Slide
Slide
Slide
previous arrow
next arrow

ಕರ್ನಾಟಕ ಸಂಘದ ನೂತನ ಅಧ್ಯಕ್ಷರಾಗಿ ಯು.ಎಸ್.ಪಾಟೀಲ್

300x250 AD

ದಾಂಡೇಲಿ: ನಗರದ ಕರ್ನಾಟಕ ಸಂಘದ ನೂತನ ಅಧ್ಯಕ್ಷರಾಗಿ ನಿವೃತ್ತ ಪ್ರಾಚಾರ್ಯರು ಹಾಗೂ ಹಿರಿಯ ಪತ್ರಕರ್ತರಾದ ಯು.ಎಸ್.ಪಾಟೀಲ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಕರ್ನಾಟಕ ಸಂಘದ ಉಪಾಧ್ಯಕ್ಷರಾಗಿ ವೆಸ್ಟ್ಕೋಸ್ಟ್ ಕಾಗದ ಕಾರ್ಖಾನೆಯ ಸಾರ್ವಜನಿಕ ಸಂಪರ್ಕಾಧಿಕಾರಿ ರಾಜೇಶ್ ತಿವಾರಿ ಮತ್ತು ನಿಕಟಪೂರ್ವ ಕಾರ್ಯದರ್ಶಿ ಮುರ್ತುಜಾ ಹುಸೇನ್ ಆನೆಹೊಸೂರು ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಮಾಜಿ ನಗರಸಭಾ ಸದಸ್ಯರಾದ ಕೀರ್ತಿ ಗಾಂವಕರ ಮತ್ತು ಸಹ ಕಾರ್ಯದರ್ಶಿಯನ್ನಾಗಿ ಸಾಮಾಜಿಕ ಚಿಂತಕ ಎಸ್.ಎಸ್.ಕುರ್ಡೇಕರ್ ಅವರನ್ನು ಅವರನ್ನು ಆಯ್ಕೆ ಮಾಡಲಾಯ್ತು. ಖಜಾಂಚಿಯಾಗಿ ರಾಜಶೇಖರ್ ಕುಂಬಾರ ಅವರನ್ನು ಪುನರಾಯ್ಕೆ ಮಾಡಲಾಯಿತು.
ಸಂಘದ ಸದಸ್ಯರುಗಳಾಗಿ ಸುರೇಶ ಕಾಮತ್, ಮೋಹನ ಹಲವಾಯಿ, ರೋಷನ್ ನೇತ್ರಾವಳಿ, ಶ್ರೀಮಂತ ಮದರಿ, ಹನುಮಂತ ಕುಂಬಾರ, ಅನಿಲ ದಂಡಗಲ್, ಅಕ್ಷಯ ಗೋಸಾವಿ, ಆರ್.ಪಿ. ನಾಯ್ಕ, ಆದಪ್ಪ ಕವಡಿಮಠ, ರತ್ನದೀಪಾ, ಡಾ. ತೃಪ್ತಿ ನಾಯಕ ಆಯ್ಕೆಗೊಂಡರು. ಸಲಹಾ ಸಮಿತಿಯ ಅಧ್ಯಕ್ಷರಾಗಿ ಬಿ.ಎನ್.ವಾಸರೆ, ಡಾ.ಬಿ.ಎಲ್.ಗುಂಡೂರು, ಫಿರೋಜ್ ಫಿರ್ಜಾದೆ ಮತ್ತು ಅಶೋಕ ಪಾಟೀಲ್ ಅವರನ್ನು ಆಯ್ಕೆ ಮಾಡಲಾಯ್ತು. ನಗರದ ಕರ್ನಾಟಕ ಸಂಘದ ಪಂಚಗಾನ ಭವನದಲ್ಲಿ ನಡೆದ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.

300x250 AD
Share This
300x250 AD
300x250 AD
300x250 AD
Back to top