ಶಿರಸಿ: ಉಜ್ಜಯಿನಿಯಲ್ಲಿ ಮಹರ್ಷಿ ಸಾಂದೀಪನಿ ರಾಷ್ಟ್ರೀಯ ವೇದ ವಿದ್ಯಾ ಪ್ರತಿಷ್ಠಾನವು ನಡೆಸಿದ 37 ನೇ ಸ್ಥಾಪನಾ ಮಹೋತ್ಸವದ ಅಂಗವಾಗಿ ನಡೆಸಿದ ರಾಷ್ಟ್ರಸ್ತರೀಯ ವಿವಿಧ ಸ್ಪರ್ಧೆಗಳಲ್ಲಿ ಸ್ವರ್ಣವಲ್ಲೀ ಶ್ರೀ ರಾಜರಾಜೇಶ್ವರೀ ವೇದ ಗುರುಕುಲದ ವಿದ್ಯಾರ್ಥಿಗಳು ಬಹುಮಾನ ಪಡೆದು ಶಾಲೆಗೆ ಹಾಗೂ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.
ವೇದಾಂತ್ಯಾಕ್ಷರೀ ಸ್ಪರ್ಧೆಯಲ್ಲಿ ಆಕಾಶ ಎಸ್. ಕೆ. ಪ್ರಥಮ ಸ್ಥಾನ, ಶ್ರೀಧರ ಜೋಶಿ ತೃತೀಯ ಸ್ಥಾನ ಹಾಗೂ ಋಗ್ವೇದ ಶಲಾಕಾ ಸ್ಪರ್ಧೆಯಲ್ಲಿ
ಕೆ. ಸುಪ್ರೀತ್ ದ್ವಿತೀಯ ಸ್ಥಾನ ಪಡೆದಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳವರು ಆಶೀರ್ವದಿಸಿದ್ದಾರೆ. ಶ್ರೀ ಮಠದ ರಾಜರಾಜೇಶ್ವರೀ ವಿದ್ಯಾಸಂಸ್ಥೆಯ ಉಪಾಧ್ಯಕ್ಷರು, ಕಾರ್ಯದರ್ಶಿಗಳು, ಸದಸ್ಯರು, ಪ್ರಾಚಾರ್ಯರು, ಅಧ್ಯಾಪಕ ವೃಂದ, ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಶುಭ ಹಾರೈಸಿದ್ದಾರೆ.