Slide
Slide
Slide
previous arrow
next arrow

ಆರೋಗ್ಯ ತಪಾಸಣಾ ಶಿಬಿರ ಯಶಸ್ವಿ

300x250 AD

ಹೊನ್ನಾವರ: ತಾಲೂಕಿನ ಕವಲಕ್ಕಿಯ ಶ್ರೀಭಾರತೀ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆರೋಗ್ಯ ತಪಾಸಣಾ ಶಿಬಿರ ಜರುಗಿತು.

ಕಾರ್ಯಕ್ರಮ ಉದ್ಘಾಟಿಸಿದ ಆಡಳಿತಾಧಿಕಾರಿ ಎಂ.ಎಸ್.ಹೆಗಡೆ ಗುಣವಂತೆ ಮಾತನಾಡಿ, ಆರೋಗ್ಯವಂತ ಮಗು ಶೀಘ್ರಗತಿಯಲ್ಲಿ ಕಲಿಯುತ್ತದೆ. ಆ ಮಗುವಿನಲ್ಲಿ ನೆನಪಿನ ಶಕ್ತಿ ಹೆಚ್ಚಲಿದೆ ಎಂದರು. ವೈದ್ಯ ಸುಬ್ರಹ್ಮಣ್ಯ ಹೆಗಡೆ ಮಾತನಾಡಿ, ಆರೋಗ್ಯವಂತರು ಸುಖಕರ ಜೀವನವನ್ನು ನಡೆಸಲು ಸಾಧ್ಯ, ವಿದ್ಯಾರ್ಥಿಗಳು ಪೌಷ್ಟಿಕ ಆಹಾರವನ್ನು ಸೇವಿಸಬೇಕು. ಪ್ರತಿಯೊರ್ವರು ಸ್ವಚ್ಚತೆಗೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.

300x250 AD

ಮುಖ್ಯ ಶಿಕ್ಷಕಿ ವೈಲೆಟ್ ಫರ್ನಾಂಡಿಸ್ ಸ್ವಾಗತಿಸಿದರು. ಶಿಕ್ಷಕಿ ಪ್ರತಿಮಾ ಬಿ.ಎಂ. ವಂದಿಸಿದರು. ರೇಷ್ಮಾ ಜೋಗಳೆಕರ್ ನಿರ್ವಹಿಸಿದರು. ಶಿಕ್ಷಕ ಶಿಕ್ಷಕಿಯರು ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Share This
300x250 AD
300x250 AD
300x250 AD
Back to top