ಮುಂಡಗೋಡ: ಕಳಪೆ ಕಾಮಗಾರಿಗಳನ್ನ ಮಾಡಿದ್ದಾರೆಂದು ಆರೋಪಿಸಿ ತಾಲೂಕಿನ ಹುನಗುಂದ ಗ್ರಾಮ ಪಂಚಾಯತ ವ್ಯಾಪ್ತಿಯ ರೈತರು ಗ್ರಾಮಸಭೆಯಲ್ಲಿ ಚಿಕ್ಕನೀರಾವರಿ ಇಲಾಖೆಯ ಅಧಿಕಾರಿಗೆ ತರಾಟೆ ತೆಗೆದುಕೊಂಡರು.
ಅತ್ತಿವೇರಿ ಡ್ಯಾಂ ಕಾಲುವೆ ಕಾಮಗಾರಿ ಅಲ್ಪಸ್ವಲ್ಪ ಮಟ್ಟದ ಕೆಲಸ ಮಾಡಿ ಬಿಲ್ ಮಾಡಿ ಹಣ ನುಂಗಿದ್ದಾರೆ. ಕಾಮಗಾರಿ ಸರಿಯಾಗಿ ಮಾಡದೆ ಇರುವುದರಿಂದ ಕಾಲುವೆಯಲ್ಲಿ ನೀರು ಬರುತ್ತಿಲ್ಲವೆಂದು ರೈತರು ಸಭೆಯಲ್ಲಿ ಅಧಿಕಾರಿಗೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.
ಈ ವೇಳೆ ಅಧಿಕಾರಿ, ಕಾಮಗಾರಿ ಮಾಡುವಾಗ ತಾವು ಕೇಳಬೇಕಿತ್ತು. ಕಾಮಗಾರಿ ಕಳಪೆಯಾಗಿದೆ ಎಂದು ನಾನು ಹೆಳಲು ಆಗುವುದಿಲ್ಲ. ನೀವು ಠರಾವು ಮಾಡಿ, ಅದರ ಬಗ್ಗೆ ತನಿಖೆ ಮಾಡುತ್ತಾರೆ. ಕಳಪೆ ಕಾಮಗಾರಿಯಾದರೆ ಆಗಿನ ಸಂದರ್ಭದಲ್ಲಿದ್ದ ಅಧಿಕಾರಿಗಳನ್ನ ಅಮಾನತು ಮಾಡುತ್ತಾರೆ ಎಂದು ಚಿಕ್ಕನೀರಾವರಿ ಇಲಾಖೆಯ ದ್ವಿತೀಯ ದರ್ಜೆ ಸಹಾಯಕ ಮಂಜುನಾಥ ಮಡ್ಲಿ ಸಭೆಗೆ ತಿಳಿಸಿದರು.
ಹೆಸ್ಕಾಂ ಟ್ರಾನ್ಸ್ಫಾರ್ಮರ್ ಅಳವಡಿಸುವುದಕ್ಕೆ ಲೈನ್‌ಮ್ಯಾನ್‌ಗಳು ಎರಡು- ಮೂರು ಸಾವಿರು ಲಂಚ ಪಡೆಯುತ್ತಾರೆ. ಲಂಚ ಕೊಡದಿದ್ದರೆ ಗದ್ದೆ ಕಡೆ ಕಣ್ಣು ಕೂಡಾ ಹಾಯಿಸುವುದಿಲ್ಲ. ಇಂಥÀರನ್ನು ವರ್ಗಾವಣೆ ಮಾಡಬೇಕು ಎಂದು ಠರಾವು ಮಾಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.