• Slide
    Slide
    Slide
    previous arrow
    next arrow
  • ಸೆ.1ರಂದು ಮಳೆಗಾಗಿ ಪ್ರಾರ್ಥಿಸಿ ಮಂಜುಗುಣಿಯಲ್ಲಿ ಪರ್ಜನ್ಯ

    300x250 AD

    ಶಿರಸಿ: ಪ್ರಸ್ತುತ ಅನಾವೃಷ್ಠಿಯ ಕಾರಣದಿಂದ ಮಳೆಗಾಗಿ ಶ್ರೀ ದೇವರ ಮೊರೆ ಹೋಗುವುದು ಅನಿವಾರ್ಯವಾಗಿರುವ ಕಾರಣ ತಾಲೂಕಿನ ಮಂಜುಗುಣಿಯ ಶ್ರೀ ಚಿದಂಬರೇಶ್ವರ ದೇವರಲ್ಲಿ ಸೆ.1 ಶುಕ್ರವಾರದಂದು ಬೆಳಿಗ್ಗೆ 10 ಗಂಟೆಯಿಂದ ಪರ್ಜನ್ಯ ಹಾಗೂ ಮಧ್ಯಾಹ್ನ 12:30 ಕ್ಕೆ ಸರಿಯಾಗಿ ಶ್ರೀ ವೇಂಕಟರಮಣ ದೇವರಲ್ಲಿ ಮಳೆಗಾಗಿ ವಿಶೇಷ ಪ್ರಾರ್ಥನೆ ನಡೆಯುತ್ತದೆ.

    ಮಹಾಪೂಜೆಯ ನಂತರ ಮಧ್ಯಾಹ್ನ 12:30 ಕ್ಕೆ ಸರಿಯಾಗಿ ಶ್ರೀ ದೇವರ ಭಕ್ತರು ಮನೆಯಲ್ಲಿಯೇ ಕುಳಿತು 10 ಬಾರಿ ” ಕಲ್ಯಾಣಾಧ್ಬುತ ಗಾತ್ರಾಯ ಕಾಮಿತಾರ್ಥ ಪ್ರದಾಯಿನೇ| ಶ್ರೀಮದ್ ವೇಂಕಟನಾಥಾಯ ಶ್ರೀನಿವಾಸಾಯತೇ ನಮಃ||” ಎಂಬ ಪ್ರಾರ್ಥನಾ ಶ್ಲೋಕ ಪಠಿಸಿ ಮಳೆಗಾಗಿ ಪ್ರಾರ್ಥಿಸುವಂತೆ ದೇವಾಲಯ ಸಮಿತಿ ಪ್ರಕಟಣೆಯಲ್ಲಿ ಕೋರಿದೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top