ಹೊನ್ನಾವರ: ವಿದ್ಯಾರ್ಥಿಗಳು ಶೈಕ್ಷಣಿಕ ಚಟುವಟಿಕೆಯ ಜೊತೆ ಜೊತೆಯಲಿ ಸ್ಪರ್ಧಾ ಜಗತ್ತಿಗೆ ಸವಾಲಾಗಿ ಬೆಳೆಯಲು ಪ್ರತಿಭಾ ಕಾರಂಜಿ ಸಹಾಯಕಾರಿ ಎಂದು ಶಿಕ್ಷಕ ಸಂಘದ ಅಧ್ಯಕ್ಷ ಎಂ.ಜಿ.ನಾಯ್ಕ ಹೇಳಿದರು.
ಪಟ್ಟಣದ ಹೋಲಿ ರೋಜರಿ ಕಾನ್ವೆಂಟ್‌ನಲ್ಲಿ ನಡೆದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿದ್ಯಾರ್ಥಿ ಜೀವನದಲ್ಲಿ ನಡೆಯುವ ಇಂತಹ ಸ್ಪರ್ಧೆಗಳು ಮುಂದಿನ ಭವಿಷ್ಯತ್ತಿಗೆ ದಾರಿ ದೀಪವಾಗಲಿದೆ ಎಂದರು. ಕಾರ್ಯಕ್ರಮ ಉದ್ಘಾಟಿಸಿ ಕ್ಷೇತ್ರ ಸಮನ್ವಾಧಿಕಾರಿ ಎಸ್.ಎಂ.ಹೆಗಡೆ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಸ್ಪರ್ಧಾ ಮನೋಭಾವ ತುಂಬಾ ಮಹತ್ವವಾಗಿದೆ. ಪ್ರತಿಭಾ ಕಾರಂಜಿ ವಿದ್ಯಾರ್ಥಿಗಳ ಪ್ರತಿಭೆ ಅನಾವರಣಗೊಳ್ಳಲು ಸಾಧ್ಯ. ಪ್ರತಿಯೊಬ್ಬ ವಿದ್ಯಾರ್ಥಿಗಳು ಸ್ಪರ್ಧಾ ಮನೋಭಾವನೆಯಿಂದ ಭಾಗವಹಿಸಬೇಕು ಎಂದರು. ಪತ್ರಿಕಾ ರಂಗದ ಸಾಧನೆಗೆ ಹಿರಿಯ ಪತ್ರಕರ್ತರಾದ ಜಿ.ಯು.ಭಟ್ ಸನ್ಮಾನಿಸಿ ಗೌರವಿಸಿದರು. ಸನ್ಮಾನ ಸ್ವೀಕರಿಸಿ ಪತ್ರಕರ್ತ ಜಿ.ಯು.ಭಟ್ಟ ಮಾತನಾಡಿ, ಒಂದೊ0ದು ವಿದ್ಯಾರ್ಥಿಗಳಲ್ಲಿ ಒಂದೊ0ದು ಪ್ರತಿಭೆ ಅಡಗಿರುತ್ತದೆ. ಅದನ್ನು ರಾಷ್ಟ್ರಮಟ್ಟದವರೆಗೂ ನಿಮ್ಮ ಪ್ರತಿಭೆ ಅನಾವರಣಗೊಳ್ಳಲು ಇಂತಹ ಕಾರ್ಯಕ್ರಮ ಸಹಕಾರಿಯಾಗಲಿದೆ ಎಂದರು.
ವೇದಿಕೆಯಲ್ಲಿ ದೈಹಿಕ ಶಿಕ್ಷಕ ಸಂಘದ ಜಿಲ್ಲಾಧ್ಯಕ್ಷೆ ಸಾಧನಾ ಬರ್ಗಿ, ಸಿಸ್ಟರ್ ರೂಪಾ, ಶಿಕ್ಷಣ ಸಂಯೋಜಕ ಪ್ರಮೋದ ನಾಯ್ಕ, ಬಿ.ಆರ್.ಪಿ.ಗಜಾನನ ನಾಯ್ಕ, ಶಿಕ್ಷಕ ಸಂಘದ ಲಕ್ಷ್ಮಿ ಎಚ್. ಸಮೂಹ ಸಂಪನ್ಮೂಲ ವ್ಯಕ್ತಿ ಇಸಾಕ್ ಶೇಖ್, ಮುಂತಾದವರು ಉಪಸ್ಥಿತರಿದ್ದರು. ಸಮೂಹ ಸಂಪನ್ಮೂಲ ಕೇಂದ್ರದ ಪ್ರಕಾಶ ಶೇಟ್ ಸ್ವಾಗತಿಸಿ, ಶಿಕ್ಷಕಿ ಪುಷ್ಪಾ ನಾಯ್ಕ ವಂದಿಸಿದರು