Slide
Slide
Slide
previous arrow
next arrow

ಮೂರು ರಾಷ್ಟ್ರೀಯ ಪ್ರಶಸ್ತಿ ಪಡೆದ ಅಂಕೋಲಾದ ಡಾ.ಸಂಜೀವ ನಾಯಕ

300x250 AD

ಅಂಕೋಲಾ: ಸದಾ ಶೈಕ್ಷಣಿಕ ಮತ್ತು ಕ್ರಿಯಾಶೀಲ ಚಟುವಟಿಕೆಗಳ ಮೂಲಕ ಗುರುತಿಸಿಕೊಂಡಿರುವ ಅಂಕೋಲಾ ಮೂಲದ, ಬೆಳಗಾವಿಯ ಕೆ.ಎಲ್.ಇ ಸಂಸ್ಥೆಯ ಸಹ ಪ್ರಾಧ್ಯಾಪಕ, ಡಾ.ಸಂಜೀವ ಆರ್.ನಾಯಕ ಅವರಿಗೆ ಬೇಂದ್ರೆ ನುಡಿಸಿರಿ ರಾಷ್ಟ್ರೀಯ ಪ್ರಶಸ್ತಿ, ರಾಷ್ಟ್ರೀಯ ಕನಕ ಪ್ರಶಸ್ತಿ, ಡಾ.ಎಸ್.ರಾಧಕೃಷ್ಣನ್ ರಾಷ್ಟ್ರಿಯ ಆದರ್ಶ ಶಿಕ್ಷಕ ಪ್ರಶಸ್ತಿಗಳು ಪ್ರದಾನಗೊಂಡಿದೆ.

ಕನಕ ಅಧ್ಯಯನ ಪೀಠ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ಮತ್ತು ಚೇತನ ಪೌಂಡೇಶನ್ ಕರ್ನಾಟಕದ ಸಹಕಾರದಿಂದ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದ ವತಿಯಿಂದ ಕರ್ನಾಟಕದ ಸೂಕ್ತ ಸಾಧಕರನ್ನು ಗುರುತಿಸಿ ಆಯ್ಕೆ ಮಾಡಿ ಈ ಪ್ರಶಸ್ತಿ ನೀಡಲಾಗುತ್ತಿದೆ. ಈ ವರ್ಷದ ಡಾ.ಬೇಂದ್ರೆ ನುಡಿಸಿರಿ ರಾಷ್ಟ್ರೀಯ ಪ್ರಶಸ್ತಿ, ರಾಷ್ಟ್ರೀಯ ಕನಕ ಪ್ರಶಸ್ತಿ, ಡಾ.ಎಸ್.ರಾಧಕೃಷ್ಣನ್ ರಾಷ್ಟ್ರೀಯ ಆದರ್ಶ ಶಿಕ್ಷಕ ಪ್ರಶಸ್ತಿಗಳನ್ನು ಉಕ ಜಿಲ್ಲೆಯ ಅಂಕೋಲಾ ತಾಲ್ಲೂಕಿನ ವಂದಿಗೆ ಗ್ರಾಮದ ಡಾ.ಸಂಜೀವ.ಆರ್.ನಾಯಕ ಅವರ ಶಿಕ್ಷಣ, ಸಂಶೋಧನೆ, ಸಂಘಟನೆ ಮತ್ತು ಉತ್ತರ ಕರ್ನಾಟಕದ ಸಾಮಾಜಿಕ ಕ್ಷೇತ್ರದಲ್ಲಿ ನೀಡಿದ ಕೊಡುಗೆಯ ಗಮನಿಸಿ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಲ್ಲಿ ಸೆ.10ರಂದು ನಡೆದ ಧಾರವಾಡದ ನುಡಿ ಸಡಗರ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಗಳನ್ನು ಇವರಿಗೆ ಪ್ರದಾನ ಮಾಡಲಾಯಿತು.

