Slide
Slide
Slide
previous arrow
next arrow

ಕ್ರೀಡಾಕೂಟ: ಇಂದಿರಾಗಾಂಧಿ ವಸತಿ ಶಾಲೆ ವಿದ್ಯಾರ್ಥಿಗಳ ಸಾಧನೆ

300x250 AD


ಅಂಕೋಲಾ: ವಲಯ ಮಟ್ಟದ ಪ್ರಾಥಮಿಕ ವಿಭಾಗದ ಕ್ರೀಡಾಕೂಟ ಇತ್ತೀಚಿಗೆ ನಡೆಯಿತು. ಕ್ರೀಡಾಕೂಟದ ಗುಂಪು ವಿಭಾಗದಲ್ಲಿ ವಸತಿ ಶಾಲೆಯ ಹೆಣ್ಣು ಮಕ್ಕಳ ತಂಡ 100*4=ರೀಲೆಯಲ್ಲಿ ಪ್ರಥಮ, ಹೆಣ್ಣು ಮಕ್ಕಳ ಖೋ ಖೋ ತಂಡ ಪ್ರಥಮ, ಯೋಗಾಸನ ಹೆಣ್ಣು ಮಕ್ಕಳ ತಂಡ ಪ್ರಥಮ ಹಾಗೂ ಬಾಲಕರ ಯೋಗಾಸನ ತಂಡ ಪ್ರಥಮ, ವಾಲಿಬಾಲ್ ಬಾಲಕರ ತಂಡ ದ್ವಿತೀಯ ಸ್ಥಾನ ಪಡೆದುಕೊಂಡರು.

ವೈಯಕ್ತಿಕ ವಿಭಾಗದಲ್ಲಿ ಸವಿತಾ ಕೊಕರೆ 200 ಮೀಟರ್ ಓಟ ಮತ್ತು ಉದ್ದ ಜಿಗಿತದಲ್ಲಿ ತೃತೀಯ, ಚಂದನ ಜಿ 600 ಮೀಟರ್ ಓಟದಲ್ಲಿ ತೃತೀಯ, ಜೀವನ ಹಾವನವರ ಚಕ್ರ ಎಸೆತ ದಲ್ಲಿ ತೃತೀಯ ಹಾಗೂ ಚೆಸ್ ಸ್ಪರ್ಧೆಯಲ್ಲಿ ಸಿಂಚನಾ ನಾಯ್ಕ, ಜ್ಯೋತಿ ಪಾಟೀಲ್, ಸುಜಲ ಗೌಡ ಮೂರನೇ,ನಾಲ್ಕನೇ ಮತ್ತು ಐದನೇ ಸ್ಥಾನ ಪಡೆದುಕೊಂಡು ಉತ್ತಮ ಸಾಧನೆ ಮಾಡಿರುತ್ತಾರೆ.
ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ವಸತಿ ಶಾಲಾ ಪ್ರಾಂಶುಪಾಲರಾದ ವಿನೋದ ಪಿ.ಗಾಂವಕರ ದೈಹಿಕ ಶಿಕ್ಷಣ ಶಿಕ್ಷಕ ಲಲಿತಾ ಗೌಡ ಹಾಗೂ ಎಲ್ಲಾ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಅಭಿನಂದಿಸಿದ್ದಾರೆ

300x250 AD
Share This
300x250 AD
300x250 AD
300x250 AD
Back to top