ಶಿರಸಿ: ನಗರದ ಆವೇಮರಿಯಾ ಪ್ರೌಢ ಶಾಲೆಯಲ್ಲಿ ನಡೆದ ನಗರ ಪಶ್ಚಿಮ ವಲಯ ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ಪ್ರತಿಭಾ ಕಾರಂಜಿಯಲ್ಲಿ ಮಿಯಾರ್ಡ್ಸ್ ಚಂದನ ಆಂಗ್ಲ ಮಾಧ್ಯಮ ಶಾಲೆ ನರೇಬೈಲಿನ ವಿದ್ಯಾರ್ಥಿಗಳು ಭಾಗವಹಿಸಿ ಉತ್ತಮ ಪ್ರದರ್ಶನ ತೋರಿ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.
10ನೇ ತರಗತಿಯ ಪ್ರತೀಕ್ಷಾ ಭಟ್ ಕನ್ನಡ ಭಾಷಣ ಪ್ರಥಮ, ಪಿ.ಜಿ.ಶ್ರೇಷ್ಠಾ ಇಂಗ್ಲೀಷ್ ಭಾಷಣ ಪ್ರಥಮ, ಸಮೀಕ್ಷಾ ಹೆಗಡೆ ಸಂಸ್ಕೃತ ಭಾಷಣ ಪ್ರಥಮ, ನಿಖಿತಾ ಭಟ್ ಚರ್ಚಾಸ್ಪರ್ಧೆ ಪ್ರಥಮ, 9ನೇ ತರಗತಿಯ ಪ್ರೇರಣಾ ಮಂಗಳೂರು ಆಶುಭಾಷಣ ಪ್ರಥಮ, ವಸುಂಧರಾ ಹೆಗಡೆ ಗಝಲ್ ಪ್ರಥಮ, 8ನೇ ತರಗತಿಯ ಪ್ರಾರ್ಥನಾ ಜಿ ಭಟ್, ಸಂಸ್ಕೃತ ಧಾರ್ಮಿಕ ಪಠಣ ಪ್ರಥಮ, 10ನೇ ತರಗತಿಯ ಶ್ರೇಯಸ್ ಹೆಗಡೆ ಹಾಗೂ 9ನೇ ತರಗತಿಯ ಪ್ರಮಥ್ ಹೆಗಡೆ ಕ್ವಿಜ್ ನಲ್ಲಿ ಪ್ರಥಮ ಸ್ಥಾನವನ್ನು ಪಡೆದು ತಾಲೂಕಾ ಮಟ್ಟಕ್ಕೆ ಆಯ್ಕೆ ಯಾಗಿದ್ದಾರೆ. 9ನೇ ತರಗತಿಯ ಪ್ರತ್ಯೂಷಾ ಹೆಗಡೆ ಹಿಂದಿ ಭಾಷಣ ದ್ವಿತೀಯ, 10ನೇ ತರಗತಿಯ ಸಿರಿ ಹೆಗಡೆ ಭರತನಾಟ್ಯ ದ್ವಿತೀಯ, 9ನೇ ತರಗತಿಯ ಸ್ಫೂರ್ತಿ ಮಡಿವಾಳ ಛದ್ಮವೇಷ ದ್ವಿತೀಯ, 9ನೇ ತರಗತಿಯ ಗೌತಮಿ ಪಿ. ಹೆಗಡೆ ಮಿಮಿಕ್ರಿಯಲ್ಲಿ ದ್ವಿತೀಯ, 8ನೇ ತರಗತಿ ಪೂರ್ವಿ ಭಟ್ ಜನಪದ ಗೀತೆ ತೃತೀಯ, 9ನೇ ತರಗತಿಯ ಕೀರ್ತಿ ಹೆಗಡೆ ಭಾವಗೀತೆ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ. ಒಟ್ಟೂ ನಡೆದ 20 ಸ್ಪರ್ಧೆಗಳಲ್ಲಿ 8 ಪ್ರಥಮ ಸ್ಥಾನ, 4 ದ್ವಿತೀಯ ಸ್ಥಾನ ,2 ತೃತೀಯ ಸ್ಥಾನ ಪಡೆದಿರುತ್ತಾರೆ.
ಇವರ ಸಾಧನೆಗೆ ಆಡಳಿತ ಮಂಡಳಿ,ಶಿಕ್ಷಕರು,ಪಾಲಕರು ಹರ್ಷವ್ಯಕ್ತಪಡಿಸಿ ಮುಂದಿನ ಹಂತಕ್ಕೆ ಶುಭ ಹಾರೈಸಿದ್ದಾರೆ.