• Slide
    Slide
    Slide
    previous arrow
    next arrow
  • ಉಮ್ಮಚಗಿಯಲ್ಲಿ ‘ಲಕ್ಷ್ಮಣ ಇನ್ನಷ್ಟು’ ವಿನೂತನ ಕಾರ್ಯಕ್ರಮ

    300x250 AD

    ಯಲ್ಲಾಪುರ: ರಾಮಾಯಣ, ಮಹಾಭಾರತ ದಂತಹ ಮಹಾ ಕಾವ್ಯಗಳು ಸದಾ ನಮ್ಮೊಂದಿಗೆ ಬರುತ್ತವೆ. ನಮ್ಮ ನೋವು ನಲಿವುಗಳಲ್ಲಿ ಒಂದಾಗುತ್ತವೆ. ನಮ್ಮ ಕಷ್ಟ ನಷ್ಟಗಳಲ್ಲಿ ಅವು ಯಾವತ್ತೂ ಹಾಸುಹೊಕ್ಕಾಗಿವೆ. ಸದಾ ನಮ್ಮೊಳಗಿನ ಸಾಕ್ಷ ಪ್ರಜ್ಞೆಯಾಗಿರುತ್ತವೆ ಎಂದು ಯಕ್ಷಗಾನ ಕಲಾವಿದೆ ಚಂದ್ರಕಲಾ ಭಟ್ಟ ಇಡಗುಂದಿ ಹೇಳಿದರು.
    ಅವರು ಉಮ್ಮಚಗಿ ವಿಎಸ್‌ಎಸ್ ಸಭಾಭವನದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಉಮ್ಮಚಗಿ ಮಕ್ಕಳ ಘಟಕ ಆಯೋಜಿಸಿದ್ದ ‘ನಾ ಕಂಡಂತೆ ಲಕ್ಷ್ಮಣ’ ಶೀರ್ಷಿಕೆ ಅಡಿಯಲ್ಲಿ ‘ಲಕ್ಷ್ಮಣ ಇನ್ನಷ್ಟು’ ಎಂಬ ವಿಷಯದಲ್ಲಿ ಮಾತನಾಡುತ್ತಿದ್ದರು. ಮಕ್ಕಳು ಎಲ್ಲ ಮಾತಾಡಿದ್ದಾರೆ. ನಾನು ಇನ್ನೇನೂ ಮಾತಾಡುವುದು ಉಳಿದಿಲ್ಲವಾದರೂ ನಿಮ್ಮ ಆಶಯದಂತೆ ಮಾತಾಡಲೇ ಬೇಕಿದೆ ಎಂದರು.
    ಅದಕ್ಕೂ ಮೊದಲು ಮಕ್ಕಳಾದ ಸನ್ನಿಧಿ ಮಹೇಶ್ ಹೆಗಡೆ, ಪವನ ಸೇವನ, ಶರಜಾ ಭಟ್ಟ, ನವ್ಯಾ ಹೆಗಡೆ, ಸಿಂಧೂರ ಹೆಗಡೆ, ಪರ್ಣಿಕಾ ಹೆಗಡೆ, ಪ್ರೇರಣಾ ಭಟ್ಟ, ದೀಪಿಕಾ ಭಟ್ಟ, ಅವನಿ ಭಟ್ಟ, ಸಾತ್ವಿಕ್ ಹೆಗಡೆ, ಸುಮಾ ಭಟ್ಟ, ಪ್ರಿಯಾ ಭಟ್ಟ, ಇಂದ್ರಾಣಿ ಭಟ್ಟ, ತೇಜಸ್ವಿ ಗಾಂವ್ಕಾರ, ಪುಸ್ಕರಾ ಕೆ.ಎನ್ ಮೊದಲಾದವರು ಲಕ್ಷ್ಮಣ ಇನ್ನಷ್ಟು ವಿಷಯದ ಬಗ್ಗೆ ಮಾತನಾಡಿದರು.
    ಕರ್ನಾಟಕ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ರಾಜ್ಯ ಸಂಘಟನಾ ಕಾರ್ಯದರ್ಶಿ ನಾರಾಯಣ ಶೇವಿರೆ ಅವಲೋಕನ ನುಡಿಗಳನಾಡಿದರು. ರಾಜ್ಯ ಕಾರ್ಯದರ್ಶಿ ರಘನಂದನ ಭಟ್ಟ, ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಂ ಜಿ ಭಟ್ಟ ಸಂಕದಗುAಡಿ, ಪ್ರಮುಖರಾದ ರಾಮಕೃಷ್ಣ ಹೆಗಡೆ ಕನೇನಳ್ಳಿ, ಕವಯತ್ರಿ ಸುಜಾತಾ ಹೆಗಡೆ ಕಾಗಾರಕೊಡ್ಲು ಮುಂತಾದವರು ಉಪಸ್ಥಿತರಿದ್ದರು. ವಾಣಿ ಹೆಗಡೆ ಸ್ವಾಗತಿಸಿ, ನಿರ್ವಹಿಸಿ, ಪುಸ್ಕರಾ ಕೆ.ಎನ್. ವಂದಿಸಿದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top