• Slide
    Slide
    Slide
    previous arrow
    next arrow
  • ಸಮರಸದ ಜೀವನವೇ ಸುಮನಸರ ಸುಂದರ ಜೀವನ ಮಾರ್ಗ: ಡಾ.ಜಿ.ಎ. ಹೆಗಡೆ ಸೋಂದಾ

    300x250 AD

    ಶಿರಸಿ: ಇಲ್ಲಿನ ಮಾರಿಕಾಂಬಾ ದೇವಸ್ಥಾನದಲ್ಲಿ ಸೆ.12ರಂದು ಡಾ. ಜಿ.ಎ. ಹೆಗಡೆ ಸೋಂದಾ ನಡೆಸಿಕೊಟ್ಟ ಶ್ರಾವಣದ ವಿಶೇಷ ಕಾರ್ಯಕ್ರಮ “ರಂಗಾತರಂಗ’’ ಯಕ್ಷಕಥನ ವೈಭವ, ನವೀನ ಮಾದರಿಯ ಕಾರ್ಯಕ್ರಮವಾಗಿ ಪ್ರೇಕ್ಷಕರಿಗೆ ರಸದೌತಣವಾಗಿ ಪ್ರಶಂಸೆಗೆ ಕಾರಣವಾಯಿತು. ಶಿಕ್ಷಣ, ಸಾಹಿತ್ಯ ಮತ್ತು ಯಕ್ಷಗಾನ ಕ್ಷೇತ್ರದಲ್ಲಿ ಅಪಾರ ಸಾಧನೆಗೈದ ಡಾ. ಜಿ.ಎ. ಹೆಗಡೆ ಸೋಂದಾ ಈ ಕಾರ್ಯಕ್ರಮವನ್ನು ವೈಚಾರಿಕ ಉತ್ತುಂಗದಲ್ಲಿ ಯಕ್ಷಗಾನದ ಶೈಲಿ, ಕಿರ್ತನ ಶೈಲಿ ಮತ್ತು ಪ್ರವಚನ ಮಾದರಿಯನ್ನು ಸಂಮಿಳಿತಗೊಳಿಸಿ ವಿಶಿಷ್ಟವಾಗಿ ಶಿಷ್ಟತೆಯ ಚೌಕಟ್ಟಿನಲ್ಲಿ, ತಿಳಿ ಹಾಸ್ಯದೊಂದಿಗೆ ದೃಷ್ಟಾಂತವನ್ನು ಉದ್ಗರಿಸುತ್ತಾ ಮಾತಿನ ಮಂಟಪ ಕಟ್ಟಿನಿಲ್ಲಿಸಿದ್ದು ಕಾರ್ಯಕ್ರಮದ ಕಳೆ ಏರಿಸಿತು.

    ಕುರುಕ್ಷೇತ್ರ ಯುದ್ದಕ್ಕೆ ಸೇನಾಬಲದೊಂದಿಗೆ ಹೊರಟ ಬಲರಾಮ, ತೀರ್ಥಯಾತ್ರೆಗೆ ಹೋಗಬೇಕಾದ ಸಂದರ್ಭ ಒದಗಿಬರುವ, ಕೃಷ್ಣ ಸಂಧಾನದ ಅಖ್ಯಾನ ವಿಶೇಷವನ್ನು ಯುದ್ದದಿಂದಾಗುವ ಅನಾಹುತ, ಜೀವನಾಶ,ಮತ್ತು ಸರ್ವ ಸಂಪತ್ತು ಲಯವಾಗುವ ಚಿತ್ರಣ ನೀಡಿ, ಸಮರ ಬಿಟ್ಟ್ಟು ಸಮರಸವೇ ಜೀವನ ಎಂಬ ತತ್ವ ಅಳವಡಿಸಿಕೊಂಡರೆ ಸುಮನಸರಿಗೆ ಅದುವೆ ಸುಂದರ ಜೀವನ ಎಂದು ಪ್ರತಿಪಾದಿಸಿದರು. ಬಲರಾಮನ ಹುಂಬುತನ, ಕೌರವನ ಛಲ, ಕೃಷ್ಣನ ಚಾತುರ‍್ಯ ಮತ್ತು ತಂತ್ರಗಾರಿಕೆಯನ್ನು ವೈಚಾರಿಕ ಎತ್ತರದಲ್ಲಿ ಚಿತ್ರಿಸಿ ರಂಗನ ಅಂತರಂಗವನ್ನು ಅನಾವರಣಗೊಳಿಸಿದರು. ಗೋಮಹಿಮಾ ವಿಶೇಷವನ್ನು ಚರ್ಚೆಗೆ ಒಳಪಡಿಸಿ ವೈಚಾರಿಕವಾಗಿ ವಿಮರ್ಶಿಸಿ ಕಾರ್ಯಕ್ರಮಕ್ಕೆ ಕಳೆ ತಂದು ಕಲಾ ಪ್ರೇಮಿಗಳಿಗೆ ಮುದ ನೀಡಿದರು. ಧರ್ಮದರ್ಶಿ ಮಂಡಳಿಯವರು ಡಾ. ಹೆಗಡೆಯವರನ್ನು ದೇವಾಲಯದ ಪದ್ದತಿಯಂತೆ ಸತ್ಕರಿಸಿ ವಿದ್ವತ್ ಗೌರವ ಸಮರ್ಪಿಸಿದರು. ಮುಂದಿನ ವಾರ ಈ ಕಾರ್ಯಕ್ರಮ ಯುಟ್ಯೂಬ್‌ನಲ್ಲಿ ವೀಕ್ಷಿಸಬಹುದಾಗಿದೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top