• Slide
    Slide
    Slide
    previous arrow
    next arrow
  • ಮೃತ ಹೋಮ್ ಗಾರ್ಡ್ ಮನೆಗೆ ಡಾ. ಸಂಜು ನಾಯಕ ಭೇಟಿ: ಸಾಂತ್ವನ

    300x250 AD

    ಶಿರಸಿ: ಕಳೆದ ಐದು ದಿನಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡ ಗೃಹರಕ್ಷಕ ಸಿಬ್ಬಂದಿ ಮನೆಗೆ ಜಿಲ್ಲಾ ಹೋಮ್ ಗಾರ್ಡ್ ಕಮಾಂಡೆಂಟ್ ಡಾ.ಸಂಜು ನಾಯಕ ರವಿವಾರ ಭೇಟಿಯಾಗಿ ಕುಟುಂಬದವರಿಗೆ ಸಾಂತ್ವನ ಹೇಳಿದರು.

    ಈ ಸಂದರ್ಭದಲ್ಲಿ ಸಾವಿಗೆ ಕಾರಣವನ್ನು ಹಾಗೂ ಸ್ಥಳವನ್ನು ಪರಿಶೀಲಿಸಿ ಮಾತನಾಡಿದ ಅವರು, ನಾನು ನೂತನವಾಗಿ ಜಿಲ್ಲಾ ಕಮಾಂಡರ್ ಹುದ್ದೆಯನ್ನು ಅಲಂಕರಿಸಿದ್ದೇನೆ. ಅಂದೇ ನಮ್ಮ ಸಿಬ್ಬಂದಿ ಜಗದೀಶ ಭರತ್ ಮಡಗಾಂವಕರ ಸಾವು ಕಂಡಿರುವ ವಿಷಯ ತಿಳಿದು ಬಹಳ ನೋವಾಗಿದೆ. ಕಳೆದ ಹದಿನೈದು ವರ್ಷಗಳಿಂದ ಗೃಹರಕ್ಷಕನಾಗಿ ಕಾರ್ಯನಿರ್ವಹಿಸುತ್ತಿದ್ದ ಜಗದೀಶನ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬಕ್ಕೆ ಆ ದುಖಃವನ್ನು ಸಹಿಸುವ ಶಕ್ತಿ ನೀಡಲಿ ಎಂದು ಬೇಡಿಕೊಳ್ಳುತ್ತೇನೆ ಎಂದರು.

    ಇದೇ ಸಂದರ್ಭದಲ್ಲಿ ಕುಟುಂಬಕ್ಕೆ ಡಾ. ಸಂಜು ನಾಯಕ ವೈಯಕ್ತಿಕವಾಗಿ ಧನ ಸಹಾಯದ ಚೆಕ್ ನೀಡಿದರು.

    300x250 AD

    ಈ ವೇಳೆಯಲ್ಲಿ ಕಾರವಾರ ಮಲ್ಲಾಪುರದ ಪ್ರಭು, ಎಂ.ಎಚ್. ಬಂಡೇರ್, ಸಂತೋಷ ನೇತ್ರೇಕರ, ಕಲ್ಪನಾ ಗೌಡ ಮುಂತಾದವರು ಉಪಸ್ಥಿತರಿದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top