• Slide
    Slide
    Slide
    previous arrow
    next arrow
  • ಅಭಿಮಾನಿಗಳ ಬಳಗದಿಂದ ವಕೀಲ ಜಿ.ಟಿ.ನಾಯ್ಕ ಜನ್ಮದಿನಾಚರಣೆ

    300x250 AD

    ಸಿದ್ದಾಪುರ: ಕಾರವಾರದ ಖ್ಯಾತ ನ್ಯಾಯವಾದಿಗಳಾದ ಶಿಕ್ಷಣ ಪ್ರೇಮಿ, ಕಲಾ, ಕ್ರೀಡೆ ಪ್ರೋತ್ಸಾಹಕ, ಕೊಡುಗೈದಾನಿ ಆಗಿರುವ ಜಿ.ಟಿ.ನಾಯ್ಕ ಮಾಣಿಕನಗುಳಿ ಅವರ ಜನ್ಮದಿನವನ್ನು ಅಭಿಮಾನಿಗಳ ಬಳಗದವರು ಅರ್ಥಪೂರ್ಣವಾಗಿ ಆಚರಿಸಿದ್ದಾರೆ.

    ಅವರ ಜನ್ಮ ದಿನದ ಪ್ರಯುಕ್ತ ಅವರ ಅಭಿಮಾನಿಗಳಿಂದ ಅವರು ಕಲಿತ ಪ್ರೌಢಶಾಲೆಯಾದ ತಾಲೂಕಿನ ಇಟಗಿಯ ಆರ್.ವಿ.ಪ್ರೌಢ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಆಶು ಭಾಷಣ ಸ್ಪರ್ಧೆ ಏರ್ಪಡಿಸಿದ್ದರು. ಇಟಗಿ ರಾಮೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಭಾಷಣ ಸ್ಪರ್ಧೆಯಲ್ಲಿ ಆಯ್ಕೆಯಾದ ಮೂವರು ವಿದ್ಯಾರ್ಥಿಗಳಿಗೆ ಪ್ರಥಮ ದ್ವಿತೀಯ ತೃತೀಯ ಬಹುಮಾನ ವಿತರಿಸಿದರು. ಭಾಗವಹಿಸಿದವರಿಗೆ ಪೆನ್ ಹಾಗೂ ಸಿಹಿ ನೀಡಿಲಾಯಿತು.

