Slide
Slide
Slide
previous arrow
next arrow

ಪಹರೆ ವೇದಿಕೆಯಿಂದ 455ನೇ ವಾರದ ಸ್ವಚ್ಛತೆ

300x250 AD

ಕಾರವಾರ: ಪಹರೆ ವೇದಿಕೆಯಿಂದ 455ನೇ ವಾರದ ಸ್ವಚ್ಛತೆಯನ್ನು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮತ್ತು ಹಿರಿಯ ಸಿವಿಲ್ ನ್ಯಾಯಾಧಿಶರಾದ ರೇಣುಕಾರವರ ಉಪಸ್ಥಿತಿಯಲ್ಲಿ ನಡೆಸಿದರು.
ಪಹರೆಯ ಚಟುವಟಿಕೆ ಮತ್ತು ಸ್ವಚ್ಛತೆಯ ಕುರಿತು ಪಹರೆಯ ಕಾಳಜಿಯ ಬಗ್ಗೆ ಅಪಾರ ಶ್ಲಾಘನೆ ವ್ಯಕ್ತಪಡಿಸಿದ ನ್ಯಾಯಾಧಿಶರು ಇಂತಹ ಸಂಸ್ಥೆಗಳು ದೇಶದ ಒಳಿತಿಗೆ ಅವಶ್ಯಕವಾಗಿವೆ ಎಂದರು. ಕಳೆದ ಎಂಟುವರೆ ವರ್ಷಗಳಿಂದ ನಿರಂತರವಾಗಿ ಸ್ವಚ್ಛತೆ ನಡೆಸಿ ಬಂದಿರುವ ಪಹರೆಯ ಸಾಧನೆ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಸ್ವಚ್ಛತೆಯನ್ನು ಕಾದಿಟ್ಟುಕೊಂಡು ಹೋಗುವಲ್ಲಿ ಮತ್ತು ಮಲಿನವನ್ನು ತಡೆಯುವಲ್ಲಿ ಇರುವ ಕಾನೂನುಗಳ ಬಗ್ಗೆ ಪಹರೆ ಸದಸ್ಯರಿಗೆ ತಿಳಿಸಿದರು. ಈ ನೆಲದ ಅರಣ್ಯ, ನದಿ, ನೀರು ಕಲುಷಿತಗೊಳ್ಳದಂತೆ ಇರುವಲ್ಲಿ ಕಾನೂನನ್ನು ಹೇಗೆ ಸಮರ್ಥವಾಗಿ ಬಳಸಿಕೊಳ್ಳಬಹುದು ಎಂಬ ಬಗ್ಗೆ ತಿಳಿಸಿ ಹೇಳಿದರು. ಅಷ್ಟೇ ಅಲ್ಲದೇ ಪಹರೆಯ ಸದಸ್ಯರೊಟ್ಟಿಗೆ ತಾವೂ ಸಹ ಸ್ವಚ್ಛತೆ ಮಾಡಿ, ಪಹರೆ ನೆಟ್ಟ ಗಿಡಗಳ ಆರೈಕೆ ಕಾರ್ಯದಲ್ಲಿ ಸಹ ಪಾಲ್ಗೊಂಡರು. ಈ ಸಂದರ್ಭದಲ್ಲಿ ಪಹರೆಯ ಅಧ್ಯಕ್ಷರಾದ ನಾಗರಾಜ ನಾಯಕ, ಗೌರವಾಧ್ಯಕ್ಷೆ ಕೈರುನ್ನಿಸ ಮತ್ತಿತರರು ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top