Slide
Slide
Slide
previous arrow
next arrow

ವೈದ್ಯರಿಲ್ಲದ ದಾಸನಕೊಪ್ಪ ಪಿ.ಎಚ್.ಸಿ.: ರೋಗಿಗಳ ಪರದಾಟ

300x250 AD

ಶಿರಸಿ: ತಾಲೂಕಿನ ಬದನಗೊಡ ಗ್ರಾಮ ಪಂಚಾಯತ್ ವ್ಯಾಪ್ತಿಯ ದಾಸನಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರಿಲ್ಲದೆ ರೋಗಿಗಳ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.

ಈ ಆಸ್ಪತ್ರೆ ವ್ಯಾಪ್ತಿಯಲ್ಲಿ 20000 ಜನ ಸಂಖ್ಯೆಯಿದ್ದು ಅದಲ್ಲದೆ ಹಾನಗಲ್ ತಾಲೂಕಿನಿಂದಲೂ ಅನೇಕ ರೋಗಿಗಳು ಬರುತಿದ್ದರೂ ವೈದ್ಯರೇ ಇಲ್ಲದೇ ರೋಗಿಗಳು ಪರದಾಡುವಂತಾಗಿದೆ.

ಈ ಹಿಂದೆ ಇದ್ದ ಡಾಕ್ಟರ್ ಶ್ರೇಯಸ್ ಒಂದು ವರ್ಷ ಗ್ರಾಮೀಣ ಸೇವೆ ಮುಗಿಸಿ ಹೋಗಿದ್ದು, ಅವರ ಬಳಿಕ ಯಾವೊಬ್ಬ ವೈದ್ಯರೂ ನೇಮಕವಾಗದಿರುವುದು ದುಃಖಕರ ವಿಷಯವಾಗಿದೆ ಎಂಬ ಮಾತುಗಳು ಸಾರ್ವಜನಿಕ ವಲಯದಿಂದ ಕೇಳಿ ಬಂದಿದೆ.

300x250 AD

ಈ ವಿಷಯವನ್ನು ತಾಲೂಕಾ ವೈದ್ಯಾಧಿಕಾರಿಗಳ ಗಮನ ತಂದಿದ್ದು, ಹಿರಿಯ ಅಧಿಕಾರಿಗಳು,ಜನ ಪ್ರತಿನಿಧಿಗಳು ಇತ್ತ ಕಡೆ ಗಮನ ಹರಿಸಬೇಕೆಂದು ಸ್ಥಳೀಯ ಯುವರಾಜ. ಜೆ. ಗೌಡ ಆಗ್ರಹಿಸಿದ್ದಾರೆ.

Share This
300x250 AD
300x250 AD
300x250 AD
Back to top