    300x250 AD

    ಶಾಲೆಯ ಮುಖ್ಯೋಪಾಧ್ಯಾಯ ಡಿ.ಜಿ ಪೂಜಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ನಮ್ಮ ಶಾಲೆಯಲ್ಲಿ ಓದಿದ ವಿದ್ಯಾರ್ಥಿ ಜಿ.ಟಿ.ನಾಯ್ಕರವರು ಇಂದು ಕಾರವಾರದಲ್ಲಿ ವಕೀಲ ವೃತ್ತಿಯಲ್ಲಿ ಹೆಸರು ಮಾಡಿದ್ದಾರೆ. ಅವರು ದಾನ ಧರ್ಮಗಳನ್ನು ಮಾಡುತ್ತಾ ಇತರರಿಗೆ ಮಾದರಿಯಾಗಿದ್ದಾರೆ. ಇವರ ಅಭಿಮಾನಿಗಳು ಇಂದು ನಮ್ಮ ಶಾಲೆಯಲ್ಲಿ ಈ ರೀತಿಯಾಗಿ ವಿಶೇಷ ಕಾರ್ಯಕ್ರಮ ಆಯೋಜಿಸಿರುವುದು ನಮಗೆ ಸಂತಸ ತಂದಿದೆ. ನೀವು ಸಹ ಶಾಲೆಯಲ್ಲಿ ಓದುತ್ತಿದ್ದೀರಾ ನೀವು ಸಹ ಓದಿನಲ್ಲಿ ಗಮನ ಹರಿಸಿ ಹೆಚ್ಚಿನ ಸಾಧನೆ ಮಾಡಿ ಇತರರಿಗೆ ಮಾದರಿಯಾಗಬೇಕು ಎನ್ನುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.
    ಅಭಿಮಾನಿ ಬಳಗದ ದಿವಾಕರ ನಾಯ್ಕ ಸಂಪಖ0ಡ ಮಾತನಾಡಿ ನಿಮಗೆ ನಿಮ್ಮ ಪಾಲಕರು ಅವರ ಕಷ್ಟದಲ್ಲೂ ಸಹ ಓದಿಸುತ್ತಿದ್ದಾರೆ. ಇದನ್ನು ಅರಿತು ಹೆಚ್ಚಿನ ಅಂಕಗಳನ್ನು ಪಡೆದು ಪ್ರತಿಭಾನ್ವಿತರಾಗಬೇಕು. ವಿವಿಧ ಸ್ಪರ್ಧೆ ಹಾಗೂ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸಾಧನೆಯನ್ನು ಮಾಡಿ ಭವಿಷ್ಯ ರೂಪಿಸಿಕೊಳ್ಳಿ ಎಂದರು.
    ಎನ್.ಎಸ್.ಯು.ಐ ಜಿಲ್ಲಾಧ್ಯಕ್ಷ ಹಾಗೂ ಅಭಿಮಾನಿ ಸಂಘದ ಸದಸ್ಯ ವಿಶ್ವ ಗೌಡ ಮಾತನಾಡಿ ಜಿ.ಟಿ.ನಾಯ್ಕ ಅವರು ಕಷ್ಟ ಎಂದು ಹೋದವರಿಗೆ ದಾನ ಧರ್ಮಗಳನ್ನು ಮಾಡುತ್ತಾ ಇತರರಿಗೆ ಮಾದರಿಯಾಗಿದ್ದಾರೆ. ಅವರು ಕೇವಲ ತಮ್ಮ ವೃತ್ತಿಯನ್ನು ಮಾಡುತ್ತ ಇದ್ದರೆ ನಾವು ಇಂದು ಅವರ ಹುಟ್ಟುಹಬ್ಬವನ್ನು ಇಲ್ಲಿ ಆಚರಿಸುತ್ತಿರಲು ಆಗುತ್ತಿರಲಿಲ್ಲ. ವಿದ್ಯಾರ್ಥಿಗಳಾದ ನೀವು ಇಂತಹ ಕಾರ್ಯಕ್ರಮಗಳಲ್ಲಿ ಧೈರ್ಯದಿಂದ ಭಾಗವಹಿಸಿ ಹೆಚ್ಚು ಹೆಚ್ಚು ತಿಳಿದುಕೊಂಡು ನಾಯಕತ್ವದ ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದರು.
    ಆಶು ಭಾಷಣ ಸ್ಪರ್ಧೆಯಲ್ಲಿ ರಶ್ಮಿ ಪಿ ಗೌಡ ಪ್ರಥಮ, ಶರದಿ ಎಸ್ ಹೆಗಡೆ ದ್ವಿತೀಯ, ತೇಜಸ್ ಎಸ್ ಹೆಗಡೆ ತೃತೀಯ ಬಹುಮಾನ ಪಡೆದುಕೊಂಡರು. ಶಾಲೆಯ ಶಿಕ್ಷಕರು ಸಹಕರಿಸಿದರು. ಈ ಸಂದರ್ಭದಲ್ಲಿ ಸಂಘದ ಸದಸ್ಯರುಗಳಾದ ಅನಿಲ್ ಕೊಠಾರಿ, ಪುರಂದರ ನಾಯ್ಕ, ಜಗದೀಶ ನಾಯ್ಕ ಅವರಗುಪ್ಪ ಮುಂತಾದವರು ಉಪಸ್ಥಿತರಿದ್ದರು. ನಂತರ ಸರಕಾರಿ ಪ್ರಾಥಮಿಕ ಶಾಲೆ ಮೆಣಸಿಯಲ್ಲಿ ವಿದ್ಯಾರ್ಥಿಗಳಿಗೆ ಸಿಹಿ ವಿತರಿಸಿ ಶಾಲೆಯ ಎಲ್ಲ ಮಕ್ಕಳಿಗೆ ಪೆನ್ ನೀಡಿದರು.

    Share This
    300x250 AD
    300x250 AD
    300x250 AD
    Leaderboard Ad
    Back to top