• Slide
    Slide
    Slide
    previous arrow
    next arrow
  • ಗೃಹರಕ್ಷಕ ದಳದ ಜಿಲ್ಲಾ ಗೌರವ ಸಮಾದೇಷ್ಠರಾಗಿ ಡಾ.ಸಂಜು ನಾಯಕ ನೇಮಕ

    300x250 AD

    ಅಂಕೋಲಾ: ಗೃಹರಕ್ಷಕ ದಳದ ಜಿಲ್ಲಾ ಗೌರವ ಸಮಾದೇಷ್ಠರಾಗಿ ಡಾ.ಸಂಜು ಟಿ.ನಾಯಕ ಅವರನ್ನು ರಾಜ್ಯ ಸರಕಾರ ನೇಮಕಗೊಳಿಸಿ ಆದೇಶ ಹೊರಡಿಸಿದೆ.

    ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಿ.ಟಿ.ಜಯಕುಮಾರ ಅವರು ಅಧಿಕೃತವಾಗಿ ಬುಧವಾರದಂದು ತಮ್ಮ ಕಛೇರಿಯಲ್ಲಿ ಅಧಿಕಾರವನ್ನು ಹಸ್ತಾಂತರಿಸಿ ಅವರಿಗೆ ಶುಭ ಹಾರೈಸಿದರು. ಕ್ರಿಯಾಶೀಲ ವ್ಯಕ್ತಿತ್ವದ ಡಾ.ಸಂಜು ಟಿ.ನಾಯಕ ಅವರು ಆರೋಗ್ಯ, ಸಾಮಾಜಿಕ, ಶೈಕ್ಷಣಿಕ ರಂಗಗಳಲ್ಲಿ ವಿಶೇಷವಾಗಿ ಗುರುತಿಸಿಕೊಂಡು ಜನಪ್ರಿಯತೆಗೆ ಕಾರಣರಾದವರು. ಶಾಂತಿನಿಕೇತನ ದಂತ ಚಿಕಿತ್ಸಾಲಯವನ್ನು ಕಳೆದ ಎರಡು ದಶಕಗಳಿಂದ ಮುನ್ನೆಸಿಕೊಂಡು ಬಂದು ಖ್ಯಾತ ವೈದ್ಯರಾಗಿ, ಬಡವರ ವೈದ್ಯರೆಂದರೆ ಖ್ಯಾತನಾಮರಾದವರು.

    300x250 AD

    ಡಾ.ಸಂಜು ಟಿ.ನಾಯಕ ಅವರ ತಂದೆ ನಿವೃತ್ತ ಶಿಕ್ಷಕ ತಿಮ್ಮಣ್ಣ ನಾಯಕ, ತಾಯಿ ನಿವೃತ್ತ ಶಿಕ್ಷಕಿ ಶಾಂತಿ ಟಿ.ನಾಯಕ ಸಂಸ್ಕಾರಯುತ ಮಡಿಲಿನಲ್ಲಿ ಬೆಳೆದ ಡಾ.ಸಂಜು ಎಲ್ಲರ ಪ್ರೀತಿಯ ಮಗನಾಗಿ ನಿಂತವರು. ಡಾ.ಸಂಜು ಅವರ ಹಿರಿಯ ಸಹೋದರ ಬೆಂಗಳೂರಿನ ಬಚಪನ್ ಪ್ಲೇಸ್ಕೂಲ್ ಸಂಸ್ಥಾಪಕ ಮಂಜುನಾಥ ನಾಯಕ, ಸಹೋದರಿ ಬೆಂಗಳೂರಿನ ಸಿಐಡಿ ವಿಭಾಗದಲ್ಲಿ ಡಿವೈಎಸ್ಪಿಯಾಗಿ ಕರ್ತವ್ಯದಲ್ಲಿರುವ, ರಾಷ್ಟ್ರಪ್ರಶಸ್ತಿ ಪುರಸ್ಕೃತೆ ಅಂಜುಮಾಲ ನಾಯಕ, ಕಿರಿಯ ಸಹೋದರ ಡಾ.ಸಮೀರ ನಾಯಕ, ಪತ್ನಿ ಶ್ವೇತಾ ಅವರ ಪ್ರೋತ್ಸಾಹದ ಒರತೆಯಲ್ಲಿ ಅಂಕೋಲೆಯ ಹೆಮ್ಮೆಗೆ ಗರಿ ಮೂಡಿಸಿದವರಾಗಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top