ಯಲ್ಲಾಪುರ: ಉತ್ತರಕನ್ನಡ ಜಿಲ್ಲೆಯ ಕೆಲವೊಂದು ಕೋಳಿ ಫಾರ್ಮ್ಗಳಲ್ಲಿ ಕೋಳಿಗಳ ಶೀಘ್ರ ಬೆಳವಣಿಗೆಗೆ ಅಪಾಯಕಾರಿ ಔಷಧಿಗಳ ಬಳಕೆ ಮಾಡಿ, ಗ್ರಾಹಕರ ಆರೋಗ್ಯದೊಂದಿಗೆ ಚಲ್ಲಾಟ ಆಡಲಾಗುತ್ತಿದೆ ಎಂದು ವಿಶ್ವ ಕನ್ನಡಿಗರ ರಕ್ಷಣಾ ವೇದಿಕೆ ಯಲ್ಲಾಪುರ ಅಧ್ಯಕ್ಷ ಶಮ್ಶುದ್ದಿನ್ ಮಾರ್ಕರ್ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಕ್ರಮಕ್ಕೆ ಆಗ್ರಹಿಸಿದ್ದಾರೆ.
ಉತ್ತರಕನ್ನಡ ಜಿಲ್ಲೆಯಾದ್ಯಂತ ಫಾರ್ಮ್ ಗಳಲ್ಲಿ ಕೋಳಿ ಸಾಕಾಣಿಕೆ ಮಾಡಲಾಗುತ್ತಿದೆ. ಕೆಲವೊಂದು ಫಾರ್ಮ್ ಗಳಲ್ಲಿ ಕೋಳಿಗಳಿಗೆ ಕೆಮಿಕಲ್ ಮಿಶ್ರಿತ ಔಷಧಿ ಹಾಕಿ 40 ದಿನದಲ್ಲಿ ಶೀಘ್ರವಾಗಿ ಕೋಳಿಗಳು ಕೆಜಿ ಗಟ್ಟಲೆ ಬೆಳೆಯುವಂತೆ ನೋಡಿಕೊಳ್ಳಲಾಗುತ್ತಿದೆ. ಇಂತಹ ಕೋಳಿ ಮಾಂಸ ಸೇವಿಸಿದ ಗ್ರಾಹಕರಿಗೆ ವ್ಯತಿರಿಕ್ತ ತೊಂದರೆ ಆಗಬಹುದಲ್ಲದೆ, ಜನರಿಗೆ ವಿವಿಧ ರೋಗಗಳು ಬರುವ ಸಾಧ್ಯತೆಯಿದೆ. ಸರ್ಕಾರ ಕೋಳಿ ಸಾಕಾಣಿಕೆಗೆ ಸಾಕಷ್ಟು ಸಹಾಯ ದನನೊಇಡುತ್ತಿದೆ. ಆದರೆ, ಈ ಕೋಳಿಗಳು ಹೇಗೆ ಬೆಳೆಸಲಾಗುತ್ತಿದೆ. ಎನ್ನುವುದರ ಬಗ್ಗೆ ಪರಿಶೀಲನೆ ನಡೆಸುವುದಿಲ್ಲ. ಹೀಗಾಗಿ ಮಾಂಸ ಸೇವಿಸಿದ ಜನರ ಮೇಲೆ ಅಡ್ಡ ಪರಿಣಾಮ ಬೀರುವ ಸಾಧ್ಯತೆ ಬಗ್ಗೆ ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಸಂಬಂಧಿಸಿದ ಆರೋಗ್ಯಾಧಿಕಾರಿಗಳು, ಪಶು ವೈದ್ಯರನ್ನು ನೇಮಿಸಿ ಕೋಳಿಗಳ ದೇಹದಲ್ಲಿರು ಅಪಾಯಕಾರಿ ರಸಾಯನಿಕಗಳ ಪತ್ತೆ ಮಾಡಿಸಬೇಕು ಎಂದು ಶಮ್ಶುದ್ಧಿನ್ ಮಾರ್ಕರ್ ತಮ್ಮ ಮನವಿಯಲ್ಲಿ ಜಿಲ್ಲಾಧಿಕಾರಿಗಳಿಗೆ ಆಗ್ರಹಿಸಿದ್ದಾರೆ.