ಹೊನ್ನಾವರ: ಪಟ್ಟಣದ ಎಸ್‌ಡಿಎಮ್ ಪದವಿ ಕಾಲೇಜು ಕ್ರೀಡಾಂಗಣದಲ್ಲಿ ತಾಲೂಕಾ ಮಟ್ಟದ ದಸರಾ ಕ್ರೀಡಾಕೂಟವನ್ನು ತಾಲೂಕಾ ಪಂಚಾಯತ ಕಾರ್ಯನಿರ್ವಹಣಾಧಿಕಾರಿ ಸುರೇಶ್ ನಾಯ್ಕ ಉದ್ಘಾಟಿಸಿದರು.
ನಂತರ ಅವರು ಮಾತನಾಡಿ, ಉತ್ಸಾಹದಿಂದ ಕ್ರೀಡೆಯಲ್ಲಿ ಭಾಗವಹಿಸಿ. ಜಿಲ್ಲಾ,ರಾಜ್ಯ ಮಟ್ಟದಲ್ಲಿ ತಾಲೂಕಿನ ಹೆಸರನ್ನು ಗುರುತಿಸುತ್ತಿರಿ ಎನ್ನುವ ಆಶಯವಿದೆ. ಹೊನ್ನಾವರ ಎನ್ನುವುದು ಕಲೆ, ಕ್ರೀಡೆ, ಸಾಂಸ್ಕೃತಿಕ ವಲಯದಲ್ಲಿ ರಾಜ್ಯಕ್ಕೆ ಮಾದರಿಯಾಗಿದೆ. ಕ್ರೀಡಾ ಕ್ಷೇತ್ರದಲ್ಲಿ ಹಲವು ಸಾಧಕರಿದ್ದಾರೆ. ಅವರಿಂದ ಪ್ರೇರಣೆ ಹೊಂದಿ ಎಂದು ಕ್ರೀಡಾಪಟುಗಳಿಗೆ ಹುರಿದುಂಬಿಸಿದರು. ಸರ್ಕಾರವು ಕ್ರೀಡೆಗೆ ಕ್ರೀಡಾಪಟುಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ. ಸ್ಥಳೀಯವಾಗಿರುವ ಸಂಸ್ಕೃತಿ, ಕ್ರೀಡೆ ಉಳಿಸಲು ನಾವೆಲ್ಲರೂ ಪ್ರಯತ್ನಿಸೋಣ ಎಂದರು.
ಸೀಮಿತ ಅನುದಾನದಲ್ಲಿ ಸರಳವಾಗಿ ಕಾರ್ಯಕ್ರಮ ಆಯೋಜನೆಯಾಗಿದೆ. ಕ್ರೀಡೆಗೆ, ಕ್ರೀಡಾಪಟುಗಳಿಗೆ ಯಾವಾಗಲೂ ಗೌರವ ಸಿಗುತ್ತದೆ. ವಿಶ್ವಾಸ ಮತ್ತು ನಂಬಿಕೆಯಿಂದ ಕೆಲಸ ಮಾಡೋಣ. ಕ್ರೀಡೆ ನಿಮ್ಮೆಲ್ಲರ ಜೀವನದಲ್ಲಿ ದಾರಿ ಆಗಲಿ. ಕ್ರೀಡೆ ಜೊತೆ ಕಲಿಕೆಯಲ್ಲಿಯು ಸಾಧನೆ ಮಾಡಿ ತಾಲೂಕಿನ ಕೀರ್ತಿ ಹೆಚ್ಚಿಸಿ ಎಂದು ಕ್ರೀಡಾಪಟುಗಳಿಗೆ ಕರೆ ನೀಡಿದರು.
ವೇದಿಕೆಯಲ್ಲಿ ಜಿಲ್ಲಾ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷೆ ಸಾಧನಾ ಬರ್ಗಿ, ದೈಹಿಕ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಬಾಬು ನಾಯ್ಕ, ಯುವಜನಸೇವಾ ಕ್ರೀಡಾಧಿಕಾರಿ ಸುಧೀಶ್ ನಾಯ್ಕ ಉಪಸ್ಥಿತರಿದ್ದರು. ಪುರುಷ ಹಾಗೂ ಬಾಲಕಿಯರಿಗೆ ವಿವಿಧ ಕ್ರೀಡಾ ಸ್ಪರ್ಧಾ ಕಾರ್ಯಕ್ರಮ ಜರುಗಿತು. ವಿಜೇತರಿಗೆ ಪ್ರಶಸ್ತಿ ಪತ್ರ ಹಾಗೂ ಪಲಕ ವಿತರಿಸಲಾಯಿತು.