲ್ಕು ಮಾದರಿಗಳಲ್ಲಿ ಎರಡು ಸರಕಾರಿ ಪ್ರೌಢಶಾಲೆ ಕೇಣಿಯ ಮಾದರಿಗಳಾಗಿವೆ. ಗುಂಪು ವಿಭಾಗದಲ್ಲಿ ಜನ್ಮಿತಾ ಕಾಶಿನಾಥ ಹರಿಕಾಂತ ಮತ್ತು ಶ್ರೇಯಾ ಉಮಾಕಾಂತ ಹರಿಕಾಂತ ಇವರು ರಾಜ್ಯ ಪ್ರಶಸ್ತಿ ಪುರಸ್ಕೃತ ವಿಜ್ಞಾನ ಶಿಕ್ಷಕರಾದ ಸುಧೀರ ನಾಯಕ ಇವರ ಮಾರ್ಗದರ್ಶನದಲ್ಲಿ ಪ್ರದರ್ಶಿಸಿದ ಮಾದರಿ ಜಿಲ್ಲಾ ಮಟ್ಟದಲ್ಲಿ ದ್ವೀತೀಯ ಬಹುಮಾನ ಪಡೆದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ಅಕ್ಷರಾ ಅರುಣ ಮಹಾಲೆ ತಾಲೂಕಾ ಮಟ್ಟದಲ್ಲಿ ದ್ವೀತಿಯ ಬಹುಮಾನ ಪಡೆದು ಜಿಲ್ಲಾ ಮಟ್ಟದಲ್ಲಿ ಸಮಾದಾನಕರ ಬಹುಮಾನ ಪಡೆದಿದ್ದಾಳೆ. ಜನಸಂಖ್ಯಾ ಶಿಕ್ಷಣ ಕಾರ್ಯಕ್ರಮದಡಿಯಲ್ಲಿ ನಡೆದ ಪಾತ್ರಾಭಿನಯ ಸ್ಪರ್ಧೆಯಲ್ಲಿ ಈ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಅಕ್ಷರಾ ಮಹಾಲೆ. ಜನ್ಮಿತಾ ಹರಿಕಾಂತ, ಶ್ರೇಯಾ ಹರಿಕಾಂತ, ಮಮತಾ ಗೌಡ, ಜಯಶ್ರೀ ಸಿಂದೆ ಇವರು ಭಾಗವಹಿಸಿ ತಾಲೂಕಾ ಮಟ್ಟದಲ್ಲಿ ಪ್ರಥಮ ಬಹುಮಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ವಿಜ್ಞಾನ ಶಿಕ್ಷಕರಾದ ಸುಧೀರ ನಾಯಕ ಅವರು ಬರೆದು ನಿರ್ದೇಶಿಸಿದ “ಮೌಡ್ಯ ಮಹಿಳೆ” ಎಂಬ ವೈಜ್ಞಾನಿಕ ನಾಟಕವು ತಾಲೂಕಾ ಮಟ್ದಲ್ಲಿ ತೃತೀಯ ಬಹುಮಾನ ಪಡೆದಿದೆ. ಬಹುಮಾನ ವಿಜೇತ ವಿದ್ಯಾರ್ಥಿಗಳನ್ನು ಹಾಗೂ ಮಾರ್ಗದರ್ಶನ ಮಾಡಿದ ಶಿಕ್ಷಕರಾದ ಸುಧೀರ ನಾಯಕ ಅವರನ್ನು ಮುಖ್ಯಾಧ್ಯಾಪಕ ಚಂದ್ರಕಾoತ ಜಿ. ಗಾಂವಕರ್,ಎಎಸ್‌ಡಿಎ0ಸಿ ಅಧ್ಯಕ್ಷ ಉಮೇಶ ಬಂಟ, ತಾರಾನಾಥ ಗಾಂವಕರ, ಹಾಗೂ ಸದಸ್ಯರುಗಳು ಹರ್ಷ ವ್ಯಕ್ತಪಡಿಸಿದ್ದಾರೆ.