ಡಾ.ಸಂಜೀವ.ಆರ್.ನಾಯಕ ಅವರು ಅಂತರ ರಾಷ್ಟ್ರೀಯ ಸಂಶೋಧನಾ ಮ್ಯಾಗಜಿನ್ ಪ್ರತಿಕೆಯ ನ್ಯೂಡೆಲ್ಲಿ ಅಕ್ಕಿನಿಕ್ಕಿ ಪಬ್ಲಿಕೇಷನ್ ಇದರ ಉಪಸಂಪದಾಕರಾಗಿ ಹಲವು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಈಗಾಗಲೇ 15 ಕ್ಕೂ ಹೆಚ್ಚು ಅಂತರ್ ರಾಷ್ಟ್ರೀಯ ಪ್ರತಿಕೆಯಲ್ಲಿ ವಿವಿಧ ಸಾಮಾಜಿಕ ಮತ್ತು ಸಂಶೋಧನಾ ಸಂಬಂಧಿತ ಲೇಖನಗಳು ಪ್ರಕಟವಾಗಿವೆ. ಹಾಗೇಯೆ 20 ಕ್ಕೂ ಹೆಚ್ಚು ಅಂತರ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಹಾಗೂ 300 ಕ್ಕೂ ಹೆಚ್ಚು ರಾಷ್ಟ್ರೀಯ ಮತ್ತು ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ಪತ್ರಿಕೆ ಮಂಡನೆ ಮಾಡಿರುವ ಕೀರ್ತಿ ಇವರದ್ದಾಗಿದೆ. ಹಲವಾರು ಕಾರ್ಯಕ್ರಮಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಿಸಿದ ಇವರು ಹಲವಾರು ರಾಷ್ಟ್ರೀಯ ಮತ್ತು ರಾಜ್ಯಮಟ್ಟದ ವಿಚಾರ ಸಂಕಿರಣಗಳನ್ನು ಸಂಘಟಿಸಿದ್ದಾರೆ. ಎರಡು ವಿಶ್ವವಿದ್ಯಾಲಯಗಳ (ಬಿ.ಓ.ಎಸ್/ಬಿ.ಓ.ಇ) ಪಠ್ಯಪುಸ್ತಕ ಮಂಡಳಿಯ ಸದ್ಯಸರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

300x250 AD

ಹಲವು ಸಂಘ ಸಂಸ್ಥೆಯಲ್ಲಿ ಸಾಮಾಜಿಕ ಕಾರ್ಯದಲ್ಲಿ ನಿರಂತರವಾಗಿರುವದನ್ನು ಗಮನಿಸಿ ಇವರಿಗೆ ಶಿಕ್ಷಣ, ಸಾಹಿತ್ಯ, ಸಂಘಟನೆ ಸಂಶೋಧನೆ ಮತ್ತು ಉತ್ತರ ಕರ್ನಾಟಕದ ಸಾಮಾಜಿಕ ಕ್ಷೇತ್ರದಲ್ಲಿ ನೀಡಿದ ಕೊಡುಗೆಯನ್ನು ಗುರುತಿಸಿ ಡಾ ಬೇಂದ್ರೆ ನುಡಿಸಿರಿ ರಾಷ್ಟ್ರೀಯ ಪ್ರಶಸ್ತಿ, ರಾಷ್ಟ್ರೀಯ ಕನಕ ಪ್ರಶಸ್ತಿ, ಡಾ.ಎಸ್.ರಾಧಕೃಷ್ಣನ್ ರಾಷ್ಟ್ರೀಯ ಆದರ್ಶ ಶಿಕ್ಷಕ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ. ಪ್ರಶಸ್ತಿ ಪ್ರದಾನ ಸಮಾರಂದಲ್ಲಿ ಕಾರ್ಯಕ್ರಮದ ಉದ್ಘಾಟಕರಾಗಿ ಪಾಲ್ಗೊಂಡ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಕುಲಪತಿ ಪ್ರೊ. ಕೆ.ಬಿ.ಗುಡಸಿ, ಅಧ್ಯಕ್ಷತೆವಹಿಸಿದ್ದ ನುಡಿ ಸಡಗರದ ಸಂಯೋಜಕ ಡಾ.ಚಂದ್ರಶೇಖರ ಮಾಡಲಗೇರಿ, ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಕುಲಸಚಿವರು (ಮೌಲ್ಯಮಾಪನ) ಪ್ರೊ.ಸಿ.ಕೃಷ್ಣಮೂರ್ತಿ, ಗೌರವ ಉಪಸ್ಥಿತರಾಗಿದ್ದ ಕುಲಸಚಿವ (ಆಡಳಿತ) ಡಾ.ಚಂದ್ರಮ್ಮ ಎಂ. ಸೇರಿದಂತೆ ಮೊದಲಾದ ಗೌರವಾನ್ವಿತ ಗಣ್ಯರ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನ ನಡೆಯಿತು.

Share This
300x250 AD
300x250 AD
300x250 AD
Back to top