Slide
Slide
Slide
previous arrow
next arrow

ಸೆ.3ಕ್ಕೆ ಭಟ್ಕಳದಲ್ಲಿ ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ ರಿಕ್ಷಾ ಚಾಲಕರಿಗೆ ಸಮವಸ್ತ್ರ ವಿತರಣೆ

300x250 AD

ಭಟ್ಕಳ: ಜಾಲಿಯ ಶ್ರೀ ವೆಂಕಟೇಶ್ವರ ನಾಮಧಾರಿ‌ ವಿದ್ಯಾವರ್ಧಕ ಸಭಾಭವನದಲ್ಲಿ ಶ್ರೀ ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಭಟ್ಕಳದ ಆಟೋ ರಿಕ್ಷಾ, ಚಾಲಕ ಮತ್ತು ಮಾಲಕರಿಗೆ ಉಚಿತ ಪಾಸಿಂಗ್ ಯೋಜನೆ ಹಾಗೂ ಔತಣಕೂಟ, ಸಮವಸ್ತ್ರ ವಿತರಣೆ ಮತ್ತು ಪ್ರಿಂಟಿಂಗ್ ಹುಡ್ ವಿತರಣಾ ಕಾರ್ಯಕ್ರಮವನ್ನು ಸೆ.3, ಭಾನುವಾರ ಬೆಳಿಗ್ಗೆ 10.30ಕ್ಕೆ ಹಮ್ಮಿಕೊಳ್ಳಲಾಗಿದೆ.

ಶಾರದಾ ಮಹಾಬಲೇಶ್ವರ ಹೆಗಡೆ ಉದ್ಘಾಟಿಸಲಿರುವ ಕಾರ್ಯಕ್ರಮಕ್ಕೆ ಟ್ರಸ್ಟ್ ಸಂಸ್ಥಾಪಕ, ಅಧ್ಯಕ್ಷ ಅನಂತಮೂರ್ತಿ ಹೆಗಡೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಭಟ್ಕಳ ಡಿವೈಎಸ್ಪಿ ಶ್ರೀಕಾಂತ ಕೆ., ಉತ್ತರ ಕನ್ನಡ, ಹೊನ್ನಾವರ ರಿಕ್ಷಾ ಚಾಲಕ ಮಾಲಕ ಸಂಘದ ಅಧ್ಯಕ್ಷ ಶಿವರಾಜ ಮೇಸ್ತಾ, ಚಾಲಕ ಮಾಲಕ ಸಂಘದ ಮಾಜಿ ಅಧ್ಯಕ್ಷ ಆರ್.ಜಿ.ನಾಯ್ಕ್ ಕುಮಟಾ ಆಗಮಿಸಲಿದ್ದಾರೆ.

ಭಟ್ಕಳ ಆಟೋ ಚಾಲಕ ಸಂಘದ ಅಧ್ಯಕ್ಷ ಕೃಷ್ಣ ನಾಯ್ಕ್ ಆಸರಕೇರಿ, ರಿಕ್ಷಾ ಚಾಲಕ ಸಂಘ ಗಣೇಶ ಚೌತಿಯ ಅಧ್ಯಕ್ಷ ಮಂಜುನಾಥ್ ನಾಯ್ಕ್ ಮಣ್ಕುಳಿ, ಭಟ್ಕಳ ರಿಕ್ಷಾ ಚಾಲಕ ಸಂಘದ ಉಪಾಧ್ಯಕ್ಷ ಲಚ್ಮಯ್ಯ ನಾಯ್ಕ್ ಚೌತನಿ ಉಪಸ್ಥಿತರಿರಲಿದ್ದಾರೆ.

300x250 AD

ಕಾರ್ಯಕ್ರಮದಲ್ಲಿ ಭೋಜನ ವ್ಯವಸ್ಥೆಯಿದ್ದು, ಸರ್ವರೂ ಕಾರ್ಯಕ್ರಮಕ್ಕೆ ಆಗಮಿಸಲು ಪ್ರಕಟಣೆಯಲ್ಲಿ ಕೋರಲಾಗಿದೆ.

Share This
300x250 AD
300x250 AD
300x250 AD
Back to top