• Slide
    Slide
    Slide
    previous arrow
    next arrow
  • ಅತಿಥಿ ಶಿಕ್ಷಕರ ಬೇಡಿಕೆಗಳ ಈಡೇರಿಕೆಗೆ ಆಗ್ರಹ: ಮನವಿ ಸಲ್ಲಿಕೆ

    300x250 AD

    ಹಳಿಯಾಳ: ಅತಿಥಿ ಶಿಕ್ಷಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪಟ್ಟಣದ ತಹಶೀಲ್ದಾರ್ ಹಾಗೂ ಶಾಸಕ ಆರ್.ವಿ.ದೇಶಪಾಂಡೆ ಅವರಿಗೆ ಮನವಿ ಸಲ್ಲಿಸಿದರು.

    ಮನವಿಯಲ್ಲಿ ಕಳೆದ 11- 12 ವರ್ಷಗಳಿಂದ ಕಡಿಮೆ ವೇತನ, ಸೇವಾ ಭದ್ರತೆ ಸೇರಿ ಯಾವುದೇ ರೀತಿಯ ಸೌಲಭ್ಯಗಳಿಲ್ಲದೆ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದಕಾರಣ ಶೀಘ್ರದಲ್ಲೇ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದ್ದಾರೆ.

    ಪ್ರತಿವರ್ಷ ನೇಮಕಾತಿ ಪ್ರಕ್ರಿಯೆಯಲ್ಲಿ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳುವಾಗ ಸೇವಾ ಹಿರಿತನವನ್ನು ಪರಿಗಣಿಸಿ ಮೊದಲ ಆದ್ಯತೆ ಕೊಡುವುದು ಮತ್ತು ಮೆರಿಟ್ ಪದ್ಧತಿ ತೆಗೆದು ಹಾಕುವುದು, ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಅತಿಥಿ ಶಿಕ್ಷಕ/ಶಿಕ್ಷಕರಿಗೆ ಸೇವಾ ಭದ್ರತೆಯನ್ನು ನೀಡಬೇಕು. ಸರಕಾರಿ ಶಿಕ್ಷಕರಂತೆ ಮಧ್ಯಂತರ ರಜೆ ಮತ್ತು ಮಾರ್ಚ್ ತಿಂಗಳ ಬೇಸಿಗೆ ರಜೆಯಲ್ಲಿಯೂ ಸಹ 12 ತಿಂಗಳ ವೇತನವನ್ನು ನೀಡುವುದರ ಜೊತೆಗೆ ಸೇವೆಯಲ್ಲಿ ಮುಂದುವರೆಸಿ ನೇಮಕಾತಿಯಲ್ಲಿ 5 ಕೃಪಾಂಕ ನೀಡಬೇಕು.

    300x250 AD

    ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ವೇತನವನ್ನು ಹೆಚ್ಚಿಸುವುದು ಮತ್ತು ಸುಪ್ರೀಮ್‌ಕೋರ್ಟ್ ಆದೇಶದಂತೆ ಸಮಾನ ಕೆಲಸಕ್ಕೆ ಸಮಾನ ವೇತನ ಎನ್ನುವ ಆದೇಶದ ಬಗ್ಗೆ ಗೌರವಿಸಿ ನ್ಯಾಯ ಒದಗಿಸಬೇಕು. 5.ಅತಿಥಿ ಶಿಕ್ಷಕರಿಗೆ ದೆಹಲಿ, ಹರಿಯಾಣ, ಪಂಜಾಬ ಮತ್ತು ಉತ್ತರ ಪ್ರದೇಶ ಸರ್ಕಾರ ಕೈಗೊಂಡ ನಿರ್ಣಯಗಳನ್ನು ನಮ್ಮ ಸರ್ಕಾರವು ಕೈಗೊಂಡು ಅತಿಥಿ ಶಿಕ್ಷಕರನ್ನ ಖಾಯಂಗೊಳಿಸಬೇಕು. ಪ್ರತಿ ವರ್ಷ ಸೇವೆಸಲ್ಲಿಸಿದ ಅತಿಥಿ ಶಿಕ್ಷಕ/ ಶಿಕ್ಷಕಿಯರಿಗೆ ಆಯಾ ಶಾಲೆಗಳಲ್ಲಿ ಸೇವಾ ದೃಢೀಕರಣ ಪತ್ರವನ್ನು ನೀಡಬೇಕು. ಅತಿಥಿ ಶಿಕ್ಷಕರು ಸೇವೆ ಸಲ್ಲಿಸುತ್ತಿರುವಾಗ ಆಕಸ್ಮಿಕ ಅವಘಡಗಳು ಸಂಭವಿಸಿ ಜೀವಕ್ಕೆ ತೊಂದರೆಯಾದರೆ ಅಂತಹ ಕುಟುಂಬಕ್ಕೆ ಪರಿಹಾರ ಧನ ಅಥವಾ ಜೀವ ವಿಮಾ ಯೋಜನೆಯನ್ನು ಕಲ್ಪಿಸುವುದು.
    ಪ್ರತಿ ತಿಂಗಳಿಗೆ ಸರಿಯಾಗಿ ವೇತನವನ್ನು ಮಾಡಬೇಕು. ಅತಿಥಿ ಶಿಕ್ಷಕರ ಬ್ಯಾಂಕಖಾತೆಗೆ ನೇರವಾಗಿ ಜಮಾ ಮಾಡಬೇಕು. ಅತಿಥಿ ಶಿಕ್ಷಕ ಎಂಬ ಪದವನ್ನು ತೆಗೆದುಹಾಕಿ ಗೌರವ ಶಿಕ್ಷಕ ಎಂದು ನಮೂದಿಸಬೇಕು. ಖಾಯಂ ಶಿಕ್ಷಕರಂತೆ ನಮಗೂ ಕೂಡ ಸಮಾನ ಸ್ಥಾನಮಾನ ಹಾಗೂ ವಿವಿಧ ತರಬೇತಿಗಳಿಗೆ ಅವಕಾಶ ನೀಡಬೇಕು, ಮತ್ತು ಶಿಕ್ಷಕರ ಹಾಜರಾತಿಯಲ್ಲಿ ಅತಿಥಿ ಶಿಕ್ಷಕರ ಹಾಜರಾತಿ ಸೇರ್ಪಡೆಗೊಳಿಸಬೇಕು ಎಂದು ಆಗ್ರಹಿಸಲಾಗಿದೆ.
    ಈ ಸಂದರ್ಭದಲ್ಲಿ ಪ್ರಮುಖರಾದ ಹನುಮಂತ ಎಚ್.ಎಸ್., ಚಿತ್ರಲೇಖ ಕೆ., ಸುಬ್ರಮಣ್ಯ ಸೇರಿ ಹಲವರು ಇದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top