• Slide
  Slide
  Slide
  previous arrow
  next arrow
 • ದಿನಕರ ಮಾಸಾಚರಣೆ; ಉಪನ್ಯಾಸ ಕಾರ್ಯಕ್ರಮ

  300x250 AD

  ಕಾರವಾರ: ನಗರದ ದಿವೇಕರ ಕಾಲೇಜಿನಲ್ಲಿ ಕೆನರಾ ವೆಲ್‌ಫೇರ್ ಟ್ರಸ್ಟ್ ಡೇ ಹಾಗೂ ಡಾ.ದಿನಕರ ದೇಸಾಯಿ ಪ್ರತಿಷ್ಠಾನದ ವತಿಯಿಂದ ದಿನಕರ ಮಾಸಾಚರಣೆ-2023 ಹಾಗೂ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮಕ್ಕೆ ಗಣ್ಯರು ಎಲ್ಲಾ ದಿನಕರ ದೇಸಾಯಿಯವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಚಾಲನೆ ನೀಡಿದರು.

  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾರವಾರ ತಾಲ್ಲೂಕಿನ  ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ರಾಮ ನಾಯ್ಕ ಮಾತನಾಡಿ ದಿನಕರ ದೇಸಾಯಿ ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ತಾಲೂಕಿನಲ್ಲಿ ಶಾಲೆ ಕಾಲೇಜುಗಳನ್ನು ತೆರೆಯುವ ಮೂಲಕ ಉತ್ತರ ಕನ್ನಡದ ಅಕ್ಷರ ಸೂರ್ಯ ಎನಿಸಿಕೊಂಡಿದ್ದಾರೆ. ಇಂದಿನ ಪೀಳಿಗೆ ದಿನಕರ ದೇಸಾಯಿಯವರ ಕೃತಿ,ಅವರ ವ್ಯಕ್ತಿತ್ವ ಹಾಗೂ ಅವರ ಸೇವೆಗಳನ್ನು ತಿಳಿದುಕೊಳ್ಳಬೇಕಾಗಿದೆ. ಅಲ್ಲದೇ ತಿಳಿಸುವ ಕಾರ್ಯ ಸಹ  ಆಗಬೇಕಾಗಿದೆ ಎಂದರು.

  300x250 AD

  ಮುಖ್ಯ ಅತಿಥಿಗಳಾಗಿ ಆಗಮಿಸಿದ ಪಿ.ಎಮ್.ಹೈಸ್ಕೂಲ್ ನಿವೃತ್ತ ಮುಖ್ಯೋಧ್ಯಾಪಕರಾದ ರವೀಂದ್ರ ಕೇಣಿ ಮಾತನಾಡಿ ದಿನಕರ ದೇಸಾಯಿಯವರ ಬದುಕು -ಬರಹ,ಅವರ ಕೊಡುಗೆಗಳನ್ನು ಸಂಕ್ಷಿಪ್ತವಾಗಿ ವಿವರಿಸಿದರು. ದಿವೇಕರ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲರಾದ ಮೋಹನ ಹಬ್ಬುರವರು ದಿನಕರ ದೇಸಾಯಿಯವರ ‘ದಿನಕರಾಲಿ ಕವನ’ ಎಂಬ ಕೊಂಕಣಿ ಕವನಗಳನ್ನು ಹೇಳಿ ಅದರ ಆಶಯವನ್ನು  ಸಾದರಪಡಿಸಿದರು. ದಿವೇಕರ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲರಾದ ಆರ್ ಎಸ್.ಹಬ್ಬುರವರು ಡಾ.ದಿನಕರ ದೇಸಾಯಿಯವರ ಸಾಧನೆ ಹಾಗೂ ಸೇವೆಗಳ ಕುರಿತು ಮಾಹಿತಿ ನೀಡಿದರು.

  Share This
  300x250 AD
  300x250 AD
  300x250 AD
  Leaderboard Ad
  Back to top