• Slide
  Slide
  Slide
  previous arrow
  next arrow
 • ಜಲ ಸಂರಕ್ಷಣೆ, ಮಹಿಳಾ ಸಬಲೀಕರಣ ಕುರಿತು ಬೀದಿನಾಟಕ

  300x250 AD

  ಹೊನ್ನಾವರ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ಜ್ಞಾನವಿಕಾಸ ಮಹಿಳಾ ಕಾರ್ಯಕ್ರಮದಡಿ ಸಾಮಾಜಿಕ ಜಾಗೃತಿಯ ಉದ್ದೇಶದಿಂದಾಗಿ ಜಲ ಸಂರಕ್ಷಣೆ ಹಾಗೂ ಮಹಿಳಾ ಸಬಲೀಕರಣ ವಿಷಯದ ಕುರಿತಾಗಿ ಪಟ್ಟಣದ ಶರಾವತಿ ವೃತ್ತದಲ್ಲಿ ಬೀದಿನಾಟಕ ಪ್ರದರ್ಶಿಸಲಾಯಿತು.

  ಹಿರಿಯ ಪತ್ರಕರ್ತ ಜಿ.ಯು.ಭಟ್ ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ಸಮಾಜದ ಅಂಧಕಾರವನ್ನು ಹೋಗಲಾಡಿಸಲು ಜಾಗೃತಿಯ ಅಗತ್ಯವಿದ್ದು, ಆ ನಿಟ್ಟಿನಲ್ಲಿ ನಾಟಕಗಳು ಜನತೆಗೆ ಬೇಗನೆ ಮನದಟ್ಟು ಆಗಲಿದೆ. ಶ್ರೀಕ್ಷೇತ್ರ ಧರ್ಮಸ್ಥಳದ ಸಮಾಜಮುಖಿ ಕಾರ್ಯಕ್ರಮಗಳು ಸಮಾಜದ ತಳಮಟ್ಟದಲ್ಲಿ ಸದೃಢಗೊಳ್ಳುವ ಮೂಲಕ ಪರಿವರ್ತನೆಗೆ ಭದ್ರ ಬುನಾದಿ ಹಾಕುತ್ತಿದ್ದು, ಇಂದಿನ ಈ ಕಾರ್ಯಕ್ರಮವು ಸಾಕ್ಷಿಯಾಗಿದೆ. ಹಲವು ರಂಗದಲ್ಲಿ ಮಹಿಳೆ ಸಾಧನೆ ಮಾಡುತ್ತಿದ್ದು, ಇಂದೂ ಹಲವು ಕುಟುಂಬಗಳ ನಿರ್ವಹಣೆ ಇವರಿಂದ ನಡೆಯುತ್ತಿದೆ. ಸರ್ಕಾರವು ಆ ನಿಟ್ಟಿನಲ್ಲಿ ಹಲವು ಯೋಜನೆಗಳನ್ನು ತಂದಿದ್ದು ಅದರ ಸದ್ಬಳಕೆ ಮಾಡಿಕೊಳ್ಳುವಂತೆ ಸಲಹೆ ನೀಡಿದರು.

  ಹೊನ್ನಾವರ ಠಾಣೆಯ ಎಎಸ್‌ಐ ಸುಶಾಂತ್, ಸಮಾಜದಲ್ಲಿ ಇಂದಿಗೂ ಹಲವು ಕಾನೂನು ಬಾಹಿರ ಕೃತ್ಯಗಳು ನಡೆಯುತ್ತಿದ್ದು, ಅದನ್ನು ಜಾಗೃತಿ ಮೂಡಿಸುವ ಮೂಲಕ ತಡೆಯಬೇಕಿದೆ. ಅದರಲ್ಲೂ ನೀರು ಪ್ರತಿ ಜೀವಿಗೂ ಅಗತ್ಯವಿದ್ದು, ಪ್ರತಿಯೊರ್ವರು ಮಿತ ಬಳಕೆಯ ಜೊತೆಗೆ ನೀರಿನ ಸಂರಕ್ಷಣೆಗೆ ಮುಂದಾಗುವ0ತೆ ತಿಳಿಸಿ ನಗಾರಿ ಬಾರಿಸುವ ಮೂಲಕ ಜಾಗೃತಿ ಮೂಡಿಸಿದರು.

  300x250 AD

  ಬೈಂದೂರಿನ ಹೆಸರಾಂತ ಶ್ರೀವಿನಾಯಕ ಕಲಾ ತಂಡದ ಸದಸ್ಯರು ಜಲಸಂರಕ್ಷಣೆ ಹಾಗೂ ಮಹಿಳಾ ಸಬಲೀಕರಣ ವಿಷಯವನ್ನೊಳಗೊಡಂತೆ ಗ್ರಾಮೀಣ ಸೊಗಡಿನೊಂದಿಗೆ ಅತ್ಯದ್ಭುತವಾಗಿ ಬೀದಿನಾಟಕ ಪ್ರದರ್ಶಿಸಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು. ಕಾರ್ಯಕ್ರಮದಲ್ಲಿ ಯೋಜನೆಯ ಒಕ್ಕೂಟ ಅಧ್ಯಕ್ಷರು, ಶೌರ್ಯ ವಿಪತ್ತು ನಿರ್ವಹಣಾ ಘಟಕ ಸದಸ್ಯರು, ಸ್ವ- ಸಹಾಯ ಸಂಘದ ಸದಸ್ಯರು, ಸೇವಾಪ್ರತಿನಿಧಿಗಳು, ಸಾರ್ವಜನಿಕರು ಪಾಲ್ಗೊಂಡಿದ್ದರು. ಮೇಲ್ವಿಚಾರಕ ನಾಗರಾಜ ಕೆ. ಸ್ವಾಗತಿಸಿ, ಜ್ಞಾನ ವಿಕಾಸ ಸಮನ್ವಯಧಿಕಾರಿ ವಿನಯ ಕಾರ್ಯಕ್ರಮ ನಿರ್ವಹಿಸಿದರು.

  Share This
  300x250 AD
  300x250 AD
  300x250 AD
  Leaderboard Ad
  Back to top