• Slide
  Slide
  Slide
  previous arrow
  next arrow
 • ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ

  300x250 AD


  ಹೊನ್ನಾವರ: ತಾಲೂಕಾ ನಾಮಧಾರಿ ನೌಕರರ ಸಂಘದ ವತಿಯಿಂದ ತಾಲೂಕಿನ ನಾಮಧಾರಿ ಸಂಘದ ವಿದ್ಯಾರ್ಥಿನಿಲಯದಲ್ಲಿ 2022-2023ನೇ ಸಾಲಿನ ಎಸ್‌ಎಸ್‌ಎಲ್‌ಸಿಯಲ್ಲಿ ಶೇಕಡಾ 92ಕ್ಕಿಂತ ಹೆಚ್ಚು ಹಾಗೂ ಪಿಯುಸಿಯಲ್ಲಿ ಶೇಕಡಾ 90ಕ್ಕಿಂತ ಹೆಚ್ಚು ಅಂಕ ಪಡೆದ ನಾಮಧಾರಿ ಸಮಾಜದ ಹೊನ್ನಾವರ ತಾಲೂಕಿನ ಮಕ್ಕಳಿಗೆ  ಪ್ರತಿಭಾ ಪುರಸ್ಕಾರ ನಡೆಸಲಾಗುವುದು. ಆರ್ಥಿಕವಾಗಿ ಅತ್ಯಂತ ಬಡ ಕುಟುಂಬದ ಪ್ರತಿಭಾವಂತ 5 ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ನೀಡಲಾಗುವುದು ಎಂದು ನಾಮಧಾರಿ ನೌಕರರ ಸಂಘದ ತಾಲೂಕಾ ಅಧ್ಯಕ್ಷರಾದ ಸುಧೀಶ ನಾಯ್ಕ ಮತ್ತು ಕಾರ್ಯದರ್ಶಿಗಳಾದ ಎಂ.ಜಿ.ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  ಈ ಪ್ರತಿಭಾ ಪುರಸ್ಕಾರಕ್ಕೆ ಅರ್ಹ ನಾಮಧಾರಿ ಸಮಾಜದ ವಿದ್ಯಾರ್ಥಿಗಳು ತಮ್ಮ ಅರ್ಜಿಯ ಜೊತೆಗೆ ಅಂಕಪಟ್ಟಿ ಮತ್ತು ಆಧಾರ ಕಾರ್ಡನ ನಕಲು ಪ್ರತಿಯನ್ನು ಲಗತ್ತಿಸಿ ನೀಡುವುದು. ಹೆಚ್ಚಿನ ಮಾಹಿತಿಗಾಗಿ ಸುಧೀಶ ನಾಯ್ಕ Tel:+919448530726 ,ಎಂ.ಜಿ.ನಾಯ್ಕ Tel:+919480211578, ರಾಜಕುಮಾರ ಟಿ.ನಾಯ್ಕTel:+919448934039, ಕಿಶೋರ ನಾಯ್ಕ Tel:+917892499408 ಇವರನ್ನು  ಸಂಪರ್ಕಿಸಬಹುದಾಗಿದೆ. ತಮ್ಮ ನಿಗದಿತ  ಅರ್ಜಿಯನ್ನು ಸುಧೀಶ ನಾಯ್ಕ ತಾಲೂಕಾ ಪಂಚಾಯತ ಕಾರ್ಯಾಲಯ ಹೊನ್ನಾವರದಲ್ಲಿ ಸಲ್ಲಿಸಬಹುದಾಗಿದೆ.

  300x250 AD
  Share This
  300x250 AD
  300x250 AD
  300x250 AD
  Leaderboard Ad
  Back to top