Slide
Slide
Slide
previous arrow
next arrow

ಕಾಂಗ್ರೆಸ್ ಸರಕಾರದಿಂದ ರೈತ ವಿರೋಧಿ ನೀತಿ ಖಂಡಿಸಿ ಬಿಜೆಪಿ ರೈತಮೋರ್ಚಾದಿಂದ ಮನವಿ

300x250 AD

ಹೊನ್ನಾವರ: ರಾಜ್ಯದಲ್ಲಿ ಆಡಳಿತಕ್ಕೆ ಬಂದಿರುವ ಕಾಂಗ್ರೆಸ್ ಸರಕಾರವು ರೈತ ವಿರೋಧಿ ನಿಯಮವನ್ನು ಅನುಸುರಿತ್ತಿದೆ ಎಂದು ಬಿಜೆಪಿ ಮತ್ತು ಪಕ್ಷದ ರೈತಮೋರ್ಚಾ ಘಟಕದಿಂದ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ಈ ಹಿಂದೆ ರಾಜ್ಯದಲ್ಲಿ ಆಡಳಿತ ನಡೆಸಿದ ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ರೈತ ಪರ ಅನೇಕ ಯೋಜನೆಗಳನ್ನು ಕಾಂಗ್ರೇಸ್ ಸರ್ಕಾರ ಸ್ಥಗಿತಗೊಳಿಸಿ ರೈತರಿಗೆ ಅನ್ಯಾಯ ಮಾಡಿದೆ. ಅದರಲ್ಲಿ ರೈತ ವಿದ್ಯಾನಿಧಿ, ಕಿಸಾನ ಸಮ್ಮಾನ ಯೋಜನೆಯ ಮೂಲಕ ಸಿಗುತ್ತಿದ್ದ 4000 ಸಾವಿರ ರೂಪಾಯಿ ಭೂ ಸಿರಿ ಯೋಜನೆ, ಶ್ರಮಶಕ್ತಿ ಯೋಜನೆ ಮತ್ತು ರೈತ ಸಂಪದ ಯೋಜನೆಗಳನ್ನು ಕೈಬಿಟ್ಟಿದೆ. ಅಧಿಕಾರಕ್ಕೆ ಬರುವಾಗ ರೈತರ ಹೆಸರನ್ನು ಬಳಸಿ ಅಧಿಕಾರ ಸಿಕ್ಕ ಮೇಲೆ ಅವರನ್ನು ತುಳಿಯುವಂತಹ ಕಾರ್ಯವು ರಾಜ್ಯದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮಾಡುತ್ತಿವೆ. ಈಗಾಗಲೇ ಹಲವು ರೈತರು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ರಾಜ್ಯದಲ್ಲಿ ಬರಗಾಲದಂತ ಪರಿಸ್ಥಿತಿ ಇದ್ದು ಯಾವುದೇ ಕ್ರಮ ಕೈಗೊಂಡಿಲ್ಲ. ಈ ಎಲ್ಲಾ ರೈತ ವಿರೋಧಿ ಮತ್ತು ಜನ ವಿರೋಧಿ ನೀತಿಗಳನ್ನು ಖಂಡಿಸುತ್ತಿದ್ದು ರಾಜ್ಯಪಾಲರು ರೈತರ, ಜನ ಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸುವ0ತೆ ಸರಕಾರಕ್ಕೆ ಆದೇಶ ನೀಡುವಂತೆ ಮನವಿಯಲ್ಲಿ ಉಲ್ಲೇಖಿಸಿದ್ದಾರೆ.

ಬಿಜೆಪಿ ಮಂಡಲಧ್ಯಕ್ಷ ರಾಜೇಶ ಭಂಡಾರಿ ಮಾತನಾಡಿ, ಕಾಂಗ್ರೇಸ್ ಸರ್ಕಾರ ಗ್ಯಾರಂಟಿ ಯೋಜನೆಯನ್ನು ಅನುಷ್ಠಾನಗೊಳಿಸುವ ಭರದಲ್ಲಿ ರೈತರ ಹಲವು ಯೋಜನೆಯನ್ನು ರದ್ದುಗೊಳಿಸಿ ಅನ್ಯಾಯ ಮಾಡಿದೆ. ಕಾವೇರಿ ನೀರು ಬರಗಾಲದ ಸಮಯದಲ್ಲಿಯೂ ತಮಿಳುನಾಡಿಗೆ ಬಿಡುವ ಮೂಲಕ ರೈತರಿಗೆ ಘೋರ ಅನ್ಯಾಯವೆಸಗಿದೆ. ರೈತರಿಗೆ ನೆರವಾಗಲು ಸರ್ಕಾರಕ್ಕೆ ಸೂಚಿಸುವಂತೆ ರಾಜ್ಯಪಾಲರಿಗೆ ಆಗ್ರಹಿಸಿದರು.

300x250 AD

ತಹಶೀಲ್ದಾರ ರವಿರಾಜ ದಿಕ್ಷೀತ್ ಮನವಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ರೈತ ಮೋರ್ಚಾ ಅಧ್ಯಕ್ಷ ಎನ್.ಎಸ್.ಹೆಗಡೆ, ಮಾಧ್ಯಮ ವಕ್ತಾರರಾದ ಎಂ.ಎಸ್.ಹೆಗಡೆ, ಪ.ಪಂ.ಸದಸ್ಯರಾದ ಶಿವರಾಜ ಮೇಸ್ತ, ವಿಜು ಕಾಮತ್, ಸುಭಾಷ ಹರಿಜನ, ವಿನೋದ ಮೇಸ್ತ, ನಿಶಾ ಶೇಟ್, ಸುಜಾತ ಮೇಸ್ತ, ನಾಗರತ್ನ ಕೊನೇರಿ, ಭಾರತಿ ಭಂಡಾರಿ, ಪಕ್ಷದ ಮುಖಂಡರಾದ ದತ್ತಾ ಅವಧಾನಿ, ಗಣೇಶ ಪೈ ಮತ್ತಿತರರು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top