ಹಳಿಯಾಳ: ತಾಲೂಕಿನ ಶಿವಾಜಿ ಮೈದಾನದಲ್ಲಿ ನಡೆದ ಹಳಿಯಾಳ ತಾಲೂಕಾ ಮಟ್ಟದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಕ್ರೀಡಾಕೂಟದಲ್ಲಿ ಕೆಎಲ್‌ಎಸ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಪ್ರದರ್ಶನ ನೀಡಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಗುಂಪು ಆಟದಲ್ಲಿ ಬಾಲಕರ ತಂಡಗಳು ಕಬ್ಬಡಿ, ಫುಟ್ಬಾಲ್, ಚೆಸ್ ಹಾಗೂ ಟೆಬಲ್ ಟೆನಿಸ್ ನಲ್ಲಿ ಪ್ರಥಮ ಸ್ಥಾನ, ಬಾಲಕಿಯರ ತಂಡಗಳು ಚೆಸ್, ಟೇಬಲ್ ಟೆನಿಸ್‌ನಲ್ಲಿ ಪ್ರಥಮ ಹಾಗೂ ಕಬ್ಬಡಿ, ಥ್ರೋಬಾಲ್‌ನಲ್ಲಿ ದ್ವೀತಿಯ ಸ್ಥಾನ ಪಡೆದಿದ್ದಾರೆ.
ವೈಯಕ್ತಿಕ ವಿಭಾಗದಲ್ಲಿ ರಾಜು ಬೆಣಚೇಕರ ಗುಂಡು ಎಸೆತ ಹಾಗೂ ಚಕ್ರ ಎಸೆತದಲ್ಲಿ ಪ್ರಥಮ ಹ್ಯಾಮರ್ ಎಸೆತದಲ್ಲಿ ದ್ವಿತೀಯ ಸ್ಥಾನ ಪಡೆದು ತಾಲೂಕಿನ ವೈಯಕ್ತಿಕ ವೀರಾಗ್ರಣಿ ಪಡೆದುಕೊಂಡನು. ಇದಲ್ಲದೇ ಸಾಯಿನಾಥ ಕಾಳೆ ಎತ್ತರ ಜಿಗಿತದಲ್ಲಿ ಪ್ರಥಮ, ನಾಗರಾಜ ರಾಹುತ್ 5000 ಮೀ. ಹಾಗೂ ಗುಡ್ಡಗಾಡು ಓಟದಲ್ಲಿ ದ್ವಿತೀಯ ಹಾಗೂ ಪ್ರಜ್ವಲಿ ಸಿದ್ದಿ 100 ಮೀ. ಓಟದಲ್ಲಿ ದ್ವಿತೀಯ ಸ್ಥಾನವನ್ನು ಪಡೆದರು.
ವಿದ್ಯಾರ್ಥಿಗಳ ಕ್ರೀಡಾ ಸಾಧನೆಯನ್ನು ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷರಾದ ವಿನಾಯಕ್ ಲೋಕುರ, ಕೆ ಎಲ್ ಎಸ್ ಸದಸ್ಯರಾದ ವಿ.ಎಮ್. ದೇಶಪಾಂಡೆ, ಆರ್.ಎಸ್. ಮುತಾಲಿಕ್, ಎ.ಕೆ. ಟಗಾರೆ, ಕಾಲೇಜು ಪ್ರಾಚಾರ್ಯರಾದ ಡಾ. ಎಸ್.ಎಮ್. ಗಲಗಲಿ, ಶೈಕ್ಷಣಿಕ ಸಂಯೋಜಕರಾದ ಶ್ರೀನಿವಾಸ ಪ್ರಭು, ಕ್ರೀಡಾ ನಿರ್ದೇಶಕರಾದ ಮಲ್ಲಿಕಾರ್ಜುನ ಕಾಜಗಾರ, ಉಪನ್ಯಾಸಕರಾದ ಶಾಂತಾರಾಮ ಚಿಬ್ಬುಲಕರ, ಕಛೇರಿ ಅಧಿಕ್ಷಕರಾದ ವಿನಾಯಕ ನಾಯ್ಕ ಹಾಗೂ ಸರ್ವ ಸದಸ್ಯರು ಸಿಬ್ಬಂದಿ ವರ್ಗದವರು ಅಭಿನಂದಿಸಿದರು.