ಶಿರಸಿ: ಇಲ್ಲಿನ ಅಶ್ವಿನಿ ಸರ್ಕಲ್ ಸಮೀಪದ ಅಯೋಧ್ಯಾ ಕಾಲನಿಯಲ್ಲಿ ಉದ್ಯಮಿಯೊಬ್ಬರ ಮನೆಯನ್ನು ಖತರ್ನಾಕ್ ಕಳ್ಳರು ಕನ್ನ ಹಾಕಿದ ದುರ್ಘಟನೆ ಬುಧವಾರ ಮಧ್ಯರಾತ್ರಿ ಶಿರಸಿಯ ನಗರದಲ್ಲಿ ನಡೆದಿದೆ.
ಆಶೀಶ್ ಲೋಕಂಡೆ ಎಂಬುವವರಿಗೆ ಸೇರಿದ ಮನೆ ಇದಾಗಿದ್ದು, ಮನೆಯಲ್ಲಿದ್ದ 97 ಗ್ರಾಮ್ ಚಿನ್ನ, 1 ಕೆ.ಜಿ. 46 ಗ್ರಾಮ್ ಬೆಳ್ಳಿ, ₹ 4,000 ನಗದು ಹಣ ದೋಚಿ ಕಳ್ಳರು ಪರಾರಿಯಾಗಿದ್ದಾರೆ. ಸ್ಥಳಕ್ಕೆ ಶಿರಸಿ ನಗರ ಠಾಣೆಯ ಪೋಲೀಸರು ಭೇಟಿ ನೀಡಿದ್ದು, ಶ್ವಾನದಳದ ತಂಡ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.