ಭಟ್ಕಳ: ಇಲ್ಲಿನ ಸೋನಾರಕೇರಿಯ ದೈವಜ್ಞ ಸಭಾಭವನದಲ್ಲಿ ಜ್ಞಾನೇಶ್ವರಿ ಮಹಿಳಾ ಮಂಡಳಿಯಿ0ದ ಕೃಷ್ಣಾಷ್ಠಮಿಯ ಹಿನ್ನೆಲೆಯಲ್ಲಿ ಮುದ್ದು ರಾಧೆ, ಮುದ್ದು ಕೃಷ್ಣ- ಯಶೋಧೆ ಕೃಷ್ಣ ಹಾಗೂ ಭಗವದ್ಗೀತಾ ಪಠಣ ಸ್ಪರ್ಧೆಯು ಅತ್ಯಂತ ಯಶಸ್ವಿಯಾಗಿ ಸಂಪನ್ನಗೊ0ಡಿತು.
ದೈವಜ್ಞ ಸಮಾಜದ ಅಧ್ಯಕ್ಷ ಸುಧಾಕರ ಮಾನಕಾಮೆ ದೀಪಬೆಳಗಿ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭಹಾರೈಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಗಂಗಾಧರ ನಾಯ್ಕ ಮಾತನಾಡಿ, ಜ್ಞಾನೇಶ್ವರಿ ಮಹಿಳಾ ಮಂಡಳಿ ಅತ್ಯಂತ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿದ್ದು, ಮಹಿಳಾ ದಿನಾಚರಣೆ, ಕೃಷ್ಣ ಜನ್ಮಾಷ್ಠಮಿಯ ಸಂದರ್ಭದಲ್ಲಿ ನಮ್ಮ ಸಂಸ್ಕೃತಿ ಪರಂಪರೆಯನ್ನು ಪೋಷಿಸುವಂಥ ಕಾರ್ಯಕ್ರವನ್ನು ವ್ಯವಸ್ಥಿತವಾಗಿ ಸಂಘಟಿಸುತ್ತಿರುವುದು ಅಭಿನಂದನಾರ್ಹ ಕಾರ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಜ್ಞಾನೇಶ್ವರಿ ಮಹಿಳಾ ಮಂಡಳಿ ಅಧ್ಯಕ್ಷೆ ಪರಿಮಳಾ ರಾಜಶೇಖರ್ ಶೇಟ್ ಮಾತನಾಡಿ, ನಮ್ಮ ಮಹಿಳಾಮಂಡಳಿಯ ವತಿಯಿಂದ ಆಯೋಜಿಸುವ ಎಲ್ಲ ಕಾರ್ಯಕ್ರಮಗಳಿಗೆ ದೈವಜ್ಞ ಸಮಾಜದ ಅಧ್ಯಕ್ಷರಾದಿಯಾಗಿ ಸರ್ವ ಸದಸ್ಯರು, ದೈವಜ್ಞ ಯುವಕ ಮಂಡಳಿಯು ನೀಡುವ ಸಹಕಾರವು ನಮ್ಮ ಉತ್ಸಾಹವನ್ನು ಹೆಚ್ಚಿಸಿದೆ ಎಂದರಲ್ಲದೇ ಮಹಿಳಾ ಮಂಡಳಿಯ ಎಲ್ಲ ಸದಸ್ಯರು ಉತ್ಸಾಹದಿಂದ ಕೃಷ್ಣ ಜನ್ಮಾಷ್ಠಮಿಯ ಅಂಗವಾಗಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ನಿಜಕ್ಕೂ ಸಂತಸ ತಂದಿದೆ ಎಂದು ನುಡಿದು ಎಲ್ಲರ ಸಹಕಾರವನ್ನು ನೆನೆದರು.
