Slide
Slide
Slide
previous arrow
next arrow

ಅಕ್ರಮವಾಗಿ ಮರಳು ಸಾಗಾಟ; ಚಾಲಕ ಪರಾರಿ, ಲಾರಿ ವಶಕ್ಕೆ

300x250 AD

ಹೊನ್ನಾವರ: ಯಾವುದೇ ಪಾಸ್ ಪರ್ಮಿಟ್ ಇಲ್ಲದೆ ಲಾರಿಯಲ್ಲಿ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿ ವಾಹನ ವಶಕ್ಕೆ ಪಡೆದಿದ್ದು, ಚಾಲಕ ಪರಾರಿಯಾಗಿದ್ದಾನೆ.

ರಾಷ್ಟ್ರೀಯ ಹೆದ್ದಾರಿ ೬೬ರ ಕರ್ಕಿ, ಹಳದೀಪುರದಲ್ಲಿ ರಸ್ತೆಯಲ್ಲಿ ಪಿಎಸೈ ಸಾವಿತ್ರಿ ನಾಯಕ ಅವರು ಗಸ್ತು ಕರ್ತವ್ಯದಲ್ಲಿದ್ದಾಗ ಕರ್ಕಿ ಕೋಣಕಾರದ ಶ್ರೀಕುಮಾರ ಪೆಟ್ರೋಲ್ ಬಂಕ್ ಹತ್ತಿರ ವಾಹನ ಚಾಲಕನು ತನ್ನ ಲಾರಿಯಲ್ಲಿ ಮರಳನ್ನು ತುಂಬಿಕೊAಡು ಕುಮಟಾ ಕಡೆಗೆ ಹೋಗುತ್ತಿದ್ದ ಎನ್ನಲಾಗಿದೆ. ಈ ವೇಳೆ ಪೊಲೀಸರು ನೋಡಿ ಕೂಡಲೇ ಪೊಲೀಸ್ ಜೀಪನ್ನು ನಿಲ್ಲಿಸಿ ಪಿಎಸೈ ಹಾಗೂ ಸಿಬ್ಬಂದಿಗಳು ಕೈಸನ್ನೆ ಮಾಡಿದ್ದಾರೆ. ಲಾರಿ ಚಾಲಕನಿಗೆ ಲಾರಿ ನಿಲ್ಲಿಸಲು ಸೂಚಿಸಿದಾಗ ಚಾಲಕನು ತನ್ನ ವಾಹನವನ್ನು ನಿಲ್ಲಿಸಿದ್ದಾನೆ.

300x250 AD

ಆದರೆ ಈ ವೇಳೆ ಲಾರಿಯಿಂದ ಇಳಿದು ಕತ್ತಲೆಯಲ್ಲಿ ಓಡಿ ಹೋಗಿದ್ದಾನೆ ಎನ್ನಲಾಗಿದೆ. ಪೊಲೀಸರು ಆತನಿಗೆ ಹಿಡಿಯಲು ಪ್ರಯತ್ನಿಸಿದರೂ ಕತ್ತಲಾಗಿದ್ದರಿಂದ ಎಸ್ಕೆಪ್ ಆಗಿದ್ದಾನೆ. ಆತನು ನಿಲ್ಲಿಸಿ ಬಿಟ್ಟು ಹೋದ ಲಾರಿಯಲ್ಲಿ ಸುಮಾರು ೫ ಬರಾಸ್‌ನಷ್ಟು ಕಟ್ಟಡ ನಿರ್ಮಾಣದ ಮರಳು ತುಂಬಿದ್ದು ಕಂಡುಬAದಿದೆ. ಮರಳನ್ನು ತುಂಬಿಕೊAಡು ಸಾಗಾಟ ಮಾಡುತ್ತಿದ್ದ ಲಾರಿ ವಾಹನ ಹಾಗೂ ಮರಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಕುರಿತ ಮುಂದಿನ ಕ್ರಮಕ್ಕೆ ತಹಶೀಲ್ದಾರ ಅವರಲ್ಲಿ ನಿವೇದಿಸಿದ್ದಾರೆ.

Share This
300x250 AD
300x250 AD
300x250 AD
Back to top