Slide
Slide
Slide
previous arrow
next arrow

ಇಓ ಕಾರ್ಯವೈಖರಿ ಸರಿಪಡಿಸುವ ಭರವಸೆ ನೀಡಿದ ಡಿಸಿ

300x250 AD

ದಾಂಡೇಲಿ: ತಾಲ್ಲೂಕು ಪಂಚಾಯತಿ ಕಾರ್ಯಾಲಯದಲ್ಲಿ ಹೆಚ್ಚು ಇರದೇ ಇರುವ ಕಾರ್ಯನಿರ್ವಾಹಣಾಧಿಕಾರಿಯವರ ಕಾರ್ಯವೈಖರಿ ಸರಿಪಡಿಸುವ ಬಗ್ಗೆ ಜಿಲ್ಲಾಧಿಕಾರಿ ಗಂಗೂಬಾಯಿ ಭರವಸೆ ನೀಡಿದ್ದಾರೆ.
ತಾಲ್ಲೂಕಿನ ಕೇರವಾಡದ ಕೆರೆ ಒಡೆದು ಅಪಾರ ಪ್ರಮಾಣದ ಹಾನಿಯಾಗಿರುವ ಸಂದರ್ಭದಲ್ಲಿ ಸ್ಥಳಕ್ಕೆ ಭೇಟಿ ನೀಡದೇ ಸ್ಥಳೀಯರ ಆಕ್ರೋಶಕ್ಕೆ ಇಒ ಕಾರಣರಾಗಿದ್ದರು. ತಾಲ್ಲೂಕಾಡಳಿತ ಮತ್ತು ನಗರಾಡಳಿತ ಆಯೋಜಿಸಿದ್ದ ಸ್ವಾತಂತ್ರೋತ್ಸವ ಕಾರ್ಯಕ್ರಮ ಹಾಗೂ ಶಾಸಕರ ಅಧ್ಯಕ್ಷತೆಯಲ್ಲಿ ವೀರಯೋಧರಿಗೆ ಅಭಿನಂದನೆ ಸಲ್ಲಿಸುವ ಕಾರ‍್ಯಕ್ರಮಕ್ಕೆ ಗೈರು ಹಾಜರಾಗಿದ್ದರು.
ದಾಂಡೇಲಿ ಸಣ್ಣ ತಾಲ್ಲೂಕಾಗಿದ್ದು, ಕೇವಲ ನಾಲ್ಕೆ ನಾಲ್ಕು ಗ್ರಾ.ಪಂಚಾಯ್ತುಗಳನ್ನು ಒಳಗೊಂಡ ತಾಲ್ಲೂಕಾಗಿದ್ದರೂ, ತಾಲ್ಲೂಕು ಪಂಚಾಯ್ತು ಕಾರ‍್ಯನಿರ್ವಹಣಾಧಿಕಾರಿಯವರು ಕಾರ‍್ಯಾಲಯದಲ್ಲಿ ಅಪರೂಪ ಎಂಬಂತೆ ಕಾಣಸಿಗುತ್ತಾರೆ. ಮಾಧ್ಯಮದವರು ಸಹ ಕಾರ‍್ಯನಿರ್ವಹಣಾಧಿಕಾರಿಯವರಲ್ಲಿ ಗೌರವಯುತವಾಗಿ ಮಾತನಾಡಿಸಿದಾಗಲೂ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲ ಎಂದು ಮಾಧ್ಯಮದವರೇ ಜಿಲ್ಲಾಧಿಕಾರಿಯವರ ಗಮನಕ್ಕೆ ತಂದರು.

300x250 AD
Share This
300x250 AD
300x250 AD
300x250 AD
Back to top