ಕಾರ್ಯಕ್ರಮದಲ್ಲಿ ವಿದ್ಯಾ ಭಾರತಿ ಶಾಲೆಯ ಮುಖ್ಯಾಧ್ಯಾಪಕಿ ರೂಪ ಖಾರ್ವಿ, ಶಿಕ್ಷಕ ಸುರೇಶ ಮರ್ಡೇಶ್ವರ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ವಿವಿಧ ಸ್ಪರ್ಧೆಗಳ ನಿರ್ಣಯವನ್ನು ನೀಡಿದರು. ಯುವಕ ಮಂಡಳಿ ಅಧ್ಯಕ್ಷರಾದ ಅಣ್ಣಪ್ಪ ಕೊಗ್ಗ ಶೇಟ್, ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಿರಿಯ ವಿಭಾಗದ ಭಗವದ್ಗೀತೆ ಪಠಣದಲ್ಲಿ ಮನ್ವಿತಾ ಮಂಜುನಾಥ್ ಶೇಟ್ ಪ್ರಥಮ, ರಿತೀಶ ರಾಜೇಶ್ ಶೆಟ್ ದ್ವಿತೀಯ, ಪಾವನಿ ಜನಾರ್ದನ್ ಶೇಟ್ ತೃತೀಯ, ಹಿರಿಯರ ವಿಭಾಗದಲ್ಲಿ ಜನನಿ ಜನಾರ್ಧನ್ ಶೆಟ್ ಪ್ರಥಮ, ಪ್ರೇರಣ ಸುಬ್ರಹ್ಮಣ್ಯ ದ್ವಿತೀಯ. ಸ್ಫೂರ್ತಿ ಶೇಟ್ ತೃತೀಯ, ಮಹಿಳೆಯರ ವಿಭಾಗದಲ್ಲಿ ಮಮತಾ ಶೇಟ್ ದ್ವಿತೀಯ, ರೇಖಾ ರಾಯ್ಕರ್, ನರ್ಮದಾ ಶೇಟ್ ತೃತೀಯ, ಮುದ್ದುಕೃಷ್ಣ ಮುದ್ದು ರಾಧಾ ಸ್ಪರ್ಧೆಯ ಕಿರಿಯರ ವಿಭಾಗದಲ್ಲಿ ಗೌತಮಿ ಶೇಟ್ ಪ್ರಥಮ, ಓಂಕಾರ್ ಶೇಟ್ ದ್ವಿತೀಯ, ಸಾಯಿಚರಣ್ ಶೇಟ್ ತೃತೀಯ, ಹಿರಿಯರ ವಿಭಾಗದಲ್ಲಿ ಯಶಸ್ವಿನಿ ಶೇಟ್ ಪ್ರಥಮ, ರೀತಿಶಾ ಶೇಟ್ ದ್ವಿತೀಯ, ಶ್ರೀಲಕ್ಷ್ಮಿ ಶೇಟ್ ತೃತೀಯ, ಯಶೋಧಾ ಕೃಷ್ಣ ಸ್ಪರ್ಧೆಯಲ್ಲಿ ಪ್ರಭಾ ಮತ್ತು ಓಂಕಾರ್ ಪ್ರಥಮ, ಪುಷ್ಪಾಂಜಲಿ ಮತ್ತು ಸಾನ್ವಿ ದ್ವಿತೀಯ, ದೀಪ ಮತ್ತು ಗೌತಮಿ, ರೇಣುಕಾ ಸಾಯಿಚರಣ್ ಮತ್ತು ಮಂಜುಳಾ ಅನಿಶ್ ತೃತೀಯ ಬಹುಮಾನ ಪಡೆದರು.
ಮಕ್ಕಳು ಹಾಗೂ ತಾಯಂದಿರು ಉತ್ಸಾಹ ಸಂಭ್ರಮದಿ0ದ ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಮುದ್ದು ರಾಧೆ, ಮುದ್ದು ಕೃಷ್ಣ, ಯಶೋಧಾ ಕೃಷ್ಣ ಕಾರ್ಯಕ್ರಮವು ಸುಂದರವಾಗಿ ಮೂಡಿ ಬಂದು ಎಲ್ಲರ ಗಮನ ಸೆಳೆಯಿತು. ಸವಿತಾ ರತ್ನಾಕರ್ ಶೇಟ್ ನಿರೂಪಿಸಿ ಎಲ್ಲರನ್ನೂ ಸ್ವಾಗತಿಸಿ ವಂದಿಸಿದರು. ದೀಪಾ ಸಂದೀಪ್ ಶೇಟ್ ಪ್ರಾರ್ಥಿಸಿದರು. ಕಾರ್ಯಕ್ರಮದಲ್ಲಿ ಜ್ಞಾನೇಶ್ವರಿ ಮಹಿಳಾ ಮಂಡಳಿಯ ಸದಸ್ಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.