Slide
Slide
Slide
previous arrow
next arrow

‘ನೇಶನ್ ಬಿಲ್ಡರ್ ಪ್ರಶಸ್ತಿ’ ಪಡೆದ ಶಿಕ್ಷಕಿ ಹೇಮಾವತಿ ನಾಯ್ಕ್

300x250 AD

ಶಿರಸಿ: ಇಲ್ಲಿನ‌ ಮಾರಿಕಾಂಬಾ ಪ್ರೌಢ ಶಾಲೆಯ ಗಣಿತ ಶಿಕ್ಷಕಿ ಹೇಮಾವತಿ ಜೆ. ನಾಯ್ಕ ಅವರಿಗೆ ರೋಟರಿ ಸಂಸ್ಥೆ ನೀಡುವ ‘ನೇಶನ್ ಬಿಲ್ಡರ್ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.
ರೋಟರಿ ಸೇಂಟರ್’ನಲ್ಲಿ‌ ನಡೆದ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಶಿಕ್ಷಣ ಇಲಾಖೆಯ ಸೇವೆಯನ್ನು
2004 ರಿಂದ ಆರಂಭಿಸಿದ ಹೇಮಾವತಿ‌ ನಾಯ್ಕ ಅವರು 2006ರಿಂದ
ಮಾರಿಕಾಂಬಾ ಶಾಲೆಯಲ್ಲಿ ವಿದ್ಯಾದಾನ ‌ಮಾಡುತ್ತಿದ್ದಾರೆ. ಸೃಜನಾತ್ಮಕ ಚಟುವಟಿಕೆಯಲ್ಲಿ ನಿರತರಾಗಿರುವ ಅವರಿಗೆ ‌ನೇಶನ್ ಬಿಲ್ಡರ್ ಪ್ರಶಸ್ತಿ‌ ಲಭಿಸಿದ್ದಕೆ ಶ್ಲಾಘನೆ ವ್ಯಕ್ತವಾಗಿದೆ.

ಈಗಾಗಲೇ ಇದೇ ವರ್ಷ ಮಾರಿಕಾಂಬಾ ಪ್ರೌಢ ಶಾಲೆಯ ಕನ್ನಡ ಶಿಕ್ಷಕ ನಾರಾಯಣ ಭಾಗವತ್ ಅವರಿಗೆ ರಾಷ್ಟ್ರ, ವಿಜ್ಞಾನ ಶಿಕ್ಷಕಿ ಜಯಲಕ್ಷ್ಮೀ ಗುನಗಾ ಅವರಿಗೆ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ಲಭಿಸಿದ್ದು ಉಲ್ಲೇಖನೀಯ.

300x250 AD
Share This
300x250 AD
300x250 AD
300x250 AD
Back to top