Slide
Slide
Slide
previous arrow
next arrow

ದರ್ಶಿನಿ- ವರ್ಷಿಣಿ ಸಹೋದರಿಯರಿಂದ ಶ್ರಾವಣ ಸಂಗೀತ ಸಂಭ್ರಮ 26ಕ್ಕೆ

300x250 AD

ಅಂಕೋಲಾ: ಸಂಗಮ ಸೇವಾ ಸಂಸ್ಥೆ ಆಶ್ರಯದಲ್ಲಿ ಇದೇ ಬರುವ ಅಗಸ್ಟ್ 26ರಂದು ‘ಎದೆ ತುಂಬಿ ಹಾಡುವೆನು’ ಖ್ಯಾತಿಯ ಅಂಕೋಲಾ ಸಹೋದರಿಯರಾದ ದರ್ಶಿನಿ ಮತ್ತು ವರ್ಷಿಣಿ ಇವರಿಂದ ಶ್ರಾವಣ ಸಂಗೀತ ಸಂಭ್ರಮ ಕಾರ್ಯಕ್ರಮ ನಡೆಯಲಿದೆ.
ಇಲ್ಲಿಯ ಕೇಣಿ ರಸ್ತೆಯಲ್ಲಿರುವ ಶ್ರೀಸತ್ಯಸಾಯಿ ಮಂದಿರದ ಆವಾರದಲ್ಲಿ ಅಂದು ಸಂಜೆ 4 ಗಂಟೆಯಿಂದ ಈ ಕಾರ್ಯಕ್ರಮ ಆರಂಭಗೊಳ್ಳಲಿದೆ. ಅಂಕೋಲಾದ ಈ ಸಹೋದರಿಯರು ಈಗಾಗಲೇ ನಾಡಿನಾದ್ಯಂತ ಹಲವಾರು ಕಾರ್ಯಕ್ರಮಗಳನ್ನು ನೀಡಿ ನಾಡಿನ ಜನತೆಯ ಮನೆ ಮಾತಾಗಿರುತ್ತಾರೆ. ಅಂದಿನ ಕಾರ್ಯಕ್ರಮದಲ್ಲಿ ಭಕ್ತಿಗೀತೆ, ಭಾವಗೀತೆ, ಜಾನಪದ ಗೀತೆಯನ್ನು ಹಾಡಿ ಜನಮನ ರಂಜಿಸಲಿದ್ದಾರೆ. ಅವರಿಗೆ ನಾಡಿನ ನಾಮಾಂಕಿತ ಕೀಬೋರ್ಡ ವಾದಕರಾದ ಚಂದ್ರಶೇಖರ್ ಭಂಡಾರಿ, ತಬಲಾ ಮಾಂತ್ರಿಕರಾದ ಮಧು ಜಿ.ಕುಡಾಲ್ಕರ್ ಅಂಕೋಲಾ, ಪ್ಯಾಡಿಸ್ಟ್ ಸಂತೋಲಿನ್ ಹೊನ್ನಾವರ ಅವರು ಹಿನ್ನೆಲೆ ಸಂಗೀತ ನೀಡಲಿದ್ದಾರೆ.
ಕಾರ್ಯಕ್ರಮದ ಸಂಘಟಕರಾದ ರವೀಂದ್ರ ಎನ್.ಶೆಟ್ಟಿಯವರು ಕಲೆ, ಕಲಾವಿದರು ಮತ್ತು ಸಂಸ್ಕೃತಿಯನ್ನು ಪೋಷಿಸುವ ಉದ್ದೇಶದಿಂದ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದೇವೆ. ಕಾರಣ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಕಲಾಭಿಮಾನಿಗಳು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ವಿನಂತಿಸಿರುತ್ತಾರೆ.

300x250 AD
Share This
300x250 AD
300x250 AD
300x250 AD
Back to top