• Slide
    Slide
    Slide
    previous arrow
    next arrow
  • ಹುಸೂರು ಹೆಗ್ಗೆರೆ ಕೆರೆ ಅಂಗಳದಲ್ಲಿ ಗಿಡ ನಾಟಿ ಕಾರ್ಯಕ್ಕೆ ಚಾಲನೆ

    300x250 AD

    ಸಿದ್ದಾಪುರ: ತಾಲೂಕಿನ ಹಲಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಸೂರು ಹೆಗ್ಗೆರೆ ಕೆರೆ ಅಂಗಳದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಸಿದ್ದಾಪುರ ಹಾಗೂ ಹುಸೂರು ಊರ ಕಮಿಟಿ ಆಶ್ರಯದಲ್ಲಿ ಗಿಡ ನಾಟಿ ಕಾರ್ಯಕ್ರಮ ನಡೆಯಿತು.

    ಹಲಗೇರಿ ಗ್ರಾಪಂ ಅಧ್ಯಕ್ಷೆ ಮೋಹಿನಿ ನಾಯ್ಕ ಗಿಡ ನೆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯ ರಮೇಶ ಹೆಗಡೆ ಹಾರ್ಸಿಮನೆ ಮಾತನಾಡಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಕೆರೆ ಅಭಿವೃದ್ಧಿ ಸಮಿತಿ ಹಾಗೂ ಸ್ಥಳೀಯರ ಸಹಕಾರದೊಂದಿಗೆ ಕೆರಯಲ್ಲಿನ ಹೂಳನ್ನು ತೆಗೆದಿದ್ದರಿಂದ ಇಂದು ಕೆರೆಯಲ್ಲಿ ನೀರು ನಿಂತಿದೆ. ಕೆರೆಯ ಶುಚಿತ್ವ ಹಾಗೂ ನೀರಿನ ಬಳಕೆಯನ್ನು ಗ್ರಾಮಸ್ಥರು ಸರಿಯಾಗಿ ನಿರ್ವಹಿಸಬೇಕು. ಕೆರೆ ಏರಿಯ ಮೇಲೆ ನೆಟ್ಟ ಗಿಡದ ರಕ್ಷಣೆ ಮಾಡುವುದು ಮುಖ್ಯ ಎಂದರು.
    ತಾಲೂಕು ಯೋಜನಾಧಿಕಾರಿ ಪ್ರಭಾಕರ ನಾಯ್ಕ ಅವರು ಗಿಡ ನೆಡುವ ಉದ್ದೇಶವನ್ನು ವಿವರಿಸಿದರು. ಗ್ರಾಪಂ ಉಪಾಧ್ಯಕ್ಷ ಪರಮೇಶ್ವರ ಗೌಡ, ಸದಸ್ಯೆ ಸುಶೀಲಾ ನಾಯ್ಕ, ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ನಾರಾಯಣ ನಾಯ್ಕ, ಊರ ಕಮೀಟಿ ಅಧ್ಯಕ್ಷ ವಸಂತ ನಾಯ್ಕ, ಗಣಪತಿ ನಾಯ್ಕ, ಊರಿನ ಹಿರಿಯರಾದ ಮಂಜುನಾಥ ನಾಯ್ಕ, ಕೆರೆ ಸಮಿತಿ ಕಾರ್ಯದರ್ಶಿ ಪ್ರಕಾಶ ನಾಯ್ಕ, ಶೌರ್ಯ ತಂಡದ ಸಂಯೋಜನ ಚಂದ್ರಶೇಖರ ಹಾಗೂ ಗ್ರಾಮಸ್ಥರಿದ್ದರು.

    300x250 AD

    ಇದೇ ಸಂದರ್ಭದಲ್ಲಿ ನೂರಕ್ಕೂ ಹೆಚ್ಚು ವಿವಿಧ ಜಾತಿಯ ಹಣ್ಣಿನ ಹಾಗೂ ಹೂವಿನ ಗಿಡಗಳನ್ನು ನೆಡಲಾಯಿತು. ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ಮೇಲ್ವಿಚಾರಕ ಮಹಾದೇವ ಬಿ, ಮೇಲ್ವಿಚಾರಕಿ ಪೂರ್ಣಿಮಾ, ಸೇವಾಪ್ರತಿನಿಧಿಗಳಾದ ಮಧುಮತಿ, ಭಾರತಿ, ಪಲ್ಲವಿ ಇತರರಿದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top